ಛತ್ತೀಸ್‌ಘಡ್ ಯುವಕನಿಂದ 18 ಸಾವಿರ KM ಸೈಕಲ್ ಯಾತ್ರೆ
1 min readಮೈಸೂರು: ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾದ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಕಲ್ಪನೆಯ ಸುಮಾರು 18 ಸಾವಿರ ಕಿಲೋಮೀಟರ್ ಸೈಕಲ್ ಯಾತ್ರೆಯನ್ನು ಛತ್ತೀಸ್‌ಘಡ್ ನ ಸೂರಜ್ ಜಿಲ್ಲೆಯ BJP ಕಾರ್ಯಕರ್ತ ರಾಜು ಕುಮಾರ್ ರಾಜವಾಡೆ ಅವರು ನಾಲ್ಕೂವರೆ ಸಾವಿರ ಕಿಲೋಮೀಟರ್ ಸೈಕಲ್ ಯಾತ್ರೆಯನ್ನು ಪೂರ್ಣಗೊಳಿಸಿ ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ ಮುಖಾಂತರ ಕರ್ನಾಟಕದ ಮೈಸೂರು ನಗರಕ್ಕೆ ಆಗಮಿಸಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.
ನಾಳೆಯಿಂದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ, ಬಿಹಾರ್, ಉತ್ತರ ಪ್ರದೇಶ್, ಉತ್ತರಾಂಚಲ್, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ, ಲಡಾಕ್, ಪಂಜಾಬ್, ಹರಿಯಾಣ,ದ ಮೂಲಕ ಆಗಸ್ಟ್ 15ರಂದು ದೆಹಲಿಯ ಕೆಂಪು ಕೋಟೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಸೈಕಲ್ ಯಾತ್ರೆಯನ್ನು ಮುಕ್ತಾಯಗೊಳಿಸಲಿದ್ದಾರೆ. ಇವರು ಸರಿಸುಮಾರು 18 ವರ್ಷದ ಯುವಕನಾಗಿದ್ದು ಪಿ.ಯು.ಸಿ.ವ್ಯಾಸಂಗ ಮುಗಿಸಿ ಮೋದಿಯವರ ಕಾರ್ಯ ವೈಕರಿ ಮೆಚ್ಚಿ, ನರೇಂದ್ರ ಮೋದಿಯವರ ಯೋಜನೆಯನ್ನು, ಹಾಗೂ ಅಭಿವೃದ್ಧಿ ಅವರ ಕೆಲಸ ಗಳ ಬಗ್ಗೆ ಸಾರ್ವಜನಿಕರಿಗೆ ಹಾಗೂ ಕಾರ್ಯಕರ್ತರುಗಳಿಗೆ ಅರಿವು ಮೂಡಿಸುವ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಅವರು ಇಂದು ಮೈಸೂರು ನಗರಕ್ಕೆ ಆಗಮಿಸಿದ ಸಂಧರ್ಭದಲ್ಲಿ ಮೈಸೂರು ನಗರದ ಭಾಜಪ ಕಚೇರಿಯ ಬಳಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಜೋಗಿ ಮಂಜು, ಮಾಜಿ ನಗರ ಪಾಲಿಕೆ ಸದಸ್ಯರಾದ ಜಯರಾಮ್, ಮೈಸೂರು ನಗರದ ಮಾಧ್ಯಮ ಸಹ ವಕ್ತಾರ ರಾದ ಕೇಬಲ್ ಮಹೇಶ್ ರವರು ಸ್ವಾಗತಿಸಿದರು.