5 ದಿನದ ಅಂತರದಲ್ಲಿ ಒಂದೇ ಕುಟುಂಬದ ಮೂವರು ಕೊರೊನಾಗೆ ಬಲಿ

1 min read

ಮೈಸೂರು: ಮೈಸೂರಿನಲ್ಲಿ ಕೊರೊನಾ‌ ಮರಣ ಮೃದಂಗ ಮುಂದುವರಿದಿದ್ದು ಒಂದೇ ಕುಟುಂಬದ ಮೂವರು ಕೊರೊನಾಗೆ ಬಲಿಯಾಗಿದ್ದಾರೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಕಣಗಲ್ ಗ್ರಾಮದಲ್ಲಿ ಘಟನೆ ನಡೆದಿದೆ. 5 ದಿನದ ಅಂತರದಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಮೃತಪಟ್ಟಿದ್ದಾರೆ.

ಅಣ್ಣಯ್ಯ 75, ಅಣ್ಣಯ್ಯ ಪುತ್ರ ತಮ್ಮೇಗೌಡ 50, ತಮ್ಮೇಗೌಡ ಪತ್ನಿ ಸುಮ 38 ಮೃತ ದುರ್ದೈವಿಗಳು‌. ಇವರಿಗೆ ನಾಲ್ಕು ದಿನದ ಹಿಂದೆ ಪಾಸಿಟಿವ್ ಆಗಿತ್ತು. ಅಣ್ಣಯ್ಯ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ತಮ್ಮೇಗೌಡ ಸುಮ‌ ಇಬ್ಬರನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದ ಆಸ್ಪತ್ರೆಯಲ್ಲಿ ದಂಪತಿ ಸಾವಿಗೀಡಾಗಿದ್ದಾರೆ.

ಅಣ್ಣಯ್ಯ ಮೊದಲು‌ ಮೃತರಾಗಿದ್ದಾರು, ಅದಾದ ಬಳಿಕ ತಮ್ಮೇಗೌಡ ಸಾವು. ಕೊನೆಗೆ ಪತ್ನಿ ಸುಮಾ ಸಹಾ ಸಾವು. ಸದ್ಯ ಮನೆಯಲ್ಲಿ ಇಬ್ಬರು ಮಕ್ಕಳಿದ್ದಾರೆ(22 ವರ್ಷದ ಮಗಳು, 20 ವರ್ಷದ ಮಗ).

About Author

Leave a Reply

Your email address will not be published. Required fields are marked *