ಲಾಕ್‌ಡೌನ್ ಉಲ್ಲಂಘನೆ- ನಂಜುಂಡನ ಪೂಜೆಗೆ ಬಂದ ಭಕ್ತರು!
1 min readಮೈಸೂರು : ನಂಜನಗೂಡಿನ ನಂಜುಂಡೇಶ್ವರನ ದೇವಾಲಯಕ್ಕೆ ನೂರಾರು ಭಕ್ತರು ಆಗಮಿಸಿದ್ದು, ದೇವಾಲಯದ ಪ್ರವೇಶಕ್ಕೆ ನಿಷೇಧವಿದ್ದರೂ ದೊಡ್ಡ ಸಂಖ್ಯೆಯಲ್ಲಿ ಭಕ್ತ ಸಮೂಹ ಆಗಮಿಸಿದೆ.
ದೇವಾಲಯದ ಹೊರಭಾಗದಲ್ಲಿ ನಿಂತು ಪೂಜೆ ಪುನಸ್ಕಾರದ ಜೊತೆಗೆ ನಂಜುಂಡನಿಗೆ ನಮಿಸುತ್ತಿದ್ದಾರೆ ಭಕ್ತರು. ಕೊರೊನಾಗೆ ಕ್ಯಾರೇ ಎನ್ನದ ನಂಜನಗೂಡಿನ ನಂಜುಂಡೇಶ್ವರನ ಭಕ್ತರು. ಕೊರೊನಾವನ್ನು ಲೆಕ್ಕಿಸದೇ ನಂಜನಗೂಡಿನತ್ತ ಧಾವಿಸುತ್ತಿರೋದು ಆತಂಕ ತಂದಿದೆ. ಕಾರಣ ಕೋವಿಡ್ ಹಿನ್ನಲೆಯಲ್ಲಿ ದೇವಾಲಯದ ಬಾಗಿಲು ಬಂದ್ ಮಾಡಿ ನಂಜನಗೂಡಿಗೆ ಆಗಮಿಸುತ್ತಿರುವ ನೂರಾರು ಭಕ್ತರು.
ದೇವಾಲಯದ ಹೊರಗಿನಿಂದಲೇ ಪೂಜೆ ಪುನಸ್ಕಾರಗಳನ್ನು ಪೂರೈಸುತ್ತಿದ್ದಾರೆ. ಕಪಿಲಾ ನದಿಯಲ್ಲಿ ಮಿಂದೇಳುತ್ತಿರುವ ಭಕ್ತವೃಂದ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ. ಇಂದು ಸೋಮವಾರ ಆಗಿರುವ ಹಿನ್ನಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ನಂಜನಗೂಡಿಗೆ ಆಗಮಿಸುತ್ತಿದ್ದು, ಮುಡಿಸೇವೆ, ಉರುಳುಸೇವೆ ಸೇರಿದಂತೆ ಮತ್ತಿತರ ಸೇವೆಗಳಲ್ಲಿ ಭಾಗಿಯಾಗಿದ್ದಾರೆ.
ಇನ್ನು ತಂಡೋಪತಂಡವಾಗಿ ಭಕ್ತರು ಆಗಮಿಸುತ್ತಿದ್ದರೂ ತಾಲೂಕು ಆಡಳಿತ ಮೌನವಹಿಸಿದ್ದು, ನಂಜನಗೂಡು ತಾಲ್ಲೂಕು ಆಡಳಿತದ ನಿರ್ಲಕ್ಷ ಧೋರಣೆಗೆ ಸಾಕ್ಷಿಯಾಗಿದೆ ಅಂದ್ರೆ ತಪ್ಪಲ್ಲ