ರಕ್ಷಣಾ ಪಡೆಗಳ ಮುಖ್ಯಸ್ಥರಿದ್ದ ಸೇನಾ ಹೆಲಿಕ್ಯಾಫ್ಟರ್ ಪತನ!
1 min readಊಟಿ ಸಮೀಪದ ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು, 7 ಮಂದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸೇನಾ ಮುಖ್ಯಸ್ಥ ಬಿಪಿನ್ ರಾವತ್, ತನ್ನ ಪತ್ನಿ ಮಧುಲಿಕ, 6 ಸೇನಾಧಿಕಾರಿಗಳು, 14 ಮಂದಿ ಕುಟುಂಬ ವರ್ಗದವರ ಜೊತೆ ಬಿಪಿನ್ ರಾವತ್ ಊಟಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕೂನೂರು ಬಳಿ ಹೆಲಿಕಾಪ್ಟರ್ ಪತನವಾಗಿದೆ.
ಇನ್ನು ಈ ಘಟನೆ ನೀಲಗಿರಿಯಲ್ಲಿ ಸಂಭವಿಸಿದ ದುರಂತವಾಗಿದ್ದು ರಕ್ಷಣಾ ಸಚಿವರಿಂದ ಪ್ರಧಾನಿ ಮೋದಿಗೆ ಘಟನೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದೆ. ರಾವತ್ ಪರಿಸ್ಥಿತಿ ಬಗ್ಗೆ ಸದ್ಯದಲ್ಲಿಯೇ ಸೇನಾಪಡೆಯಿಂದ ಅಧಿಕೖತ ಮಾಹಿತಿ ಹೊರಬೀಳಬೇಕಿದ್ದು, ಈವರೆಗೆ 7 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ದೆಹಲಿಯಿಂದ ರಕ್ಷಣಾ ಸಚಿವ ರಾಜನಾಥ ಸಿಂಗ್ ಆಗಮಿಸುತ್ತಿದ್ದು ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟರ್ ಪತನಗೊಂಡಿರುವ ಶಂಕೆ ವ್ಯಕ್ತವಾಗಿದೆ.