ಟೆಸ್ಟಿಂಗ್ ಕಡಿಮೆ ಮಾಡಿದ್ದು ಸೋಂಕು ಹರಡಲು ಕಾರಣ ಆಯ್ತು: ಪ್ರತಾಪ್‌ಸಿಂಹ
1 min readಮೈಸೂರು: ಟೆಸ್ಟಿಂಗ್ ಕಡಿಮೆ ಮಾಡಿದ್ದು ಸೋಂಕು ಹರಡಲು ಕಾರಣ ಆಯ್ತು.ಇದನ್ನ ಮುಕ್ತವಾಗಿ ನಾನು ಒಪ್ಪಿಕೊಳ್ಳುತ್ತೆನೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್‌ಸಿಂಹ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಒಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾವು ಟೆಸ್ಟ್ ಕಡಿಮೆ ಮಾಡಬಾರದಿತ್ತು. ಇದು ಸ್ವಲ್ಪ ಸೋಂಕು ಹೆಚ್ಚಾಗಲು ಕಾರಣ ಆಯ್ತು. ನಮ್ಮ ಹಾಗೂ ಜನರ ನಿರ್ಲಕ್ಷ್ಯದಿಂದ ಇದು ನಡೆದಿದೆ. ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಹರಡಿಬಿಟ್ಟಿದೆ. ಇದಕ್ಕೆ ಕೋವಿಡ್ ಮಿತ್ರ ಮೂಲಕ ಪರಿಹಾರ ಹುಡುಕಿದ್ದೇವೆ. ವಾಕ್ಸಿನೆಷನ್ ಬಗ್ಗೆ ಕೂಡ ಜನರಲ್ಲಿ ಗೊಂದಲ ಇತ್ತು. ಇದೇಲ್ಲದರ ಪರಿಣಾಮ ಹಿಂದಿನ ಲಾಕ್‌ಡೌನ್‌ನಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ನಾವು ಪಂಚಸೂತ್ರ ಯೋಜನೆ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದರು.
ಪಾಸಿಟಿವ್ ಬಂದ ಮೇಲೆ ಕಡ್ಡಾಯವಾಗಿ ಕೋವಿಡ್ ಸೆಂಟರ್‌ಗೆ ಬರಬೇಕು. ಬರದೆ ಇದ್ದರೆ ಬಲವಂತವಾಗಿ ಎತ್ತಾಕೊಂಡು ಬರಬೇಕಾಗುತ್ತದೆ. ಹೋಂ ಐಸೋಲೇಷನ್ ಅನ್ನ ಕಡ್ಡಾಯವಾಗಿ ರದ್ದು ಮಾಡ್ತಿವಿ. ಯಾರೇ ಆಗಲಿ ಆಸ್ಪತ್ರೆ ಅಥವ ಕೋವಿಡ್ ಸೆಂಟರ್ ಬರಬೇಕು. ಇನ್ನುಮೇಲೆ ಯಾರು ಸಬೂಬು ಹೇಳುವಂತಿಲ್ಲ ಎಂದು ಹೇಳಿದರು.
ಕೆಲಸ ಮಾಡಿದರೆ ಜನ ನೆನಪಿಸಿಕೊಳ್ತಾರೆ. ಇಲ್ಲವಾದ್ರೆ ಥೂ ಚಿ ಅಂತಾರೆ. ನಮ್ಮಲ್ಲಿ ಶಿಖಾ, ಅಭಿರಾಮ್, ರಂದೀಪ್‌ರಂತಹ ಮೆಲ್ಪಂಕ್ತಿ ಅಧಿಕಾರಿಗಳು ಇಲ್ಲಿ ಕೆಲಸ ಮಾಡಿದ್ದಾರೆ. ಶಿಖಾ ಅವರ ಜೊತೆ ದಸರಾ ಮಾಡಿದ್ವಿ. ರಂದೀಪ್ ಅವರ ಜೊತೆ ಯೋಗ ಡೇ ಮಾಡಿದ್ವಿ. ಅಭಿರಾಮ್ ಜೊತೆ ಕೊರೊನಾ ನಿಯಂತ್ರಣ ಮಾಡಿದ್ವಿ. ಈಗಲೂ ಯಾರೇ ಅಧಿಕಾರಿ ಇದ್ದರೂ ಅವರ ಜೊತೆ ಕೆಲಸ ಮಾಡ್ತಿವಿ. ಅವರು ಬಂದರೂ ಸರಿ ಬರದೆ ಇದ್ದರೂ ಸರಿ ನಾವು ಕೆಲಸ ಮಾಡ್ತಿವಿ. ಟಾಸ್ಕ್‌ಪೋರ್ಸ್ ಸಮತಿ ರಚನೆ ನಂತರ ಸಮಸ್ಯೆಗಳು ಬಗೆಹರಿದಿವೆ ಎಂದು ಮೈಸೂರಿನಲ್ಲಿ ಪ್ರತಾಪ್‌ಸಿಂಹ ಹೇಳಿಕೆ ನೀಡಿದ್ದಾರೆ.