ಮೈಸೂರಿನ ನಿರ್ಗಮಿತ ಡಿಸಿಪಿ ಪ್ರಕಾಶ್ ಗೌಡರಿಗೆ ನಮ್ಮೂರು ನಮ್ಮೋರು ಸೇವಾ ಟ್ರಸ್ಟ್ ಸದಸ್ಯರಿಂದ ಅಭಿನಂದನೆ
1 min readಮೈಸೂರು: ಮಲ್ಲಿಗೆ ನಗರಿಯ ಮನೆ ಮಾತಾಗಿದ್ದ ನಿರ್ಗಮಿತ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೋಲೀಸ್ ಆಯುಕ್ತರಾದ ಶ್ರೀ ಎ ಎನ್ ಪ್ರಕಾಶ್ ಗೌಡ ಅವರಿಗೆ ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಮೈಸೂರು ಮಲ್ಲಿಗೆ ಬಳ್ಳಿಯನ್ನು ನೀಡುವುದರ ಜೊತೆಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುವುದರ ಮೂಲಕ ಬೀಳ್ಕೊಡಲಾಯಿತು.
ಈ ವೇಳೆ ಮಾತನಾಡಿದ ಟ್ರಸ್ಟಿನ ಅಧ್ಯಕ್ಷ ಸತೀಶ್ ಗೌಡ ಕಾನೂನು ಸುವ್ಯವಸ್ಥೆಯ ವಿಭಾಗಕ್ಕೆ ಇದುವರೆಗೂ ಹಲವು ಅಧಿಕಾರಿಗಳು ಬಂದು ಹೋಗಿದ್ದರು ಸಹ ಪ್ರಕಾಶ್ ಗೌಡರು ವಿಭಿನ್ನ ಹಾಗು ವಿಶೇಷವೆನಿಸಿದವರು ಎರಡು ಕೋವಿಡ್ ಅಲೆಯಲ್ಲಿ ಉತ್ತಮ ಹಾಗೂ ಜನಸ್ನೆಹಿ ಕಾನೂನು ಸುವ್ಯವಸ್ಥೆಯನ್ನು ಜಾರಿಗೆ ತಂದು ಸಾಂಸ್ಕೃತಿಕ ನಗರಿಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದರು. ಈಗ ತಮ್ಮ ಸೇವೆಯಿಂದ ವರ್ಗಾವಣೆಗೊಂಡಿರುವ ಶ್ರೀಯುತರು ಇನ್ನು ಉನ್ನತ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸುವಂತಾಗಲಿ ಪದವಿಯಲ್ಲಿ ಪದೋನ್ನತಿಗೊಂಡು ಶೀಘ್ರ ಮೈಸೂರು ಪೋಲೀಸ್ ಆಯುಕ್ತರಾಗಿ ಬರುವಂತೆ ಶುಭ ಹಾರೈಸಲಾಯಿತು.
ಈ ವೇಳೆ ಟ್ರಸ್ಟಿನ ಅಧ್ಯಕ್ಷರಾದ ಸತೀಶ್ ಗೌಡ, ಉಪಾಧ್ಯಕ್ಷ ಕುಮಾರ್ ಗೌಡ, ಕಾರ್ಯದರ್ಶಿ ರವಿ ಎ, ಉದ್ಯಮಿ ಶೇಖರ್, ದಂತ ವೈದ್ಯ ಲೋಕೇಶ್,ಅಭಿಷೇಕ್ ಗೌಡ ಹಾಗು ಶಿವು ಉಪಸ್ಥಿತರಿದ್ದರು.