ದಾರಿತಪ್ಪಿ ಕಾಡಿನಿಂದ ನಾಡಿಗೆ ಬಂದ ಕಾಡಾನೆ!

1 min read

ಅಂತರಸಂತೆ: ದಾರಿತಪ್ಪಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ದಿಕ್ಕು ಕಾಣದೆ ಕಬ್ಬಿನ ಗದ್ದೆಯನ್ನು ಸೇರಿದ್ದು, ಆನೆಯನ್ನು ಕಾಡಿಗೆ ಹಿಂದಿರುಗಿಸುವಲ್ಲಿ ಅರಣ್ಯ ಇಲಾಖೆ ಹರಸಾಹಸಪಡುತ್ತಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಸಮೀಪದ ಸೋಗಹಳ್ಳಿ ಗ್ರಾಮದ ಬಳಿ ಕಾಡಾನೆಯೊಂದು ಬೆಳ್ಳಂಬೆಳಿಗ್ಗೆ ಪ್ರತ್ಯಕ್ಷವಾಗಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಬಳಿಕ ಆನೆ ಕಬ್ಬಿನ ಗದ್ದೆಯೊಂದಕ್ಕೆ ಸೇರಿ ಅಲ್ಲಿಯೇ ಬೀಡುಬಿಟ್ಟಿದೆ. ಸಧ್ಯ ಈ ಬಗ್ಗೆ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳವನ್ನು ಸುತ್ತುವರಿಗೆ ಆನೆ ಗ್ರಾಮಗಳತ್ತ ನುಗ್ಗದಂತೆ ತಡೆದಿದ್ದಾರೆ. ಅಲ್ಲದೇ ಆನೆಯನ್ನು ಹಿಮ್ಮೆಟ್ಟಿಸಲು ಪಟಾಕಿಯನ್ನು ಸಿಡಿಸಿ ಪ್ರಯತ್ನಿಸಿದಾದರು ಆನೆ ಮಾತ್ರ ಕಬ್ಬಿನ ಗದ್ದೆಯಿಂದ ಸರಿದಿಲ್ಲ.

ಸದ್ಯ ಈ ಆನೆ ಬಂಡೀಪುರ ಮೂಲದಿಂದ ಕಬಿನಿ ಹಿನ್ನೀರಿನಲ್ಲಿ ಹಾದಿ ತಪ್ಪಿ ಬಂದಿರಬಹುದು ಎಂದು ಶಂಕಿಸಲಾಗಿದ್ದು, ಆನೆಯನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಸ್ಥಳದಲ್ಲಿ ಎಸಿಎಫ್ ಮಹದೇವ್, ವಲಯ ಅರಣ್ಯಾಧಿಕಾರಿಗಳಾದ ಸಿದ್ದರಾಜು, ಮಧು, ಪಿಎಸ್‍ಐ ಜಯಪ್ರಕಾಶ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

About Author

Leave a Reply

Your email address will not be published. Required fields are marked *