ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಕಟ್ಟಡದ ಮೇಲೆ ಚಿತ್ರ ಬಿಡಿಸುವ ಮುಖಾಂತರ ಪರಿಸರ ಜಾಗೃತಿ
1 min readಮೈಸೂರು: ನಗರದ ಜಲಪುರಿ ಪೊಲೀಸ್ ಕ್ವಾಟ್ರಸ್ ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಗೋಡೆಗಳ ಮೇಲೆ ಎನ್ಎಸ್ಎಸ್ ವಿದ್ಯಾರ್ಥಿಗಳು ಹಾಗೂ ಪರಿಸರ ಸ್ನೇಹಿ ತಂಡದ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಚಿತ್ರಗಳನ್ನು ಬಿಡಿಸುವ ಮುಖಾಂತರ ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ನರಸಿಂಹರಾಜ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಡಿ ಲೋಹಿತ್ ರವರು ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡುವುದು ಸರ್ವೆಸಾಮಾನ್ಯ ಜೂನ್ ಐದರಂದು ಗಿಡ ನೆಡುವುದರ ಜೊತೆಗೆ ಗಿಡಗಳಿಗೆ ಪಾಲನೆ ಪೋಷಣೆ ಮಾಡುವುದು ಮುಖ್ಯ ಎಲ್ಲಾದಕ್ಕಿಂತ ಹೆಚ್ಚಾಗಿ ಇಂದಿನ ಮಕ್ಕಳಿಗೆ ಪರಿಸರ ಹಾಗೂ ಗಿಡಗಳ ಜಾಗೃತಿ ಹಾಗೂ ಅದರ ರಕ್ಷಣೆ ವಿಚಾರಗಳನ್ನು ಜಾಗೃತಿ ಮೂಡಿಸಬೇಕಾಗಿದೆ ಜಲಪುರಿ ಶಾಲೆಯ ಕಟ್ಟಡಗಳ ಮೇಲೆ ಚಿತ್ರ ಬಿಡಿಸುವ ಮುಖಾಂತರ ಅರ್ಥಪೂರ್ಣವಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಈ ಕಾರ್ಯಕ್ರಮವು ಮೈಸೂರಿನ ಎಲ್ಲಾ ಸರ್ಕಾರಿ ಶಾಲೆಗಳ ಗೋಡೆಗಳ ಮೇಲೆ ಬಿಡಿಸುವ ಮುಖಾಂತರ ಮಕ್ಕಳಲ್ಲಿ ಪರಿಸರ ಕಾಳಜಿ ಅರಿವು ಮೂಡಿಸುವುದು ಎಲ್ಲರ ಕರ್ತವ್ಯವಾಗಿರುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಡಿ ಲೋಹಿತ್ ರವರು ಹಾಗೂ ಶಾಲೆಯ ಮುಖ್ಯಶಿಕ್ಷಕರಾದ ಮುತ್ತಣ್ಣ ಬಿಡನಾಳ ಹಾಗೂ ಶಾಲೆಯ ಸಹ ಶಿಕ್ಷಕಿಯರಾದ ಗಾಯತ್ರಿ ಕೆ, ನಂದಿನಿ, ಅಶ್ವಿನಿ, ಸಿಆರ್ ಪಿ,ಹಾಗೂ ಮುಂತಾದವರು ಉಪಸ್ಥಿತರಿದ್ದರು.