50 ಮಂದಿ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ
1 min readಮೈಸೂರು,ಅ.1-ಮಹಾನಗರ ಪಾಲಿಕೆ 2019-2020ನೇ 7.25ನೇ ಅನುದಾನದಡಿಯಲ್ಲಿ 50 ಮಂದಿ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ನಗರದ ದಿವಾನ್ಸ್ ರಸ್ತೆಯ ಕುಂಚಿಟಿಗರ ಅಲ್ಲಮನ ಕಲ್ಯಾಣ ಮಂಟಪದಲ್ಲಿ ಆವರಣದಲ್ಲಿ ವಲಯ ಕಚೇರಿ-6 ಆಯುಕ್ತರಾದ ಕಾರ್ತಿಕ್, ನಗರ ಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್ ನೇತೃತ್ವದಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೀಳಾ ಭರತ್ ಅವರು, ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ದುಡಿಯಬೇಕೆಂಬ ಪರಿಕಲ್ಪನೆಯಿಂದ ಹೊಲಿಗೆ ಯಂತ್ರ ನೀಡಲಾಗುತ್ತಿದೆ. ತಾವು ಕಲಿತು ಅದರಿಂದ ದುಡಿದು ಮತ್ತಷ್ಟು ಮಂದಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಸುಬ್ಬರಾಯನಕೆರೆಯ ನಾಗರೀಕರಿಗೆ ಮೈಸೂರು ನಗರಪಾಲಿಕೆಯ ವತಿಯಿಂದ ದೊರಕುವ ಸವಲತ್ತು ಮತ್ತು ಸೇವೆಯನ್ನು ತಲುಪಿಸಲು ಬಿಜೆಪಿ ಯುವಮುಖಂಡ ಸಚ್ಚಿನ್ ನೇತೃತ್ವದಲ್ಲಿ ಸಹಾಯವಾಣಿ ಸಂಪರ್ಕ ಕೇಂದ್ರ ತೆರೆಯಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9900380999 ಸಂಪರ್ಕಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ವಲಯ ಕಚೇರಿಯ ಅಧಿಕಾರಿಗಳಾದ ಜಯಶ್ರೀ ಸದಲಗಿ, ಲಕ್ಷ್ಮೀದೇವಿ, ಗಂಗಾಧರ್, ಧರ್ಮ ಪಾರಾಯಿಣಿ ಶ್ರೀಮತಿ ಆಲಮ್ಮನವರ ಛತ್ರದ ಅಧ್ಯಕ್ಷ ನಾಗರಾಜ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚರಣ್, ಶ್ರೀನಿವಾಸ್, ಕಾರ್ಯದರ್ಶಿ ಪ್ರದೀಪ್, ರಾಜ್ಯ ಬಿಜೆಪಿ ಅನ್ಯ ಭಾಷಾ ಪ್ರಕೋಷ್ಠದ ಸಂಚಾಲಕರಾದ ರಾಜೇಂದ್ರ, ಚಾಮರಾಜ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆರ್.ಸಚಿನ್, ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಮಹೇಶ್, ಕ್ಷೇತ್ರದ ಫಲಾನುಭವಿಗಳ ಪ್ರಕೋಷ್ಠದ ಸಹ ಸಂಚಾಲಕ ವಿಘ್ನೇಶ್ವರ ಭಟ್, ಚಾಮರಾಜ ಕ್ಷೇತ್ರದ ಪ್ರಬುದ್ಧ ಪ್ರಕೋಷ್ಠದ ಸಂಚಾಲಕ ಸುರೇಂದ್ರ, ಚಾಮರಾಜ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಕ್ಷ್ಮಿ, ಕ್ಷೇತ್ರದ ಬಿಜೆಪಿ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಆನಂದ್ ಇತರರು ಉಪಸ್ಥಿತರಿದ್ದರು.