ಮೈಸೂರಿನಲ್ಲಿ ಔಷಧಿ ಹೆಸರಿನಲ್ಲಿ ಮಾದಕ ದ್ರವ್ಯ ಮಾರಾಟ!
1 min read
ಮೈಸೂರು: ಮೈಸೂರಿನ ಕೆ ಆರ್ ನಗರದಲ್ಲಿ ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಔಷಧಿನ ಹೆಸರಿನಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದವರ ಪತ್ತೆಹಚ್ಚಿದ್ದಾರೆ.
ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ನಿಷೇಧಿತ ಮಾತ್ರೆ ಮಾರಾಟ ಮಾಡುತ್ತಿದ್ದ ಕೆ ಆರ್ ನಗರದ ಬಾಲಾಜಿ ಮೆಡಿಕಲ್ಸ್ ಮೇಲೆ ದಾಳಿ ನಡೆಸಿ ನಿಷೇಧಿಸತ ಮಾತ್ರೆ ವಶಕ್ಕೆ ಪಡೆದಿದ್ದಾರೆ.

ಅಬಕಾರಿ ಡಿಸಿ ಡಾ ಮಹಾದೇವಿ ಬಾಯಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ವಿಕ್ರಮ್ ಹಾಗೂ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಾಚರಣೆಯಲ್ಲಿ ಇನ್ಸಪೆಕ್ಟರ್ ಲೋಕೇಶ್ ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದು ಮೆಡಿಕಲ್ ಸ್ಟೋರ್ ಮಾಲೀಕ ಶಿವಕುಮಾರ್ ಹಾಗೂ ಮಾರಾಟಕ್ಕೆ ಸಹಕರಿಸಿದ ಶ್ರೀಕಂಠ ರಾಜೇಶ್’ರನ್ನ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕೆ ಆರ್ ನಗರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
