ಹೆಬ್ಬಾಳು ಕೆರೆಯಲ್ಲಿ ಮೀನುಗಳ ಮಾರಣಹೋಮ!

1 min read

ಹೆಬ್ಬಾಳು ಕೆರೆಯಲ್ಲಿ ಮೀನುಗಳ ಮಾರಣಹೋಮ!

ವರದಿ : ಕೃಷ್ಣ –

ಮೈಸೂರು : ನಗರದ ಪ್ರಸಿದ್ಧ ಕೆರೆಗಳಲ್ಲಿ ಒಂದಾಗಿರುವ ಹೆಬ್ಬಾಳು ಕೆರೆಯಲ್ಲಿದ್ದ ಎಲ್ಲಾ ಮೀನುಗಳು ಸಾವನ್ನಪ್ಪಿದೆ. ಹೆಬ್ಬಾಳು ಕೆರೆಯ ಸುತ್ತಮುತ್ತ ಕೈಗಾರಿಕಾ ಪ್ರದೇಶವೇ ಆವರಿಸಿಕೊಂಡಿದ್ದು, ಕಾರ್ಖಾನೆಯಿಂದ ಹೊರಹೊಮ್ಮುವ ಕೆಮಿಕಲ್ಸ್ , ತ್ಯಾಜ್ಯ ವಸ್ತುಗಳು ನೇರವಾಗಿ ಹೆಬ್ಬಾಳು ಕೆರೆ ಸೇರುವುದರಿಂದ ಕೆರೆಯಲ್ಲಿದ್ದಂತಹ ರಾಶಿ ರಾಶಿ ಮೀನುಗಳು ಸಾವನ್ನಪ್ಪಿದೆ. ಕೆರೆಯಲ್ಲಿ ದುರ್ವಾಸನೆ ಬೀರುತ್ತಿದ್ದು ಸಾರ್ವಜನಿಕರಿಗೆ ಮತ್ತು ವಾಯು ವಿಹಾರಿಗಳಿಗೆ ಇರುಸು ಮುರಿಸು ತಂದಿದ್ದು, ಘಟನೆ ತಿಳಿದ ಬಳಿಕ ಮೀನುಗಾರಿಕೆ ಇಲಾಖೆ ಹಾಗೂ ಪರಿಸರ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಮೀನುಗಳ ಸಾವಿಗೆ ಕಾರಣ ಕೈಗಾರಿಕೆಗಳ ಕಲುಷಿತ ನೀರು ಎನ್ನಲಾಗಿದ್ದು, ಸದ್ಯಕ್ಕೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು 2016 ರಲ್ಲಿ ಹದೆಗೆಟ್ಟಿದ್ದಂತಹ ಈ ಹೆಬ್ಬಾಳು ಕೆರೆಯನ್ನು ಇನ್ಫೋಸಿಸ್‌ನ ಮುಖ್ಯಸ್ಥರಾಗಿದ್ದ ಸುಧಾಮೂರ್ತಿಯವರು 98 ಕೋಟಿ ರೂ. ವೆಚ್ಚದಲ್ಲಿ ಪುನರ್ ಜೀವನಗೊಳಿಸಿದ್ದರು. ಪರಿಸರ ಕಾಳಜಿ ಹಾಗೂ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಈ ರೀತಿಯ ಒಳಿತಿನ ಕೆಲಸವನ್ನು ಸುಧಾಮೂರ್ತಿಯವರು ಮಾಡಿದ್ದರು. ಆದರೆ ಮತ್ತೇ ಇದೀಗಾ ಅಕ್ಕಪಕ್ಕದ ಕಾರ್ಖಾನೆಗಳ ಒಂದು ಪ್ರಭಾವದಿಂದಾಗಿ ಕೆರೆ ಹದೆಗೆಡುವುದರ ಜೊತೆಗೆ ಪರಿಸರಕ್ಕೂ ಹಾನಿಯನ್ನುಂಟು ಮಾಡಿದೆ. ಆದಷ್ಟು ಬೇಗ ಕೆರೆಯನ್ನು ನಿರ್ಮಲ ಸ್ಥಿತಿಗೆ ತರಬೇಕೇಂದು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಿದ್ದಾರೆ.

ಇನ್ನು ಕೆರೆ ಸಹಜ ಸ್ಥಿತಿಗೆ ಬರುವ ತನಕ ಸಾರ್ವಜನಿಕರಿಗೆ ಮತ್ತು ವಾಯುವಿಹಾರಿಗಳಿಗೆ ಪ್ರವೇಶ ನಿರ್ಬಂಧಿಸಿದ್ದು, ಕೆರೆ ಹಾಗೂ ಅಲ್ಲಿನ ವಾತವರಣ ಶುಚಿಯಾಗುವ ತನಕ ಹೆಬ್ಬಾಳಿನ ಜನತೆಗೆ ಪ್ರವೇಶವಿಲ್ಲದಂತಾಗಿದೆ. ಅಷ್ಟೊಂದು ಮೀನುಗಳು ಸಾಯಲು ಮುಖ್ಯ ಕಾರಣವೇನು ಎಂಬುದಕ್ಕೆ ಈಗಾಗಲೇ ಪರಿಶೀಲನೆ ಹಾಗೂ ಮೀನಿನ ಸ್ಯಾಂಪಲ್ ಪರೀಕ್ಷೆಗಳು ನಡೆಯುತ್ತಿವೆ. ಇದೇ ತರಹ ಮೈಸೂರು ನಗರದಲ್ಲಿರುವ ಎಲ್ಲಾ ಕೆರೆಗಳಿಗೂ ಈ ತರಹದ ಸಮಸ್ಯೆಗಳು ಎದುರಾದರೇ ಮುಂದಿನ ದಿನಗಳಲ್ಲಿ ಹಲವು ಸಮಸ್ಯೆಗಳು ಎದರಿಸುವುದರ ಜೊತೆಗೆ ಜನರ ಜೀವನ ಶೋಚನೀಯ ಸ್ಥಿತಿ ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ.

ಕೆರೆಗಳ ಉಳಿವಿಗೆ ನಾವು ನೀವು ಬದ್ಧರಾಗಬೇಕು : ಸಾರ್ವಜನಿಕರಾದ ನಾವುಗಳು ಕೂಡ ಕೆರೆಗಳನ್ನು ಉಳಿಸುವಲ್ಲಿ ಮುಖ್ಯ ಪಾತ್ರ ವಹಿಸಬೇಕಾಗುತ್ತದೆ. ಮಲೀನಗೊಳಿಸದಂತೆ, ತ್ಯಾಜ್ಯ ವಸ್ತುಗಳನ್ನು ಕೆರೆಗಳ ಅಕ್ಕಪಕ್ಕ ಬೀಸಾಡದಂತೆ ಗಮನವಹಿಸಿ ಮೊದಲು ನಮ್ಮ ಸುತ್ತಮುತ್ತಲಿನ ವಾತವರಣವನ್ನು ನಾವು ಕಾಪಾಡಬೇಕಾಗುತ್ತದೆ.

ಮೀನುಗಳ ಸಾವು ಸಹಜ ಸಾವಲ್ಲ :

  • ಮೀನುಗಳ ಸಾವಿಗೆ ಕಾರ್ಖಾನೆಗಳೇ ಮೂಲ ಕಾರಣವಾಗಿದೆ ಎನ್ನಲಾಗ್ತಿದೆ. ಕಾರ್ಖಾನೆಯ ತ್ಯಾಜ್ಯ ವಸ್ತುಗಳ ವಿಲೇವಾರಿ ಸರಿಯಾದ ಕ್ರಮದಲ್ಲಾಗದೇ ನೇರವಾಗಿ ಕೆರೆ ತಲುಪುವುದರಿಂದ ನೀರು ಕಲುಷಿತಗೊಂಡು ವಿಷಕಾರಿಯಾಗಿ ಮಾರ್ಪಾಡು ಹೊಂದುತ್ತಿದೆ. ಇದರಿಂದಾಗಿ ಮೀನುಗಳು ಸಾವನ್ನಪ್ಪಿವೆ.

ಹೆಬ್ಬಾಳು ಕೆರೆ ಯಾರ ಹೊಣೆ :

  • ಹೆಬ್ಬಾಳು ಕೆರೆಗೆ ನಿರ್ವಹಣೆ ಜವಬ್ದಾರಿಯ ಕೊರತೆ ಇದೆ, ಹೀಗಾಗಿ ಕೆರೆ ಹದೆಗೆಡಲು, ಸಹಸ್ರಾರು ಮೀನುಗಳು ಸಾವನ್ನಪ್ಪಲೂ ಇದು ಕೂಡ ಒಂದು ಮೂಲ ಕಾರಣವಾಗಿದೆ ಎನ್ನಲಾಗಿದೆ. ಸದ್ಯ ಅಧಿಕಾರಿಗಳು ಕೆರೆಯ‌ ನೀರಿನ ಹಾಗೂ ಮೃತ ಮೀನಿನ ಸ್ಯಾಂಪಲ್ ಲ್ಯಾಬ್‌ಗೆ ಕಳುಹಿಸಿದ್ದು ರಿಪೋರ್ಟ್ ಬಳಿಕವೇ ಘಟನೆಗೆ ಸೂಕ್ತ ಕಾರಣ ತಿಳಿಯಲಿದೆ.

About Author

Leave a Reply

Your email address will not be published. Required fields are marked *