ದಿ.ವಿಷ್ಣುವರ್ಧನ್ ಪ್ರತಿಮೆ ಪರವಾಗಿ ನಿಂತ ಸಂಸದ ಪ್ರತಾಪ್ ಸಿಂಹ
1 min readಮೈಸೂರು: ಮೈಸೂರಿನಲ್ಲಿ ವಿಷ್ಣು ಸ್ಮಾರಕ ವಿವಾದ ವಿಚಾರ ಸಂಸದ ಪ್ರತಾಪ್ ಸಿಂಹ ದಿ.ವಿಷ್ಣುವರ್ಧನ್ ಪ್ರತಿಮೆ ಪರವಾಗಿ ನಿಂತಿದ್ದಾರೆ.
ಅಧಿಕೃತವಾಗಿ ಉದ್ಯಾನವನಕ್ಕೆ ವಿಷ್ಣು ನಾಮಕರಣಕ್ಕೆ ಪ್ರತಾಪ್ ಸಿಂಹ ಒತ್ತಾಯ ಮಾಡಿದ್ದಾರೆ. ನಾಮಕರಣದ ಜೊತೆ ವಿಷ್ಣು ಪ್ರತಿಮೆ ನಿರ್ಮಾಣ ಮಾಡುವಂತೆಯು ಆಗ್ರಹಿಸಿದ್ದಾರೆ. ಈ ಕುರಿತು ಮೇಯರ್ ಗೆ ಪತ್ರ ಬರೆದು ಒತ್ತಾಯಿಸಿದ ಸಂಸದ ಪ್ರತಾಪ್ ಸಿಂಹ.
ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ಅವರ ಕೊಡುಗೆ ಅಪಾರ. ಮುಂದಿನ ಕೌನ್ಸಿಲ್ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ. ಕೌನ್ಸಿಲ್ ಸಮ್ಮುಖದಲ್ಲಿ ಅನುಮೋದನೆ ನೀಡಬೇಕು. ಪತ್ರದ ಮೂಲಕ ಮೇಯರ್‌ಗೆ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.
ಸೆ.18ರಂದು ಪ್ರತಿಮೆ ವಿಚಾರದಲ್ಲಿ ಗಲಾಟೆ ನಡೆದಿತ್ತು. ಅಧಿಕಾರಿಗಳು ಹಾಗೂ ವಿಷ್ಣು ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ನಿನ್ನೆಯಷ್ಟೇ ವಿಷ್ಣು ಅಭಿಮಾನಿಗಳು ಪ್ರತಾಪ್ ಸಿಂಹಗೆ ಮನವಿ ಮಾಡಿದ್ದರು. ಒಂದೇ ದಿನದಲ್ಲಿ ಪತ್ರ ಬರೆದು ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.