ಮೈಸೂರಿನ ಆಕ್ಸಿಜನ್ ರೀ-ಫಿಲ್ಲಿಂಗ್ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೇಟಿ, ಪರಿಶೀಲನೆ
1 min readಮೈಸೂರು: ದಿನೆ ದಿನೆ ಕೋವಿಡ್ ಪಾಸಿಟಿವ್ ಕೇಸ್ ಹೆಚ್ಚಾದಂತೆ ರೋಗಿಗಳಿಗೆ ಅವಶ್ಯಕತೆ ಇರುವ ಆಕ್ಸಿಜನ್‌ಗಳ ಸರಿಯಾದ ಪೂರೈಕೆ ಹಾಗೂ ಅದರ ಘಟಕಗಳ ಬಗ್ಗೆ ಜಿಲ್ಲಾಡಳಿತ ತೀವ್ರ ನಿಗಾ ಇಟ್ಟಿದೆ.
ಈ ಹಿನ್ನಲೆಯಲ್ಲಿ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ವೈದ್ಯಕೀಯ ಆಕ್ಸಿಜನ್ ರೀ-ಫಿಲ್ಲಿಂಗ್ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ, ಡ್ರಗ್ಸ್ ಕಂಟ್ರೋಲರ್ ಇಲಾಖೆ ಅಧಿಕಾರಿಗಳಾದ ಅರುಣ್, ನಾಗರಾಜು, ಮತ್ತಿತರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ ಅನಗತ್ಯವಾಗಿ ರೀಫಿಲಿಂಗ್ ಮಾಡದೆ ಸರಿಯಾಗಿ ರೋಗಿಗಳಿಗೆ ನೆರವಾಗುವಂತೆ ಇಡಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಇದಲ್ಲದೆ ಮೈಸೂರಿನ ಇತರ ಕಡೆ ಇರುವ ರೀಫಿಲಿಂಗ್ ಕೇಂದ್ರಗಳ ಮಾಲೀಕರೊಟ್ಟಿಗೆಯು ಸಹ ಆಕ್ಸಿಜನ್ ಸದ್ಭಳಕೆ ಬಗ್ಗೆ ತಿಳಿಸಿದ್ದಾರೆ.