ಟಿ20 ವಿಶ್ವಕಪ್ ಟೂರ್ನಿಯಲ್ಲಿ ಡಿಆರ್‌ಎಸ್ ಬಳಕೆ: ಐಸಿಸಿ
1 min readನವದೆಹಲಿ,ಅ.10- ಇದೇ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಂಪೈರ್ ತೀರ್ಪು ಪರಿಶೀಲನಾ ವ್ಯವಸ್ಥೆಯನ್ನು (ಡಿಆರ್‌ಎಸ್) ಪರಿಚಯಿಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿಳಿಸಿದೆ.
ವರದಿಗಳ ಪ್ರಕಾರ ಪ್ರತಿ ತಂಡವು ಒಂದು ಇನಿಂಗ್ಸ್‌ನಲ್ಲಿ ಗರಿಷ್ಠ ಎರಡು ಡಿಆರ್‌ಎಸ್ ತೆಗೆದುಕೊಳ್ಳಬಹುದಾಗಿದೆ. ಈ ಹಿಂದಿನ (2016ರ) ಟಿ20 ವಿಶ್ವಕಪ್ ಟೂರ್ನಿ ವೇಳೆ ಡಿಆರ್‌ಎಸ್ ಅನ್ನು ಬಳಕೆ ಮಾಡಿರಲಿಲ್ಲ.
ʼಕೋವಿಡ್-19 ಕಾರಣದಿಂದಾಗಿ ಕೆಲವೊಮ್ಮೆ ಪಂದ್ಯಗಳ ಸಂದರ್ಭದಲ್ಲಿ ಹೆಚ್ಚು ಅನುಭವ ಹೊಂದಿರದ ಅಂಪೈರ್‌ಗಳು ಕರ್ತವ್ಯ ನಿರ್ವಹಿಸಬಹುದುʼ ಎಂಬುದನ್ನು ಗಮನದಲ್ಲಿರಿಸಿ ಎಲ್ಲ ಮಾದರಿಯ ಪಂದ್ಯಗಳಲ್ಲಿಯೂ ಡಿಆರ್‌ಎಸ್ ಪಡೆದುಕೊಳ್ಳುವ ಅವಕಾಶವನ್ನು ತಂಡಗಳಿಗೆ ನೀಡುವುದಾಗಿ ಕಳೆದ ವರ್ಷ ಜೂನ್‌ನಲ್ಲೇ ಐಸಿಸಿ ಪ್ರಕಟಿಸಿತ್ತು.
ಹಾಗಾಗಿ ನಿಗದಿತ ಓವರ್‌ಗಳ ಪಂದ್ಯದಲ್ಲಿ ಪ್ರತಿ ಇನಿಂಗ್ಸ್‌ಗೆ ಎರಡು ಮತ್ತು ಟೆಸ್ಟ್ ಪಂದ್ಯಗಳಲ್ಲಿ ಮೂರು ಡಿಆರ್‌ಎಸ್ ನೀಡಲಾಗುವುದು.
ಅ.17 ರಿಂದ ಒಮನ್ ಮತ್ತು ಯುಎಇಯಲ್ಲಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ನವೆಂಬರ್ 14ರವರೆಗೆ ಟೂರ್ನಿ ನಡೆಯಲಿದೆ.
2018ರಲ್ಲಿ ನಡೆದ ಮಹಿಳಾ ಟಿ20 ಟೂರ್ನಿಯಲ್ಲಿ ಡಿಆರ್‌ಎಸ್ ಬಳಸಲಾಗಿತ್ತು. ಐಸಿಸಿಯ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ನಲ್ಲಿ ಈ ವ್ಯವಸ್ಥೆ ಬಳಕೆ ಮಾಡಿದ್ದು, ಅದೇ ಮೊದಲು. ಅದಾದ ನಂತರ 2020ರಲ್ಲಿ ಆಸ್ಟ್ರೇಲಿಯಾದಲ್ಲಿ ಅಯೋಜನೆಗೊಂಡ ಮಹಿಳಾ ಟಿ20 ಟೂರ್ನಿಯಲ್ಲಿಯೂ ಅಳವಡಿಸಲಾಗಿತ್ತು.