ಮಾಧ್ಯಮವನ್ನ ಕಂಡರೆ ದರ್ಶನ್‌ಗ್ಯಾಕೆ ಕೋಪ ಗೊತ್ತಾ!?
1 min readಮಾಧ್ಯಮವನ್ನ ಕಂಡರೆ ದರ್ಶನ್‌ಗ್ಯಾಕೆ ಕೋಪ ಗೊತ್ತಾ!?
ಡಿ ಬಾಸ್, ಚಾಲೆಂಜಿಂಗ್ ಸ್ಟಾರ್, ದಚ್ಚು, ಹೀಗೆ ನಾನಾ ಪೆಟ್ ನೇಮ್ ಮೂಲಕ ಕರೆಯೋದು ನಟ ದರ್ಶನ್‌ರನ್ನ. ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಇರೋದು ಕೂಡ ಡಿ ಬಾಸ್‌ಗೆನೆ. ಕಾರಣ ಅವರು ಪಟ್ಟ ಕಷ್ಟ, ಬೆಳೆದು ಬಂದ ಹಾದಿ. ಜೊತೆಗೆ ಅಭಿಮಾನಿಗಳ ಜೊತೆ ಮಕ್ಕಳಾಗೋ ರೀತಿ.
ಎಸ್ ಇದು ದರ್ಶನ್ ಅವರ ಇಮೇಜ್‌ನ್ನ ನೆಕ್ಷ್ಟ್ ಲೆವೆಲ್‌ಗೆ ಕೊಂಡೋಯ್ದಿದೆ. ಇಂತಹ ದರ್ಶನ್ ರಾಬರ್ಟ್ ಸಿನಿಮಾ ಬಂದ ವೇಳೆಯಲ್ಲಂತು ಎಲ್ಲಾ ನ್ಯೂಸ್ ಚಾನೆಲ್‌ಗಳಿಗು ವಿಶೇಷವಾದ ಇಂಟರ್ ವ್ಯೂಗಳನ್ನ ಕೊಟ್ಟಿದ್ದಾರೆ. ಇದರಲ್ಲಿ ಬೇರೆ ಯಾವುದೇ ಉದ್ದೇಶ ಇಲ್ಲದಿದ್ರು ಆ ಚಿತ್ರದ ಪ್ರಮೋಷನ್‌ಗೆ ದೊಡ್ಡ ಮಟ್ಟದ ಪಾತ್ರ ಕೂಡ ಮಾಧ್ಯಮದು ಇತ್ತು. ಈಗಾಗಿಯೇ ರಾಬರ್ಟ್ ಚಿತ್ರ ಸೂಪರ್ ಆಗಿದ್ರು ಪ್ರಮೋಷನ್ ಮಾಡಿದ್ದು ಮತ್ತೊಂದು ಹಂತಕ್ಕೆ ಕೊಂಡೋಯ್ದಿತ್ತು.
ಆದರೆ ರಾಬರ್ಟ್ ಚಿತ್ರದ ಬಳಿಕ ದಚ್ಚು ಕೊಂಚ ಮಾಧ್ಯಮದ ಮೇಲೆ ಗರಂ ಆಗಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ಅದೇ ಇಂದ್ರಜಿತ್ ಲಂಕೇಶ್ ಆರೋಪ ಹಾಗೂ ಕೆಲ ಮಾತುಕತೆ ಮೊದಲು ಇದಕ್ಕೆ ಪುಷ್ಠಿ ನೀಡಿತ್ತು. ಈ ಆರೋಪ ಪ್ರತ್ಯಾರೋಪದ ಮಧ್ಯೆ ದರ್ಶನ್ ಇಂದ್ರಜಿತ್ ಮೇಲೆ ಆಕ್ರೋಶ ಹೊರಹಾಕಿದ್ದರು. ಬಳಿಕ ತಮ್ಮ ತೋಟದ ಮನೆಯಲ್ಲಿ ಮಾಧ್ಯಮದವರ ಜೊತೆ ಮಾತಾಡಿ ಇದೇ ನನ್ನ ಕೊನೆಯ ಸಂದರ್ಶನ. ಇಂದ್ರಜಿತ್ ಇನ್ಮುಂದೆ ಯಾವುದೇ ಹೇಳಿಕೆಗು ನಾನು ಪ್ರತಿಕ್ರಿಯೆ ಕೊಡಲ್ಲ ಎಂದಿದ್ರು.
ಕಾರಣ, ಇಂದ್ರಜಿತ್ ಹೇಳಿಕೆ ಎಲ್ಲವು ಗಾಳಿಯಲ್ಲಿ ಗುಂಡು ಹೊಡೆದಂತೆ ಇತ್ತು. ಇದಕ್ಕೆ ಸರಿಯಾದ ಸಾಕ್ಷಿ ತೋರಿಸುವಂತೆ ಹೇಳಿದ್ದರು. ಆದರು ಕೂಡ ಇದು ಬರದಿದ್ದಾಗ ದರ್ಶನ್ ಅಲ್ಲಿಗೆ ಮಾತಾಡುವುದು ನಿಲ್ಲಿಸಿದ್ದರು. ಆದರೆ ದರ್ಶನ್ ಬೈಯ್ದರು ಎನ್ನಲಾದ ಆಡಿಯೊವೊಂದು ವೈರಲ್ ಆಗಿತ್ತು. ಈ ಆಡಿಯೋದಲ್ಲಿ ದರ್ಶನ್ ವಾಯ್ಸ್ ಹೋಲುವಂತ ಧ್ವನಿ ಇತ್ತು ಎಂಬ ಚರ್ಚೆ ಆಗಿತ್ತು. ಇದರಲ್ಲಿ ಮಾಧ್ಯಮಗಳಿಗೆ ದರ್ಶನ್ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂಬ ಆಡಿಯೋ ವೈರಲ್ ಆಗಿತ್ತು. ಇದರಿಂದ ಎಲ್ಲಾ ಮಾಧ್ಯಮಗಳು ದರ್ಶನ್ ಅವರ ಬಗ್ಗೆ ಯಾವುದೇ ಸುದ್ದಿ ಮಾಡದೆ ಬಾಯ್ ಕಾಟ್ ಮಾಡಿದ್ದವು. ಇದಕ್ಕೆ ಉದಾಹರಣೆ ಎಂದರೆ ಕ್ರಾಂತಿ ಚಿತ್ರಕ್ಕೆ ಸಿಗದ ಪ್ರಮೋಷನ್. ಇದ್ರಿಂದ ಯಾವುದೇ ಮಾಧ್ಯಮದಲ್ಲು ಕ್ರಾಂತಿ ಚಿತ್ರದ ಬಗ್ಗೆ ಸರಿಯಾದ ಮಾಹಿತಿಯು ಸಿಗಲಿಲ್ಲ.
ದರ್ಶನ್‌ಗೆ ಈ ವಿಚಾರಕ್ಕೆ ಮಾಧ್ಯಮದವರನ್ನ ಕಂಡರೆ ಆಗೋದಿಲ್ಲ
ಅದು ದರ್ಶನ್ ಬಹು ನಿರೀಕ್ಷಿತ ಚಿತ್ರ ಸರ್ದಾರ. ಆ ಚಿತ್ರದ ವೇಳೆ ಮಾಧ್ಯಮಗೋಷ್ಠಿ ಕರೆಯಲಾಗಿತ್ತು. ಆದರೆ ವೇಳೆ ದರ್ಶನ್ ಇಂದಿನ ರೀತಿ ದೊಡ್ಡ ಸ್ಟಾರ್ ಅಲ್ಲದಿದ್ದರೂ ಒಳ್ಳೆಯ ಹೆಸರು ಮಾಡಿದ್ದ ಪ್ರತಿಭಾನ್ವಿತ ನಟನಾಗಿದ್ರು. ಆದರೆ ಯಾವಾಗ ಆ ಮಾಧ್ಯಮಗೋಷ್ಠಿಗೆ ತಡವಾಗಿ ದರ್ಶನ್ ಬಂದರು. ಆ ವೇಳೆ ಮಾಧ್ಯಮದವರು ಯಾವ ಸಮಯ ಹೇಳಿ ಯಾವ ಸಮಯಕ್ಕೆ ಸುದ್ದಿಗೋಷ್ಠಿ ನಡೆಸುತ್ತಿರಾ ಎಂದು ಆಕ್ರೋಶ ಹೊರಹಾಕಿ ಬಾಯ್ ಕಾಟ್ ಮಾಡಿದ್ರು. ಈ ವೇಳೆ ದರ್ಶನ್ ತಡವಾಗಿದ್ದು ನಿಜ ಕ್ಷಮಿಸಿ ಎಂದರು ಹಲವರು ಅಂದಿನ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಲೇ ಇಲ್ಲ. ಇದರಿಂದ ದರ್ಶನ್‌ಗೆ ಮಾಧ್ಯಮದ ಆ ಸಂದರ್ಭ ಸಾಕಷ್ಟು ಬೇಸರ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂದರ್ಭ ದರ್ಶನ್ ಹಲವು ಬಾರಿ ಪ್ರಸ್ತಾಪ ಮಾಡಿ ಬೇಸರ ಹೊರಹಾಕಿದ್ದಾರೆ.
ಹಾಗಾಗಿ ದರ್ಶನ್ ಇವತ್ತಿಗು ಮಾಧ್ಯಮವನ್ನ ಕಂಡರೆ ಹೆಚ್ಚಾಗಿ ಇಷ್ಟ ಪಡೋದಿಲ್ಲ. ತಾವಾಯ್ತು ತಮ್ಕ ಅಭಿಮಾನಿಗಳಾಯ್ತು ಎಂಬಂತೆ ಇರುತ್ತಾರೆ. ಆದರೆ ಮಾಧ್ಯಮ ಹಾಗೂ ದರ್ಶನರ ಈ ಮುಸುಕಿನ ಗುದ್ದಾಟ ಆದಷ್ಟು ಬೇಗ ಬಗೆ ಹರಿದು ಡಿ ಬಾಸ್‌ರ ಎಲ್ಲಾ ಚಿತ್ರಗಳು ಪ್ರತಿಯೊಬ್ಬರಿಗು ಮಾಧ್ಯಮದ ಮೂಲಕ ತಲುಪಲಿ ಎಲ್ಲರು ಖುಷಿಯಾಗಿರಲಿ ಅನ್ನೋದಷ್ಟೇ ನಮ್ಮ ಆಶಯ
ನನ್ನೂರು ಮೈಸೂರು ಟೀಂ…