ಅತ್ಯಾಚಾರಿಗಳ ವಿರುದ್ಧ ಏಕಾಂಗಿಯಾಗಿ ಸೈಕಲ್ ಜಾಥಾ; ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಶಿಕ್ಷೆಗೆ ಆಗ್ರಹ

1 min read

ಮೈಸೂರು: ಅತ್ಯಾಚಾರಿಗಳ ವಿರುದ್ಧ ಯುವಕನೋರ್ವ ಏಕಾಂಗಿ ಸೈಕಲ್ ಜಾಥಾ ನಡೆಸುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕಠಿಣ ಶಿಕ್ಷೆಗೆ ಆಗ್ರಹಿಸುತ್ತಿದ್ದಾರೆ.

ಬೆಂಗಳೂರಿನ ಬನ್ನೇರುಘಟ್ಟದ ನಿವಾಸಿ ಕಿರಣ್ ಸತತ 86 ದಿನಗಳಿಂದ ಸೈಕ್ ತುಳಿದು ಪ್ರತಿ ಜಿಲ್ಲೆಗೂ ತೆರಳಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸುತ್ತ ಬರುತ್ತಿದ್ದಾರೆ. 3500 ಕಿಲೋಮೀಟರ್ ಜಾಗೃತಿ ಯಾತ್ರೆ ಇದು. ಇಂದು ಕಿರಣ್ ಮೈಸೂರಿಗೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಿದರು.

ಅತ್ಯಾಚಾರ ಪ್ರಕರಣದಿಂದ ಮನನೊಂದು ಜಾಗೃತಿಗೆ ಮುಂದಾಗಿದ್ದಾರೆ ಕಿರಣ್. ಲಾಕ್ ಡೌನ್ ಬಳಿಕ ಜಾಗೃತಿ ಯಾತ್ರೆ ಮಾಡುತ್ತಿದ್ದು, ಸದ್ಯ 26 ಜಿಲ್ಲೆಗಳನ್ನು ತಲುಪಿದ್ದರೆ ಕಿರಣ್. ಇನ್ನು 4 ಜಿಲ್ಲೆಗಳ ಪ್ರಯಾಣ ಬಾಕಿ ಇದ್ದು, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಲು ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಿದ್ದಾರೆ ಕಿರಣ್.

About Author

Leave a Reply

Your email address will not be published. Required fields are marked *