ಸಿದ್ದರಾಮಯ್ಯನವರಿಗೆ ದೇವಸ್ಥಾನ ಬಗ್ಗೆ ಪ್ರೀತಿ ಇದ್ದಿದ್ದರೆ ಟಿಪ್ಪು ಜಯಂತಿ ಮಾಡುತ್ತಿರಲಿಲ್ಲ: ಸಂಸದ ಪ್ರತಾಪ್ ಸಿಂಹ

1 min read

ಮೈಸೂರು,ಸೆ.17- ಸಿದ್ದರಾಮಯ್ಯನವರಿಗೆ ಈಗ ದೇವಸ್ಥಾನದ ಮೇಲೆ ಪ್ರೀತಿ ಬಂದಿದೆ. ನಿಮಗೆ ಯಾಕೆ ದೇಗುಲದ ಮೇಲೆ ಇಷ್ಟೊಂದು ಪ್ರೀತಿ ಬಂದಿದೆ. ನಿಮಗೆ ದೇವಸ್ಥಾನ ಬಗ್ಗೆ ಪ್ರೀತಿ ಇದ್ದಿದ್ದರೆ ವಿಗ್ರಹ ಭಂಜಕ ಟಿಪ್ಪು ಜಯಂತಿ ಮಾಡುತ್ತಿರಲಿಲ್ಲ ಎಂದು ಸಂಸದ ಪ್ರತಾಪ ಸಿಂಹ ಕುಟುಕಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ನೀವು ದೇವಸ್ಥಾನ ಉಳಿಸಿಕೊಳ್ಳಲು ಯಾವ ಪ್ರಯತ್ನವನ್ನೂ ನಿಮ್ಮ ಆಡಳಿತದಲ್ಲಿ ಆಗಲಿಲ್ಲ. ನಿಮಗೆ ದೇವಸ್ಥಾನ ಬಗ್ಗೆ ಪ್ರೀತಿ ಇದ್ದಿದ್ದರೆ ಟಿಪ್ಪು ಜಯಂತಿ ಮಾಡುತ್ತಿರಲಿಲ್ಲ. ವೋಟಿಗಾಗಿ ವೀರಶೈವ – ಲಿಂಗಾಯತ ಜಾತಿ ಒಡೆಯುತ್ತಿರಲಿಲ್ಲ ಎಂದು ಟೀಕಿಸಿದರು.
ಟಿಪ್ಪು ಜಯಂತಿ ಆಚರಣೆ ಮಾಡುವುದರಲ್ಲಿ ನಿರತರಾಗಿದ್ದ ನಿಮಗೆ ಕೋರ್ಟ್ ಆದೇಶ ಗೊತ್ತಾಗಲಿಲ್ವ ಸಿದ್ದರಾಮಯ್ಯಮವರೇ? ಎಂದು ಪ್ರಶ್ನಿಸಿರುವ ಅವರು, ತಮ್ಮ ಆಡಳಿತವಾಧಿಯಲ್ಲಿ ಕೋರ್ಟ್ ಗೆ ವರದಿ ಕೊಡಬೇಕಿತ್ತು. 8 ವಾರದಲ್ಲಿ ವರದಿ ನೀಡಲು ಕೋರ್ಟ್ ಗಡುವು ನೀಡಿತ್ತು. 2018 ಫೆ. 6 ರಂದು ದೇವಸ್ಥಾನ ತೆರವು ವಿಚಾರದಲ್ಲಿ ಅಂತಿಮ ಆದೇಶ ಕೊಟ್ಟಿದೆ. ಈ ಆದೇಶವನ್ನು ನಿಮಗೂ ಐಎಎಸ್ ಅಧಿಕಾರಿಗಳು ಸರಿಯಾಗಿ ವಿವರಿಸಿಲ್ಲ ಎಂದರು.
ಬಿಜೆಪಿ ಆಡಳಿತದಲ್ಲೂ ಆ ತಪ್ಪು ನಡೆಯಿತು. ಆಡಳಿತಾತ್ಮಕ ವಿಚಾರದಲ್ಲಿ ಐಎಎಸ್ ಅಧಿಕಾರಿಗಳು ಸರಕಾರಕ್ಕೆ ಸರಿಯಾದ ವಿವರಣೆ ನೀಡುತ್ತಿಲ್ಲ. ರಾಜಕಾರಣಿಗಳು ಅಧಿಕಾರಿಗಳು ಮಾಡುವ ತಪ್ಪುನ್ನು ತಮ್ಮ ಮೇಲೆ ಎಳೆದುಕೊಳ್ಳಬೇಡಿ ಎಂದು ಹೇಳಿದರು.
ಶಿಕ್ಷಣ ಪಡೆಯದವರು ರಾಜಕಾರಣಿಗಳು ಆಗಬಹುದು. ಆದರೆ ಇಡೀ ಆಡಳಿತಾತ್ಮಕ ಚುಕ್ಕಾಣಿಯನ್ನ ಅಧಿಕಾರಿಗಳಿಗೆ ಕೊಡ್ತಿವಿ. ಯಾಕಂದ್ರೆ ಆಡಳಿತ ವಿಚಾರದಲ್ಲಿ ಇವರಿಗೆ ಎಲ್ಲವು ತಿಳಿದಿರುತ್ತೆ. ಇವರು ಐಎಎಸ್ಗಳಾಗಿ ಎಲ್ಲವನ್ನು ತಿಳಿದಿರುತ್ತಾರೆ ಅಂತ ಎಂದು ಸುಪ್ರೀಂಕೋರ್ಟ್ ಆದೇಶವನ್ನು ಓದಿ ಮಾಹಿತಿ ನೀಡಿದರು.
ದೇಗುಲ ಹೊಡೆಯುವ ಮುನ್ನ ಮಾಹಿತಿ ನೀಡಬೇಕು. ಅಧಿಕಾರಿಗಳು ಮಾಡಿದ ಈ ಗೊಂದಲಕ್ಕೆ ನೀವು ಮೈಮೇಲೆ ಎಳೆದುಕೊಳ್ಳಬೇಡಿ. ದೇಗುಲ ತೆರವಿನ ನಂತರ ಎದ್ದಿರುವ ವಿಚಾರದ ಬಗ್ಗೆ ಮಾತಾಡುತ್ತಿದ್ದೇನೆ. ಇದು ಆ ಸರ್ಕಾರ, ಈ ಸರ್ಕಾರ ಎಂದು ಮಾತೋಡದಲ್ಲ. ಇದು ತಾರ್ಕಿಕ ಅಂತ್ಯ ಕಾಣಬೇಕಾದರೆ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಆದರೆ ಇದನ್ನ ಆರೋಪ ಪ್ರತ್ಯಾರೋಪ ಮಾಡ್ತಿದ್ದಾರೆ. ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇದ್ದರು ಮಿಸ್ ಲೀಡ್ ಆಗಿದೆ. ಇಲ್ಲಿ ಅಧಿಕಾರಿಗಳು ನಿಮಗೆ ಹೇಗೆ ಮಿಸ್ ಲೀಡ್ ಮಾಡಿದ್ರು ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು. ಇದನ್ನ ಕೆಡಿಪಿ ಸಭೆಯಲ್ಲಿ ನಾನು ಮಾತಾಡಿದೆ.ಆ ವೇಳೆ ಜಿಲ್ಲಾಧಿಕಾರಿಗಳು ಸುಪ್ರೀಂಕೋರ್ಟ್ ಆದೇಶ ಇದೆ ಎಂದರು. ಆದರೆ ಮೊದಲು ಸುಪ್ರೀಂಕೋರ್ಟ್ನ ಆದೇಶ ಮೊದಲು ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ಸರ್ಕಾರಗಳಿಂದ ಈ ತಪ್ಪು ಆಗಿದೆ. ಆದರೆ ಇದರ ನೇತೃತ್ವ ಸರ್ಕಾರದ ಅಧಿಕಾರಿಗಳು ವಹಿಸಿಕೊಳ್ಳಬೇಕು ಎಂದರು.
ನಂಜನಗೂಡು ತಹಶೀಲ್ದಾರ್ ಮೇಲೆ ಶಿಸ್ತು ಕ್ತಮ ಆಗಬೇಕು. ವಜಾ ಮಾಡಿ ಅಂತ ನಾನು ಸರ್ಕಾರಕ್ಕೆ ಒತ್ತಾಯ ಮಾಡಲ್ಲ. ಆದರೆ ನಂಜನಗೂಡಿನ ತಹಶೀಲ್ದಾರ್ ನಡೆದುಕೊಂಡಿರುವ ರೀತಿಯನ್ನು ಕಟುವಾಗಿ ಖಂಡಿಸುತ್ತೇನೆ. ಜಿಲ್ಲಾಧಿಕಾರಗಳು ಎಲ್ಲಾ ದೇವಸ್ಥಾನಕ್ಕೂ ಹೋಗಿ ನೋಡೊಕಾಗಲ್ಲ. ತಹಶೀಲ್ದಾರ್ ಅದನ್ನ ಸರಿಯಾಗಿ ನಿರ್ವಹಣೆ ಮಾಡ್ಬೇಕಿತ್ತು. ಆ ದೇವಸ್ಥಾನ ಯಾರಿಗೂ ತೊಂದರೆ ಕೊಡ್ತಿರಲಿಲ್ಲ. ಆದರೂ ಅದನ್ನ ತೆರವು ಮಾಡಿರೋದು ಖಂಡನೀಯ ಎಂದು ಹೇಳಿದರು.

About Author

Leave a Reply

Your email address will not be published. Required fields are marked *