ಮದದಲ್ಲಿ ʻವಿಕ್ರಮʼ, ಈ ಬಾರಿಯ ದಸರಾ ಜಂಬೂಸವಾರಿಯಿಂದ ಹೊರಕ್ಕೆ
1 min readಮೈಸೂರು,ಅ.8-ಈ ಬಾರಿ ದಸರಾ ಜಂಬೂಸವಾರಿ ವೇಳೆ ವಿಕ್ರಮ ಆನೆಯನ್ನು ಬಳಸಿಕೊಳ್ಳುವುದಿಲ್ಲ ಎಂದು ಡಿಸಿಎಫ್ ಕರಿಕಾಳನ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕ್ರಮನನ್ನು ಪಟ್ಟದ ಆನೆಯಾಗಿ ಬಳಕೆ ಮಾಡುತ್ತಿದ್ದೆವು. ಆದರೆ ವಿಕ್ರಮ ಆನೆ ಮದದಲ್ಲಿ ಇದ್ದಾನೆ. ಹೀಗಾಗಿ ಈ ಬಾರಿ ಜಂಬೂ ಸವಾರಿಗೆ ವಿಕ್ರಮ ಆನೆಯನ್ನು ಬಳಸುವುದಿಲ್ಲ. ವಿಕ್ರಮನ ಬದಲು ಧನಂಜಯ ಮತ್ತು ಗೋಪಾಲಸ್ವಾಮಿ ಆನೆಗಳನ್ನು ಪಟ್ಟದಾನೆಯಾಗಿ ಕಳುಹಿಸುತ್ತಿದ್ದೇವೆ ಎಂದರು.
ಆನೆಗಳು ಫಿರಂಗಿ ತಾಲೀಮನ್ನು ಯಶಸ್ವಿಯಾಗಿ ಮುಗಿಸಿವೆ. ನಮಗೆ ಜಂಬೂಸವಾರಿಗೆ ಐದು ಆನೆಗಳು ಸಾಕು. ಆದರೆ ನಾವು 8 ಆನೆಗಳು ಕರೆ ತಂದಿದ್ದು, ನಗರದ ವಾತಾವರಣಕ್ಕೆ ಹೊಂದಿಕೊಳ್ಳಬೇಕೆಂದು ಕೊನೆ ಹಂತದಲ್ಲಿ ಸಮಸ್ಯೆ ಆಗದಂತೆ ಕ್ರಮ ವಹಿಸಿದ್ದೇವೆ. ಈ ರೀತಿಯ ಸಮಸ್ಯೆಯಾಗುವ ಕಾರಣ ಮೂರು ಆನೆ ಹೆಚ್ಚವರಿಯಾಗಿ ಕರೆತಂದಿದ್ದೇವೆ. ಅಭಿಮನ್ಯು ಹೆಲ್ತ್ ಚೆನ್ನಾಗಿದೆ. ಅಕ್ಕಪಕ್ಕ ಎರಡು ಹೆಣ್ಣಾನೆ ಬಳಕೆ ಆಗುತ್ತೆ ಎಂದು ಮಾಹಿತಿ ನೀಡಿದರು.
ನಿಶಾನೆ ಆನೆ, ನೌಫತ್ ಆನೆ ಸೇರಿ ಒಟ್ಟು 5 ಆನೆ ಜಂಬೂ ಸವಾರಿಗೆ ಸಾಕು. ನಮಗೆ ಯಾವುದೇ ಆನೆಗಳಿಂದ ಸಮಸ್ಯೆ ಇಲ್ಲ. ಈವರೆಗೂ 1200 ಕೆಜಿವರೆಗೂ ತೂಕದ ತಾಲೀಮ ನಡೆಸಿದ್ದೇವೆ. ಜಂಬೂಸವಾರಿಗೆ ಸಮಸ್ಯೆ ಆಗದಂತೆ ಸ್ಟ್ಯಾಂಡ್ ಬೈ ಆನೆ ಇದೆ. ಲಕ್ಮೀ ಹಾಗೂ ಧನಂಜಯ ಆನೆ ಇಂದು ಫಿರಂಗಿಗೆ ಬೆದರಿದೆ. ಧನಂಜಯ ಡೋಳು, ಬ್ಯಾಂಡು ಯಾವುದಕ್ಕೂ ಹೆದರಲ್ಲ. ಕೇವಲ ಫಿರಂಗಿ ತಾಲೀಮಿಗೆ ಮಾತ್ರ ಬೆದರುತ್ತಿದ್ದಾನೆ. ನಾಳೆ ಬೆಳಿಗ್ಗೆ ಶ್ರೀರಂಗಪಟ್ಟಣ ದಸರಾಗೆ ಎರಡು ಆನೆ ಕಳುಹಿಸುತ್ತೇವೆ. ಗೋಪಾಲಸ್ವಾಮಿ ಹಾಗೂ ಕಾವೇರಿ ಆನೆಯನ್ನು ಮೈಸೂರಿನಿಂದ ಕಳುಹಿಸುತ್ತೇವೆ ಎಂದು ತಿಳಿಸಿದರು.