ದೆಹಲಿ ಕೋರ್ಟ್ ಹಾಲ್ನಲ್ಲೇ ಗುಂಡಿನ ದಾಳಿ!
1 min readದೆಹಲಿ ಕೋರ್ಟ್ ಆವರಣದಲ್ಲೇ ಗುಂಡಿನ ದಾಳಿ ನಡೆದು ಮೂವರು ಮೃತಪಟ್ಟ ಘಟನೆ ನಡೆದಿದೆ. ಇಂದು ದೆಹಲಿಯ ರೋಹಿಣಿ ಕೋರ್ಟ್ಗೆ ಗ್ಯಾಂಗ್ ಸ್ಟರ್ ಜೀತೇಂದ್ರ ಗೋಗಿಯನ್ನ ಕರೆತರಲಾಗಿತ್ತು. ಎದುರಾಳಿ ತಂಡದವರು ಕೂಡ ವಕೀಲರ ವೇಷದಲ್ಲಿ ಕೋರ್ಟ್ ಆವರಣ ಪ್ರವೇಶ ಮಾಡಿ ಕೋರ್ಟ್ ಹಾಲ್ನಲ್ಲೇ ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆಯಲ್ಲಿ ಗೋಗಿ ಸ್ಥಳದಲ್ಲೇ ಗುಂಡೇಟಿಗೆ ಬಲಿಯಾದ್ರೆ. ಇತ್ತ ಇಬ್ಬರು ಹಂತಕರನ್ನ ಪೊಲೀಸರು ಗುಂಡಿಟ್ಟಿದ್ದಾರೆ. ಘಟನೆಯಲ್ಲಿ ವಕೀಲರು ಸೇರಿ 6 ಮಂದಿ ಗಾಯಗೊಂಡಿದ್ದು, ಕೋರ್ಟ್ ಒಳಗೆ ಹೇಗೆ ಬಂದೂಕು ಬಂತು ಎಂಬುದೇ ಇದೋಗಾ ಯಕ್ಷ ಪ್ರಶ್ನೆಯಾಗಿದೆ. ಸದ್ಯ ಘಟನೆಯಿಂದ ಇಡೀ ದೇಶವೇ ಬೆಚ್ಚಿ ಬಿದ್ದಿದ್ದು, ಭದ್ರತೆಯನ್ನೇ ಅಣಕಿಸುವಂತಿದೆ.