ಮೈಸೂರಿನಲ್ಲಿ ಡಬಲ್ ಡೆಕ್ಕರ್- ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್!

1 min read

ಮೈಸೂರಿನಲ್ಲಿ ಡಬಲ್ ಡೆಕ್ಕರ್ ಬಸ್ ಶುರುವಾಗಿ ಪ್ರವಾಸಿಗರ ಮನಸೂರೆಗೊಳಿಸಿದೆ. ಈ‌ ನಡುವೆ ಬೆಂಗಳೂರಿನ ಜನತೆಗೆ ಸಿಹಿ ಸುದ್ದಿ ಸಿಕ್ಕಿದ್ದು ಬೆಂಗಳೂರಿಗೆ ಮೊದಲ ಎಲೆಕ್ಟ್ರಿಕ್ ಬಸ್ ಸಂಚಾರ ಮಾಡಲಿದೆ.

ಇದರ ಉದ್ಘಾಟನೆ ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ನಿಯೋಜಿಸುವ ಸಾಧ್ಯತೆ ಇದ್ದು, ಎನ್ಟಿಪಿಸಿ ಮತ್ತು ಜೆಬಿಎಂ ಆಟೋ ಕಂಪೆನಿಗಳು ಜಂಟಿಯಾಗಿ 9 ಮೀಟರ್ ಉದ್ದದ 90 ನಾನ್-ಎಸಿ ಎಲೆಕ್ಟ್ರಿಕ್ ಬಸ್ಗಳನ್ನು ಒದಗಿಸುವ ಕೆಲಸವನ್ನು ವಹಿಸಿಕೊಂಡಿವೆ.

ಈ ನಡುವೆ ಎಲೆಕ್ಟ್ರಿಕ್ ಬಸ್ಸಿನಲ್ಲಿ ಸುಮಾರು 30 – 35 ಪ್ರಯಾಣಿಕರು ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಿದ್ದು, ಮೈಸೂರು ರಸ್ತೆ, ಬೈಯಪ್ಪನಹಳ್ಳಿ, ಬನಶಂಕರಿ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸುವ ಯೋಜನೆ ಹೊಂದಿದ್ದಾರೆ.

ಡಿ.15ರೊಳಗೆ ಉಳಿದಂತಹ 89 ಎಲೆಕ್ಟ್ರಿಕ್ ಬಸ್ಸುಗಳನ್ನು ಹಂತ ಹಂತವಾಗಿ ಒದಗಿಸುವುದಾಗಿ ತಿಳಿಸಿದ್ದಾರೆ. ಈ ಬಸ್ ಗಳನ್ನು 12 ವರ್ಷಗಳ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿದ್ದು, ಬಿಎಂಟಿಸಿ ಪ್ರತಿ ಕಿ.ಮೀ ಆಧರಿಸಿ, ಎನ್ಟಿಪಿಸಿ ಮತ್ತು ಜೆಬಿಎಂಗೆ ಹಣ ನೀಡಲಿದ್ದಾರೆ ಎನ್ನಲಾಗಿದೆ.

About Author

Leave a Reply

Your email address will not be published. Required fields are marked *