ದಸರಾಗೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮಂದಿಗೆ ಅವಕಾಶ ನೀಡಲು‌ ಚಿಂತೆನೆ.!

1 min read

ನಾಡಹಬ್ಬ ಮೈಸೂರು ದಸರಾಗೆ ಅ.7ರಂದು ಚಾಲನೆ ಸಿಗಲಿದೆ. ಈ ನಡುವೆ 2021ರ ದಸರಾ ಮಹೋತ್ಸವಕ್ಕೆ ಪ್ರತ್ಯೇಕ ಮಾರ್ಗಸೂಚಿ ತಯಾರಿಸಲು ಸರ್ಕಾರ ಚಿಂತನೆ ಮಾಡಿದೆಯಂತೆ.

ಹೌದು, ಕೊರೊನಾ 3ನೇ ಅಲೆ ಆತಂಕದಲ್ಲೇ ಹೊಸ ಮಾರ್ಗಸೂಚಿ ಮಾಡಿಕೊಳ್ಳಲು ಸರ್ಕಾರ ಮುಂದಾಗಿದ್ದು ದಸರಾ ಕಾರ್ಯಕ್ರಮಗಳ ನಿರ್ಬಂಧಗಳಲ್ಲಿ ಕೆಲ ಸಡಿಲಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

2020ರ ದಸರಾ ವೇಳೆ ಅತ್ಯಂತ ಕಡಿಮೆ ಮಂದಿಗೆ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಹೆಚ್ಚು ಜನರಿಗೆ ಅವಕಾಶ ನೀಡಲು ಸಾಕಷ್ಟು ಮನವಿ ಬಂದಿದೆ ಎನ್ನಲಾಗಿದೆ. ಇದರಿಂದ ಕಳೆದ ಬಾರಿ ದಸರಾ ಉದ್ಘಾಟನೆಗೆ 150 ಜನ, ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 50 ಜನ ಹಾಗೂ ಜಂಬೂಸವಾರಿಗೆ 300 ಜನರಿಗೆ ಅವಕಾಶ ನೀಡಲಾಗಿತ್ತು. ಈ‌ ಬಾರಿ ಅದರ ಎರಡು ಪಟ್ಟು ಜನರಿಗೆ ಸಾಧ್ಯತೆ ಇದೆ ಎನ್ನಲಾಗಿದೆ.

ಇತ್ತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಸರ್ಕಾರಕ್ಕೆ ಮನವಿ ಮಾಡಿದ್ದು, ತಜ್ಞರ ಜೊತೆ ಚರ್ಚಿಸಿ ಪ್ರತ್ಯೇಕ ಮಾರ್ಗಸೂಚಿ ಚಿಂತನೆಗೆ ರಾಜ್ಯ ಸರ್ಕಾರ ತೀರ್ಮಾನಿಸುತ್ತಿದೆ ಎನ್ನಲಾಗಿದೆ.

About Author

Leave a Reply

Your email address will not be published. Required fields are marked *