ನಾಡಿನಿಂದ ವಾಪಸ್ ಕಾಡಿಗೆ ಹೊರಟ ಗಜಪಡೆ: ಲಾರಿ ಹತ್ತಲು ಗಲಾಟೆ ಮಾಡಿದ ಅಶ್ವತ್ಥಾಮ!

1 min read

ಮೈಸೂರು: ದಸರಾ ಮಹೋತ್ಸವಕ್ಕಾಗಿ ಎಂಟು ಆನೆಗಳು ಕಾಡಿನಿಂದ ನಾಡಿಗೆ ಬಂದಿದ್ದವು. ಈಗ ಡ್ಯೂಟಿ ಮುಗಿಸಿ ನಾಡಿನಿಂದ ವಾಪಸ್ ಕಾಡಿಗೆ ಹೊರಟಿವೆ. ಅರಣ್ಯ ಇಲಾಖೆ ಗಜಪಡೆಗೆ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಿದೆ.

ದಸರಾ ಗಜಪಡೆಗೆ ಮೈಸೂರು ಅರಮನೆ ಆವರಣದಲ್ಲಿಂದು ಬೀಳ್ಕೊಡುಗೆ ನೀಡಲಾಯ್ತು. ಒಂದೂವರೆ ತಿಂಗಳಿಂದ ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿದ್ದ ಆನೆಗಳು, ಯಶಸ್ವಿಯಾಗಿ ಜಂಬೂ ಸವಾರಿ ಪೂರ್ಣಗೊಳಿಸಿದ್ದವು. ನಿನ್ನೆ ವಿಶ್ರಾಂತಿ ಪಡೆದಿದ್ದ ಆನೆಗಳು, ಇಂದು ವಾಪಸ್ ಕಾಡಿಗೆ ಹೊರಟವು. ಅರಣ್ಯ ಇಲಾಖೆ ಪೂಜೆ ಸಲ್ಲಿಸಿ ಆನೆಗಳಿಗೆ ಬೀಳ್ಕೊಡುಗೆ ನೀಡಿತು.

– ಪುರೋಹಿತ ಪ್ರಹ್ಲಾದ್ ಮೂಲಕ ಗಜಪೂಜೆ ಮಾಡಲಾಯ್ತು. ಬಳಿಕ ಡಿಸಿಎಫ್ ಕರಿಕಾಳನ್ ಪಶು ವೈದ್ಯ ರಮೇಶ್ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಿದ್ರು. ಈ ವೇಳೆ ಮಾತನಾಡಿದ ಡಿಸಿಎಫ್ ಕರಿಕಾಳನ್ ಆನೆಗಳು ದಸರಾವನ್ನ ಯಶಸ್ವಿಯಾಗಿ ನಡೆಸಿವೆ. ಹೀಗಾಗಿ ಆನೆಗಳಿಗೆ ಪೂಜೆ ಸಲ್ಲಿಸಿ ಅವುಳ ಶಿಬಿರಕ್ಕೆ ಕಳುಹಿಸಲಾಗುತ್ತಿದೆ. ಮತ್ತಿಗೋಡು, ರಾಂಪುರ, ದುಬಾರೆ ಶಿಬಿರಗಳಿಗೆ ಕಳುಹಿಸಲಾಗುತ್ತಿದೆ. ಆನೆ ಜೊತೆಗೆ ಬಂದ ಮಾವುತ ಕಾವಾಡಿಗಳಿಗೆ ಸುಮಾರು 50 ಮಂದಿಗೆ ಅರಮನೆ ಆಡಳಿತ ಮಂಡಳಿಯಿಂದ ಪ್ರೋತ್ಸಾಹ ಧನವಾಗಿ ತಲಾ 10 ಸಾವಿರ ರೂಪಗಳನ್ನು ನೀಡಲಾಗಿದೆ ಎಂದ್ರು.

– ಕಳೆದ 35 ದಿನಗಳ ಹಿಂದೆ ಅರಮನೆ ಅಂಗಳ ಕ್ಕೆ ಬಂದಿದ್ದ ಆನೆಗಳನ್ನ ವಿಶೇಷ ಹಾರೈಕೆ ಮಾಡಲಾಗಿತ್ತು. ಮೈಸೂರಿನಲ್ಲಿದ್ದಾಗ ಆನೆಗಳಿಗೆ ಬೇಯಿಸಿದ ಕಾಳು, ತರಕಾರಿ, ಹಸಿ ಸೊಪ್ಪು ಮತ್ತು ಬೆಲ್ಲ- ಭತ್ತದಿಂದ ಮಾಡಿದ ಕುಸುರೆಗಳನ್ನು ನೀಡಲಾಗುತ್ತಿತ್ತು. ನಾಳೆಯಿಂದ ಎಂದಿನಂತೆ ನೈಸರ್ಗಿಕವಾಗಿ ಕಾಡಿನ ಮೇವು ಸವಿಯಲಿವೆ. ಈ ಬಾರಿ ಅಭಿಮನ್ಯು ನೇತೃತ್ವದ ಎಂಟು ಆನೆಗಳನ್ನ ಕರೆತರಲಾಗಿತ್ತು. ಅಭಿಮನ್ಯು ಎರಡನೇ ಬಾರಿಗೆ ಅರಮನೆ ಅಂಗಳದಲ್ಲಿ 750 ಕೆ.ಜಿ.ತೂಕದ ಚಿನ್ನದ ಅಂಬಾರಿಯನ್ನ ಎರಡನೇ ಬಾರಿಗೆ ಯಶಸ್ವಿಯಾಗಿ ಹೊತ್ತು ಸಾಗಿದ‌.ಕೊರೊನಾ ಹಿನ್ನಲೆ ಈ ಬಾರಿ ಅರಮನೆ ಅಂಗಳ ಕ್ಕೆ ದಸರಾ ಜಂಬೂಸವಾರಿಯನ್ನ ಸೀಮಿತಗೊಳಿಸಲಾಗಿತ್ತು. ಎರಡನೇ ಬಾರಿಗೆ ಅಂಬಾರಿ ಮುನ್ನಡೆಸಿದ ಅಭಿಮನ್ಯು ಸಾರಥಿ ವಸಂತ ಅಂಬಾರಿ ಮುನ್ನಡೆಸಲು ಅವಕಾಶ ಸಿಕ್ಕಿದ್ದು ಪುಣ್ಯದ ಕೆಲಸ. ಯಾವುದೇ ತೊಂದರೆ ಇಲ್ದೆ ನಿರ್ವಿಘ್ನವಾಗಿ ದಸರಾ ಯಶಸ್ವಿಯಾಗಲಿ ಎಂದು ಚಾಮುಂಡೇಶ್ವರಿ ಬೇಡಿಕೊಂಡಿದ್ದೆ ಎಂದು ಸಂತಸ ವ್ಯಕ್ತಪಡಿಸಿದ್ರು.

– ಪೂಜೆ, ಫೋಟೋ ಸೆಷನ್, ಅಂತಿಮ ಹಾರೈಕೆ ಎಲ್ಲವನ್ನೂ ಮುಗಿಸಿದ ಆನೆಗಳು ಒಂದೊಂದಾಗಿ ಲಾರಿ ಹತ್ತಿದವು.

ಇನ್ನೂ ಲಾರಿ ಹತ್ತಲು ಗಲಾಟೆ ಮಾಡ್ತಿದ್ದ ಅಶ್ವತ್ಥಾಮನಿಗೆ ಕ್ಯಾಪ್ಟನ್ ಅಭಿಮನ್ಯು ಬುದ್ದಿ ಕಲ್ಸಿ ಲಾರಿ ಏರಿಸಿದ್ದ. ಅಭಿಮನ್ಯು ಗೋಪಾಲಸ್ವಾಮಿ ಮತ್ತಿಗೋಡು ಆನೆ ಶಿಬಿರಕ್ಕೆ, ಅಶ್ವತ್ಥಾಮ ದೊಡ್ಡ ಹರವೆ ಆನೆ ಶಿಬಿರಕ್ಕೆ, ವಿಕ್ರಮ ಧನಂಜಯ ಕಾವೇರಿ ದುಬಾರೆ ಆನೆ ಶಿಬಿರ, ಚೈತ್ರ ಹಾಗೂ ಲಕ್ಷ್ಮಿ ಆನೆ ಬಂಡೀಪುರ ಅರಣ್ಯದ ರಾಮಪುರ ಕ್ಯಾಂಪ್‌ಗೆ ರವಾನೆ ಮಾಡಲಾಯ್ತು. ಇದರೊಂದಿಗೆ ದಸರಾ ಚಟುವಟಿಕೆಗಳು ಬಹುತೇಕ ಮುಕ್ತಾಯವಾಗಿದ್ದು, ಸರಳ ದಸರಾ ಇತಿಹಾಸದ ಪುಟ ಸೇರಿದಂತಾಗಿದೆ.

About Author

Leave a Reply

Your email address will not be published. Required fields are marked *