ಮೈಸೂರಿನಲ್ಲಿ ಕತ್ತೆ ಹಾಲಿಗೆ ಡಿಮ್ಯಾಂಡಪೋ ಡಿಮ್ಯಾಂಡೂ!
1 min readಮೈಸೂರು- ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ಹಸು ಹಾಲಿಗಿಂತ ಇದೀಗಾ ಕತ್ತೆ ಹಾಲಿಗೆ ಸಖತ್ ಡಿಮ್ಯಾಂಡ್ ಬಂದಿದೆ. ಈ ಮೂಲಕ ಕತ್ತೆಗು ಒಂದು ಕಾಲ ಬಂದಾಗಿದೆ.
- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಾದ ಕಾರಣ ಅದರ ಬೆಲೆ ಕೂಡ ದುಬಾರಿಯಾಗಿದೆ. ಕೇವಲ 5 ಮಿಲಿ ಹಾಲಿನ ಬೆಲೆ 50 ರಿಂದ 80ರ ವರೆಗು ರೂಪಾಯಿಗೆ ಮಾರಾಟವಾಗುತ್ತಿದೆ. ಕತ್ತೆಯ ಹಾಲು ಮಕ್ಕಳಲ್ಲಿ ಹಸಿವು ಹೆಚ್ಚಿಸುವ, ಆಸ್ತಮಾ, ಶೀತ, ಕೆಮ್ಮು ಮುಂತಾದ ಕಾಯಿಲೆಗಳಿಗೆ ರಾಮಬಾಣ ಎಂಬ ಮಾತು ಹಿಂದಿನಿಂದಲು ಕೇಳಿ ಬಂದಿದೆ.
ಇದರಿಂದಲೇ ಹಸುವಿನ ಹಾಲಿಗಿಂತ ಕತ್ತೆ ಹಾಲಿನಲ್ಲಿ ಔಷಧೀಯ ಗುಣ ಹೆಚ್ಚಾಗಿದೆ. ಗ್ರಾಮೀಣಾ ಭಾಗದಲ್ಲಿ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲಿ ಕೂಡ ಹೆಚ್ಚಾಗಿ ಕತ್ತೆ ಹಾಲು ಮಾರಾಟ ಹೆಚ್ಚಾಗಿದೆ. ಇದರಿಂದ ಕತ್ತೆ ಹಾಲಿನ ಬೆಲೆ ಗಗನಕ್ಕೇರುತ್ತಿದ್ದಂತೆ ಹಳ್ಳಿಗಳಿಂದ ಬಂದಿರುವ ವ್ಯಾಪಾರಿಗಳು ನಗರದ ಬೀದಿ ಬೀದಿಗಳಲ್ಲಿ ಭರ್ಜರಿ ವ್ಯಾಪಾರ ಮಾಡ್ತಿದ್ದಾರೆ.
ಅಲ್ಲದೆ ಕತ್ತೆಗಳು ಕೂಡ ನಗರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಾಣ ಸಿಗೋದಿಲ್ಲ. ಸದ್ಯ ಕತ್ತೆ ಸಾಕಾಣಿಕೆ ಮಾಡಿ, ಪ್ರತಿನಿತ್ಯ ಸಾವಿರಾರು ರೂಪಾಯಿ ಸಂಪಾದನೆ ಮಾಡ್ತಿದ್ದಾರೆ ಕತ್ತೆ ಸಾಕುತ್ತಿರೋ ಮಾಲೀಕರು. ಇತ್ತ ಕತ್ತೆಯೊಂದಿಗೆ ನಗರ ಪ್ರದಕ್ಷಿಣೆ ಮಾಡುತ್ತಿರುವ ಕತ್ತೆ ಹಾಲು ವ್ಯಾಪಾರಿಗಳು, ಸ್ಥಳದಲ್ಲೇ ಹಾಲು ಕರೆದು ಕೊಟ್ಟು ವ್ಯಾಪಾರ ಮಾಡ್ತಿದ್ದಾರೆ.