5 ರಾಜ್ಯ, 7 ಹಂತ, ಒಂದು ತಿಂಗಳು ಚುನಾವಣೆ!

1 min read

ದೆಹಲಿ : ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಖಂಡ್ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ದಿನಾಂಕ ಪ್ರಕಟಿಸಿ ಆದೇಶ ಹೊರಡಿಸಿದೆ. ಬರೋಬ್ಬರಿ 7 ಹಂತಗಳಲ್ಲಿ 5 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಯುಪಿಯಲ್ಲಿ ಫೆಬ್ರವರಿ 10ರಿಂದ ಮಾರ್ಚ್ 7ರವರೆಗೆ, 7 ಹಂತಗಳಲ್ಲಿ ಮತದಾನ ನಡೆಯಲಿದೆ.

  • ಇನ್ನು ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಒಂದೇ ಹಂತದಲ್ಲಿ ಫೆ.14ರಂದು ಮತ್ತು ಮಣಿಪುರದಲ್ಲಿ ಫೆ. 27 ಮತ್ತು 3 ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ದೆಹಲಿಯಲ್ಲಿ ತಿಳಿಸಿದ್ದಾರೆ.
  • ಈಗಾಗಲೇ ಓಮಿಕ್ರಾನ್ ವ್ಯಾಪಕವಾಗಿ ಹರಡುತ್ತಿದ್ದು ಈ ಸಮಯದಲ್ಲಿ ಸುರಕ್ಷಿತವಾಗಿ ಚುನಾವಣೆ ನಡೆಸಲು ವಿಶಿಷ್ಟ ನೀತಿ ಸಂಹಿತೆ ಜಾರಿ ಮಾಡಿದ್ದು ಚುನಾವಣೆಯಲ್ಲಿ ಹೆಚ್ಚು ಮತದಾರರು ಪಾಲ್ಗೊಳ್ಳುವ ಬಗ್ಗೆ ನೀತಿ ಸಂಹಿತೆಯಲ್ಲಿ ಗಮನದಲ್ಲಿಟ್ಟುಕೊಳ್ಳಲಾಗಿದೆ. ಆದ ಕಾರಣ ಎಲ್ಲಾ ಮತಗಟ್ಟೆಗಳಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್‌ಗಳನ್ನು ಬಳಸಲಾಗುವುದು. ಚುನಾವಣೆ ಸುಗಮವಾಗಿ ನಡೆಯಲು ಸಾಕಷ್ಟು ಸಂಖ್ಯೆಯ ಇವಿಎಂ ಮತ್ತು ವಿವಿಪ್ಯಾಟ್‌ಗಳ ವ್ಯವಸ್ಥೆಯನ್ನು ಚುನಾವಣಾ ಆಯೋಗ ಈಗಾಗಲೇ ವ್ಯವಸ್ಥೆ ಮಾಡಿದೆ ಎಂದ್ರು.

ಮಾದರಿ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಯಲ್ಲಿದ್ದು, ಎಂಸಿಸಿ ಮಾರ್ಗಸೂಚಿಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ. ಇದು ಮಾರ್ಗಸೂಚಿಗಳ ಉಲ್ಲಂಘನೆಗಳ ಬಗ್ಗೆ ಕಟ್ಟುನಿಟ್ಟಾಗಿ ಕ್ರಮ ವಹಿಸುತ್ತೆ ಎಂದ್ರು.

ಎಲ್ಲೆಲ್ಲಿ ಯಾವಾಗ ಚುನಾವಣೆ!?

ಮೊದಲ ಹಂತ (ಉತ್ತರ ಪ್ರದೇಶದಲ್ಲಿ ಮಾತ್ರ).

ಜನವರಿ 14 ರಿಂದ ನಾಮಪತ್ರ ಪಕ್ರಿಯೆ ಆರಂಭ ಚುನಾವಣೆ ಫೆಬ್ರವರಿ 10 ರಂದು.
2ನೇ ಹಂತ (ಪಂಜಾಬ್, ಉತ್ತರಪ್ರದೇಶ, ಗೋವಾ, ಉತ್ತರಾಖಂಡಗಳಲ್ಲಿ ನಡೆಯಲಿದೆ)

ಜನವರಿ 21 ರಿಂದ ನಾಮಪತ್ರ ಪಕ್ರಿಯೆ ಆರಂಭವಾಗಲಿದ್ದು ಚುನಾವಣೆ ಫೆಬ್ರವರಿ 14 ರಂದು.
3ನೇ ಹಂತ (ಉತ್ತರ ಪ್ರದೇಶದಲ್ಲಿ ಮಾತ್ರ).
25 ಜನವರಿಯಿಂದ ನಾಮಪತ್ರ ಪಕ್ರಿಯೆ ಚುನಾವಣೆ ಫೆಬ್ರವರಿ 20 ರಂದು.
4ನೇ ಹಂತ (ಉತ್ತರ ಪ್ರದೇಶದಲ್ಲಿ ಮಾತ್ರ).
27 ಜನವರಿಯಿಂದ ನಾಮಪತ್ರ ಪಕ್ರಿಯೆ ಚುನಾವಣೆ ಫೆಬ್ರವರಿ 23 ಫೆಬ್ರವರಿ.
5ನೇ ಹಂತ ( ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ಮಾತ್ರ)
ಫೆಬ್ರವರಿ 1ರಿಂದ ನಾಮಪತ್ರ ಪ್ರಕ್ರಿಯೆ ಚುನಾವಣೆ ಫೆಬ್ರವರಿ 27 ರಂದು.
6ನೇ ಹಂತ ( ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ಮಾತ್ರ).
4ನೇ ಫೆಬ್ರವರಿಯಿಂದ ನಾಮಪತ್ರ ಪಕ್ರಿಯೆ ಚುನಾವಣೆ ಮಾರ್ಚ್ 3 ರಂದು.
7ನೇ ಹಂತ (ಉತ್ತರ ಪ್ರದೇಶದಲ್ಲಿ ಮಾತ್ರ).
10 ಫೆಬ್ರವರಿಯಿಂದ ನಾಮಪತ್ರ ಪಕ್ರಿಯೆ ಮಾರ್ಚ್ 07 ರಂದು.
ಫಲಿತಾಂಶ: 10 ಮಾರ್ಚ್.
ಪಂಜಾಬ್, ಗೋವಾ ಉತ್ತರಾಖಂಡ ರಾಜ್ಯಗಳು ಒಂದೇ ಹಂತದಲ್ಲಿ ಅಂದರೆ ಫೆಬ್ರವರಿ 14 ರಂದು ಚುನಾವಣೆ ಎದುರಿಸಲಿವೆ. ಮಣಿಪುರ ಎರಡು ಹಂತಗಳಲ್ಲಿ ಮತ್ತು ಉತ್ತರ ಪ್ರದೇಶವು 7 ಹಂತಗಳಲ್ಲಿ ಚುನಾವಣೆ ಎದುರಿಸಲಿದೆ.

ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಉಲ್ಲಂಘಿಸಿದವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕೋವಿಡ್ ಕಾರಣಕ್ಕೆ ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಳ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.

ರೋಡ್ ಶೋ, ರ್ಯಲಿ ಬಂದ್!

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ನಾಮಪತ್ರ ಸಲ್ಲಿಸುವ ಅವಕಾಶ ನೀಡಲಾಗಿದ್ದು, ಕೋವಿಡ್ ಕಾರಣಕ್ಕೆ ನೇರವಾಗಿ ನಾಮಪತ್ರ ಸಲ್ಲಿಸುವ ಬದಲು ಆನ್‌ಲೈನ್‌ ಮೂಲಕ ಸಲ್ಲಿಸಬಹುದು ಎಂದರು. ಜೊತೆಗೆ ಚುನಾವಣಾ ರ್ಯಾಲಿಗಳನ್ನು, ಪ್ರಚಾರವನ್ನು ಆದಷ್ಟು ಆನ್‌ಲೈನ್ ಮೂಲಕ ಮಾಡಲು ಮನವಿ ಮಾಡಿದರು.
ರೋಡ್ ಶೋ, ಪಾದಯಾತ್ರೆಗಳನ್ನು, ಸೈಕಲ್ ಬೈಕ್ ರ್ಯಾಲಿಗಳನ್ನು, ಚುನಾವಣಾ ಪ್ರಚಾರ ಸಭೆಗಳನ್ನು ಜನವರಿ 15ರವರೆಗೂ ನಡೆಸಬಾರದು ಎಂದು ಆಯೋಗ ತಾಕೀತು ಮಾಡಿದೆ. ನಂತರ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು. ಮನೆ ಮನೆ ಪ್ರಚಾರಕ್ಕೆ ಕೇವಲ 05 ಜನರಿಗೆ ಮಾತ್ರ ಅವಕಾಶವಿರುತ್ತದೆ. ಫಲಿತಾಂಶದ ನಂತರ ವಿಜಯೋತ್ಸವ ಮೆರವಣಿಗೆಗಳನ್ನು ನಿಷೇಧಿಸಲಾಗಿದೆ. ಒಬ್ಬ ಅಭ್ಯರ್ಥಿಯ ಪರವಾಗಿ ಮತ ಎಣಿಕೆ ಕೇಂದ್ರಕ್ಕೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಇನ್ನು ಸರಿಯಾದ ಸಮಯಕ್ಕೆ ಚುನಾವಣೆ ನಡೆಸುವ ಜವಾಬ್ದಾರಿಯನ್ನು ಚುನಾವಣಾ ಆಯೋಗಕ್ಕೆ ಸಂವಿಧಾನ ನೀಡಿದೆ. ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣಕ್ಕೆ ಇದು ಸರಿಯಾಗಿ ನಡೆಸಲಾಗುತ್ತಿಲ್ಲ. ಮುಂದಿನ ಚುನಾವಣೆಗಳಿಗೆ ಸಮರ್ಪಕ ಪ್ರೊಟೋಕಾಲ್ ಅಳವಡಿಸಲಾಗುವುದು” ಎಂದರು.
ಕೋವಿಡ್ ರಕ್ಷಣೆ ಚುನಾವಣೆ, ಮುಕ್ತು ಚುನಾವಣೆ ಅತಿ ಹೆಚ್ಚಿನ ಮತದಾರರು ಭಾಗವಹಿಸುವಂತೆ ಮಾಡುವುದಕ್ಕಾಗಿ ಕಳೆದ 6 ತಿಂಗಳಿನಿಂದ ಚುನಾವಣಾ ಆಯೋಗ ಕೆಲಸ ಮಾಡಿದ್ದೇವೆ ಎಂದರು. ಎಲ್ಲಾ ರಾಜ್ಯಗಳಿಗೆ ಭೇಟಿ ಮಾಡಿ ರಾಜಕೀಯ ಪಕ್ಷಗಳು ಮತ್ತು ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡಿ ಅಭಿಪ್ರಾಯ ಪಡೆದಿದ್ದೇವೆ ಎಂದು ತಿಳಿಸಿದರು.

ಎಲ್ಲೆಲ್ಲಿ ಎಷ್ಟು ಮತದಾರರದ್ದಾರೆ!?

ಗೋವಾದ 40 ಸ್ಥಾನಗಳಿಗೆ, ಮಣಿಪುರದ 60 ಕ್ಷೇತ್ರಗಳಿಗೆ, ಉತ್ತರಾಖಂಡದ 70 ಕ್ಷೇತ್ರಗಳಿಗೆ, ಪಂಜಾಬ್‌ನ 117 ಸ್ಥಾನಗಳಿಗೆ ಮತ್ತು ಉತ್ತರ ಪ್ರದೇಶದ 403 ಸ್ಥಾನಗಳಿಗೆ ಸೇರಿ ಒಟ್ಟು ಒಟ್ಟು 690 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಒಟ್ಟು 18.34 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಚುನಾವಣೆ ಪ್ರಚಾರಕ್ಕಾಗಿ ಖರ್ಚು ವೆಚ್ಚ ಎಷ್ಟು?

ಪಂಜಾಬ್, ಉತ್ತರಪ್ರದೇಶ ಮತ್ತು ಉತ್ತರಾಖಂಡದ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ಗರಿಷ್ಠ 40 ಲಕ್ಷ ರೂಗಳವರೆಗೆ ಖರ್ಚು ಮಾಡಬಹುದು. ಗೋವಾ ಮತ್ತು ಮಣಿಪುರದ ಅಭ್ಯರ್ಥಿಗಳು ಗರಿಷ್ಠ 28 ಲಕ್ಷ ರೂಗಳವರೆಗೆ ಖರ್ಚು ಮಾಡಬಹುದಾಗಿದೆ‌.

ಜನವರಿ 7ರ ಮಾಹಿತಿಯಂತೆ ಈ ಐದು ರಾಜ್ಯಗಳಲ್ಲಿ 15 ಕೋಟಿ ಜನರು ಮೊದಲ ಡೋಸ್ ಲಸಿಕೆ ಮತ್ತು ಸುಮಾರು 9 ಕೋಟಿ ಜನರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಆಯೋಗ ಮಾಹಿತಿ ನೀಡಿದೆ.
ಗೋವಾ ವಿಧಾನಸಭೆಯ ಅಧಿಕಾರಾವಧಿಯು ಮಾರ್ಚ್ 15 ರಂದು ಮುಕ್ತಾಯಗೊಳ್ಳಲಿದೆ. ಮಣಿಪುರ ವಿಧಾನಸಭೆಯ ಅಧಿಕಾರಾವಧಿಯು ಮಾರ್ಚ್ 19 ರಂದು ಮುಕ್ತಾಯಗೊಳ್ಳಲಿದ್ದು, ಉತ್ತರಾಖಂಡ ಮತ್ತು ಪಂಜಾಬ್ ವಿಧಾನಸಭೆಯ ಚುನಾವಣೆಯು ಮಾರ್ಚ್ 23ರವರೆಗೆ ಮತ್ತು ಯುಪಿ ವಿಧಾನಸಭೆಯ ಅಧಿಕಾರಾವಧಿಯು ಮೇ 14 ರವರೆಗೆ ಇರುತ್ತದೆ.

2022ರ ಫೆಬ್ರವರಿಯಲ್ಲಿ ನಡೆಯಬೇಕಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಒಂದು ಅಥವಾ ಎರಡು ತಿಂಗಳು ಮೂಂದೂಡಬೇಕೆಂದು ಚುನಾವಣಾ ಆಯೋಗಕ್ಕೆ ಅಲಹಾಬಾದ್ ಹೈಕೋರ್ಟ್ ಮನವಿ ಮಾಡಿತ್ತು. ಅಲ್ಲದೆ ರಾಜ್ಯದಲ್ಲಿ ಚುನಾವಣಾ ರ್ಯಾಲಿಗಳನ್ನು ಸಹ ರದ್ದುಗೊಳಿಸಬೇಕೆಂದು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದೆ. ಹೆಚ್ಚುತ್ತಿರುವ ಒಮೈಕ್ರಾನ್ ಪ್ರಕರಣಗಳು ಹೆಚ್ಚಾಗಲಿದ್ದು ಮೂರನೇ ಅಲೆಗೆ ಕಾರಣವಾಗಬಹುದು ಎಂಬ ಕಾರಣದಿಂದ ಈ ಕ್ರಮಕ್ಕೆ ಸೂಚಿಸಲಾಗಿದೆ.

About Author

Leave a Reply

Your email address will not be published. Required fields are marked *