ಮುಂದಿನ ವರ್ಷ ರಾಜ್ಯದಲ್ಲಿ 5G ಇಂಟರ್ನೆಟ್ ಸೇವೆ!
1 min read4g ಅಬ್ಬಾಬ್ಬಾ ಇದರ ಸ್ಪೀಡ್ ಸಖತ್ ಆಗಿದೆ. ಆದರೆ 5G ಇದಿದ್ರೆ ಇನ್ನು ಚೆನ್ನಾಗಿರೋದು. ಆದ್ರೆ ಅದು ಯಾವಾಗ ಬರುತ್ತೆ ಎನ್ನುವವರಿಗೆ ಭಾರತ ದೂರ ಸಂಪರ್ಕ ಇಲಾಖೆ ಸಂತಸದ ಸುದ್ದಿ ಕೊಟ್ಟಿದ್ದು ಇನ್ನೊಂದು ವರ್ಷದಲ್ಲಿ ಇದರ ನೆಟ್ವರ್ಕ್ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದೆ.
2022ರ ವೇಳೆಗೆ 5g ಇಂಟರ್ನೆಟ್ ಸ್ಪೀಡ್ ಜನರ ಮೊಬೈಲ್‌ಗಳಿಗೆ ಲಭ್ಯವಾಗಲಿದೆ ಎಂದು ತಿಳಿಸಿದ್ದು ಇದರಿಂದ ಗ್ರಾಹಕರಿಗೆ ಮತ್ತಷ್ಟು ಅನುಕೂಲ ಆಗಲಿದೆ ಎನ್ನಲಾಗಿದೆ.
ರಾಜ್ಯಕ್ಕು ಸಿಗಲಿದೆ 5ಜಿ ಸೇವೆ
ದೇಶದ ಪ್ರಮುಖ ನಗರಗಳಿಗೆ ಮಾತ್ರ ಫೈವ್ ಜಿ ಇಂಟರ್ ನೆಟ್ ಸೇವೆ ಇರಲಿದ್ದು, ನಮ್ಮ ರಾಜ್ಯದ ಬೆಂಗಳೂರು, ದೆಹಲಿ, ಮುಂಬೈ, ಅಹಮದಾಬಾದ್, ಚಂಡಿಗಡ್, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್ನಾಗರ, ಕೊಲ್ಕತ್ತಾ, ಲಕ್ನೋ ಹಾಗೂ ಪುಣೆ ನಗರದಲ್ಲಿ ಆರಂಭಿಕ ಹಂತದಲ್ಲಿ 5 ಜಿ ಇಂಟರ್ ನೆಟ್ ಸೇವೆ ದೊರೆಯಲಿದೆಯಂತೆ.
ಈಗಾಗಲೇ ನಮ್ಮ ಭಾರತದಲ್ಲಿ ಪ್ರಮುಖವಾಗಿ ಏರ್‌ಟೆಲ್, ಜಿಯೋ ಹಾಗೂ ವಿಐ ಕಂಪನಿಗಳು ಹೆಚ್ಚು ಗ್ರಾಹಕರನ್ನು ಹೊಂದಿದೆ. ಆದರೆ ಯಾವ ಕಂಪನಿ ಮೊದಲಿಗೆ 5ಜಿ ಇಂಟರ್‌ನೆಟ್ ಸೇವೆ ಸಿಗಲಿದೆ ಎಂಬುದೇ ಯಕ್ಷ ಪ್ರಶ್ನೆ.
ನನ್ನೂರು ಮೈಸೂರು ಟೀ..