ಮಹಾಲಕ್ಷ್ಮಿ ಸ್ವೀಟ್ಸ್ ಪರ ಪತ್ರ ಬರೆದ ಮೈಮುಲ್- ನಾಲ್ವರು ಆರೋಪಿಗಳ ಬಂಧಿಸಿದ ಪೊಲೀಸರು!

1 min read

ಮೈಸೂರಿನಲ್ಲಿ ನಡೆದ ನಕಲಿ ತುಪ್ಪ ಪ್ರಕರಣ ರಾಜ್ಯದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಇದರ ಬೆನ್ನಲ್ಲೆ ಬೆಂಗಳೂರಿನಲ್ಲು ಸಹ ಇದರ ಬಾಹು ಚಾಚಿಕೊಂಡಿರುವ ಬಗ್ಗೆ ಸಾಕ್ಷಿ ಸಮೇತ ಬಟ ಬಯಲಾಗಿತ್ತು. ಆದರೆ ಈ ತುಪ್ಪ ಎಲ್ಲಿಗೆ ಹೋಗ್ತಿತ್ತು ಎಂಬ ಮಾಹಿತಿ ಮಾತ್ರ ಹಾಗೆ ಉಳಿದಿತ್ತು. ಆದರೆ ಪೊಲೀಸರ ತನಿಖೆ ವೇಳೆ‌ ಇಲ್ಲಿ ಕೇವಲ ನಂದಿನಿ ತುಪ್ಪ ಮಾತ್ರವಲ್ಲ ಪ್ರತಿಷ್ಠಿತ ಬ್ರಾಂಡ್‌ನ ತುಪ್ಪವು ನಕಲಿಯಾಗಿತ್ತು ಅಂಶ ಬೆಳಕಿಗೆ ಬಂದಿದ್ದು ಸದ್ಯ ಇದೀಗಾ ಪೊಲೀಸರು ಇದರ ರೂವಾರಿಗಳನ್ನ ಎಡೆಮುರಿ ಕಟ್ಟಿದ್ದು ಇದರ ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಎಸ್, ಮೈಸೂರಿನ ಚಾಮುಂಡಿ ಬೆಟ್ಟದ ಹಿಂಭಾಗದಲ್ಲಿ ಗೋಡೌನ್ ಒಂದರಲ್ಲಿ ಸದ್ದಿಲ್ಲದೆ ನಕಲಿ ತುಪ್ಪ ತಯಾರಿಕೆಯಲ್ಲಿ ತೊಡಗಿದ್ದವರ ಮೇಲೆ ಸಂಘಟನೆಯೊಂದು ಏಕಾಏಕಿ ದಾಳಿ ಮಾಡಿತ್ತು. ಈ ವೇಳೆ ನಕಲಿ ನಂದಿನಿ ತುಪ್ಪದ ರಹಸ್ಯ ಬಯಲು ಮಾಡಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಅಕ್ರಮವನ್ನ ಬಯಲಿಗೆಳೆದಿತ್ತು.

ಆದರೆ ಘಟನೆ ದಿನ ಇದು ಅಲ್ಲಿಗೆ ಹೋಗ್ತಿತ್ತು? ಇಲ್ಲಿಗೆ ಹೋಗ್ತಿತ್ತು ಎಂವ ಮಾತುಗಳು ಕೇಳಿ ಬರ್ತಿದವು. ಆದರೆ ನಿಜವಾಗಿಯು ಇದು ಎಲ್ಲಿಗೆ ಹೋಗ್ತಿತ್ತು ಎಂಬುದನ್ನ ಯಾರು ಹೇಳುತ್ತಿರಲಿಲ್ಲ. ಇದರಿಂದ ಪೊಲೀಸರು ಇದರ ಪ್ರಕರಣ ಬೆನ್ನತ್ತಿ ಇದೀಗಾ ನಾಲ್ವರನ್ನು ವಶಕ್ಕೆ ಪಡೆದಿದ್ದು, ಅವರ ಬಳಿ ಮಾಹಿತಿ ಕಲೆ ಹಾಕಿದ್ದಾರೆ. ಮಾತ್ರವಲ್ಲದೇ ಅವರು ಮೈಸೂರಿನವರೇ ಎಂದು ಸಹ ತಿಳಿದು ಬಂದಿದೆ.

ಹೌದು ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಮಾತಾಡಿ ಪ್ರಕರಣದಲ್ಲಿ ನಾಲ್ಕು ಆರೋಪಿಗಳ ಬಂಧನವಾಗಿದ್ದು, ಕಲಬೆರಕೆ ತುಪ್ಪ ಮಾಡುತ್ತಿದ್ದದ್ದನ್ನು ನಾಲ್ವರು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಂಧಿಸಿರುವ ನಾಲ್ವರು ಮೈಸೂರಿನವರಾಗಿದ್ದು, ಇನ್ನೂ ಹಲವರು ಈ ಪ್ರಕರಣದಲ್ಲಿ ಭಾಗಿಯಾಗಿರೋ ಸಾಧ್ಯತೆ ಇದೆ. ಹಾಗಾಗಿ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ದಾಳಿ ವೇಳೆ ಬರೋಬ್ಬರಿ 10 ಟನ್ ನಕಲಿ ತುಪ್ಪ ಜಪ್ತಿಯಾಗಿದೆ. ನಂದಿನಿ ಬ್ರ್ಯಾಂಡ್ ಸೇರಿದಂತೆ ಹಲವು ಬ್ರ್ಯಾಂಡ್‌ನ ತುಪ್ಪವನ್ನು ನಕಲಿ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಎರಡು ತಿಂಗಳ ಹಿಂದಿನಿಂದ ಈ ಘಟಕ ನಡೆಯುತ್ತಿದ್ದು ಇದು ಎಲ್ಲೆಲ್ಲಿಗೆ ಹೋಗಿದೆ ಎಂಬ ಬಗ್ಗೆಯು ತನಿಖೆ ತೀವ್ರವಾಗಿದೆ ಎಂದು ಮೈಸೂರು ಜಿಲ್ಲಾ ಎಸ್ ಪಿ ಚೇತನ್ ಅವರು ಮಾಹಿತಿ ನೀಡಿದರು.

ಮಹಾಲಕ್ಷ್ಮಿ ಸ್ವೀಟ್ಸ್ ವಿರುದ್ಧ ಹೇಳಿಕೆ‌ ನೀಡಿಲ್ಲ- ಮೈಮುಲ್

ಇವೆಲ್ಲದರ ಬೆನ್ನಲ್ಲೇ ಮಹಾಲಕ್ಷ್ಮಿ ಸ್ವೀಟ್ಸ್ ಸಂಸ್ಥೆ ವಿರುದ್ಧ ನಾವು ಯಾವುದೇ ಹೇಳಿಕೆ‌ ನೀಡಿಲ್ಲ ಎಂದು ಮೈಮುಲ್ ಸ್ಪಷ್ಟನೆ ನೀಡಿದೆ. ನಾವು ಘಟನೆ ದಿನ ಈ ಬಗ್ಗೆ ತನಿಖೆ ಆಗಬೇಕಷ್ಟೇ ಎಂದು ಹೇಳಿಕೆ‌ ನೀಡಲಾಗಿದ್ದು, ಮಹಾಲಕ್ಷ್ಮಿ ಸ್ವೀಟ್ಸ್ ವಿರುದ್ಧ ಹೇಳಿಕೆ ನೀಡಿಲ್ಲ. ಅಲ್ಲದೆ ತನಿಖೆ ನಡೆಯುವ ವರೆಗು ಒಂದು ಪ್ರತಿಷ್ಠಿತ ಸಂಸ್ಥೆ ವಿರುದ್ಧ ಹೇಳಿಕೆ ನೀಡಬಾರದು. ಮಹಾಲಕ್ಷ್ಮಿ ಸ್ವೀಟ್ಸ್ ಸಂಸ್ಥೆ ಒಳ್ಳೆಯ ಹೆಸರು ಮಾಡಿರುವ ಸಂಸ್ಥೆ ಆಗಿದೆ. ಹಾಗಾಗಿ‌ ನಮ್ಮಿಂದ ಈ ಸಂಸ್ಥೆ ವಿರುದ್ಧ ಯಾವುದೇ ರೀತಿಯಾದ ಹೇಳಿಕೆ ನೀಡಿರುವುದಿಲ್ಲ. ಅಲ್ಲದೆ ಈ ಪ್ರಕರಣ ತನಿಖೆ ಆಗಬೇಕೆಂದು ಡಿಸಿ ಹಾಗೂ ಎಸ್ ಪಿ ಅವರಿಗೆ ಮನವಿ ಮಾಡಿದ್ದೇವೆ. ಕೆಲವರ ಗೊಂದಲದಿಂದ ತನಿಖೆಯ ಹಾದಿ ತಪ್ಪುತ್ತಿದ್ದು ಮಾಧ್ಯಮದವರು ನಂದಿನಿ ವ್ಯಾಪಾರ ವಹಿವಾಟು ನಡೆಸಲು ಸಹಕಾರ ಕೊಡಬೇಕೆಂದು ಮನವಿ ಮಾಡಿದ್ದಾರೆ.

ಅಲ್ಲದೆ ಮೈಮುಲ್ ರೈತರ ಹಿತ ಕಾಯಲು ಸದಾ ಬದ್ದವಾಗಿದ್ದು, ಸಾರ್ವಜನಿಕರು ಯಾವುದೇ ಗೊಂದಲ ಹಾಗೂ ಹೇಳಿಕೆಗು ಕಿವಿಗೊಡದೆ ಸಹಕಾರ ಕೊಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಈ ಎಲ್ಲಾ‌ ಬೆಳವಣಿಗೆ ಮಧ್ಯೆ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದು ಅವರನ್ನ ಪೊಲೀಸರು ಲೆಫ್ಟ್ ರೈಟ್ ತೆಗೆದುಕೊಂಡಿದ್ದಾರೆ. ಆದಷ್ಟು ಬೇಗ ನಕಲಿ ತುಪ್ಪದ ಹಿಂದಿರುವ ಖದೀಮರನ್ನ ಬಂಧಿಸಿ ಸಾರ್ವಜನಿಕರಿಗಿರುವ ಆತಂಕ ದೂರ ಮಾಡಲಿ ಅನ್ನೋದಷ್ಟೇ ನಮ್ಮ ಆಶಯ‌.

ನನ್ನೂರು ಮೈಸೂರು ಟೀಂ..

About Author

Leave a Reply

Your email address will not be published. Required fields are marked *