ಗುಬ್ಬಚ್ಚಿ ಉಳಿಸಿ ಸೈಕಲ್ ಜಾಥ ಅಭಿಯಾನ!

1 min read

ಕೆಎಂಪಿಕೆ ಟ್ರಸ್ಟ್ ಹಾಗೂ ಪರಿಸರ ಸ್ನೇಹಿ ತಂಡದ ವತಿಯಿಂದ ಅಂತರಾಷ್ಟ್ರೀಯ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಜಾಗೃತಿಗಾಗಿ ನಡೆದಂತಹ ಪರಿಸರ ಸೈಕಲ್ ಜಾಥದಲ್ಲಿ 350ಕ್ಕೂ ಹೆಚ್ಚು ಮಂದಿ ಸೈಕಲ್ ಸವಾರರು ಭಾಗವಹಿಸಿದ್ದರು, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮಾರ್ಗವಾಗಿ ಜಯಚಾಮರಾಜೇಂದ್ರ ವೃತ್ತ ಚಾಮರಾಜ ಜೋಡಿ ರಸ್ತೆ ರಾಮಸ್ವಾಮಿ ವೃತ್ತ ಮಹಾರಾಜ ಕಾಲೇಜು ಮೈದಾನ ಕೃಷ್ಣಬುಲೇ‌ ವಾರ್ಡ್ ರೋಡ್ ಕೌಟಿಲ್ಯ ವೃತ್ತದಿಂದ ಕುಕ್ಕರಹಳ್ಳಿ ಕೆರೆ ವರೆಗೂ ಸೈಕಲ್ ಜಾಥ ಸಾಗಿತು ವಿಶೇಷವಾಗಿ ಎನ್.ಸಿ.ಸಿ ಮಹಿಳೆಯರು ಹಿರಿಯನಾಗರೀಕರಿಂದ ಸಣ್ಣಮಕ್ಕಳು ಕೂಡ ಹುರುಪಿನಿಂದ ಅವರ ಪೋಷಕರರೊಂದಿಗೆ ಸೈಕಲ್ ಸವಾರಿ ಮಾಡಿದರು ಭಾಗವಹಿಸಿದ ಕುಕ್ಕರಹಳ್ಳಿ ಕೆರೆ ತಲುಪಿದ ಎಲ್ಲಾ ಸೈಕಲ್ ಸವಾರರಿಗೂ ಸಮಾರೋಪದಲ್ಲಿ ಹೆಚ್. ವಿ ರಾಜೀವ್ ಅಭಿನಂದನಾ ಪತ್ರ ವಿತರಿಸಿದರು, ಪರಿಸರ ಉಳಿಸಿ ಪ್ರಾಣಿಪಕ್ಷಿ ರಕ್ಷಿಸಿ, ಹಸಿರೇ ಉಸಿರು, ಮಾಲನ್ಯ ಮುಕ್ತ ಮೈಸೂರು, ಬೇಸಿಗೆಯಲ್ಲಿ ಪ್ರಾಣಿಪಕ್ಷಿಗಳಿಗೆ ಮನೆಗಳ ಮೇಲೆ ತಾರಸಿ ಆಹಾರ ನೀರು ಇಡೋಣ ಎಂಬ ಘೋಷಣೆಗಳ ಭಿತ್ತಿಪತ್ರದ ಮೂಲಕ ಪರಿಸರ ಕಾಳಜಿ ಸಂದೇಶ ಸಾರಿದರು
ಕಾರ್ಯಕ್ರಮದಲ್ಲಿ ಸೈಕಲ್ ಹೊಡೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಶಾಸಕ ಎಲ್ ನಾಗೇಂದ್ರ
ಪರಿಸರ ಉಳಿದರೇ ಮಾತ್ರ ಭೂಮಂಡಲದಲ್ಲಿ ಮನುಷ್ಯರು ಬದುಕಲು ಸಾಧ್ಯ, ಬೇಸಿಗೆಯ ಬಿಸಲಿನ ತಾಪಮಾನ ಹೆಚ್ಚುತ್ತಿರುವದರಿಂದ ಸಣ್ಣಪುಟ್ಟ ಪ್ರಾಣಿಪಕ್ಷಿಗಳ ಜೀವ ಉಳಿಸಲು ಪ್ರತಿಯೊಬ್ಬರ ತಮ್ಮ ಮನೆಯ ತಾರಸಿಯ ಮೇಲೆ ನೀರು ಧಾನ್ಯಗಳನ್ನ ಇಡಲು ಮುಂದಾಗಬೇಕು, ಗುಬ್ಬಚ್ಚಿಯ ಸಂತತಿ‌ ಉಳಿಯಬೇಕಿದೆ, ಭೂಮಿಯಲ್ಲಿ ಮನುಷ್ಯರಂತೆ ಪ್ರಾಣಿಪಕ್ಷಿಗಳಿಗೂ ಬದುಕುವ ಸ್ವತಂತ್ರತೆಯಿದೆ, ಯುವಕರು ಹೆಚ್ಚಾಗಿ ಪರಿಸರ ಸೇವಾಮನೋಭಾವ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.

ಇದೇ ಸಂಧರ್ಭದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಮಾತನಾಡಿ ಪುರಾತನ ದೇವಸ್ಥಾನ ಗುಡಿಗೋಪುರಗಳಲ್ಲಿ ಬೆಟ್ಟಗುಡ್ಡಗಳಲ್ಲಿ ಮಾತ್ರ ಗುಬ್ಬಚ್ಚಿಗಳು ಈಗಲೂ ಹೆಚ್ಚಿರುತ್ತವೆ ಕಾರಣ ಅಲ್ಲಿಯ ಸುಂದರ ವಾತಾವರಣ ಮತ್ತು ಪರಿಸರ, ಆದರೆ ಮನುಷ್ಯ ಕಾಂಕ್ರಿಟ್ ಆಧುನಿಕ ಕಟ್ಟಡಗಳ ಪ್ರತುಷ್ಠೆಗೆ ಮಾರು ಹೋಗಿ ಆರೋಗ್ಯಕ್ಕಾಗಿ ಅಲೆದಾಡುವ ದಿನಗಳು ಕಾಣುತ್ತಿದ್ದೇವೆ, ಭವಿಷ್ಯಕ್ಕಾಗಿ ನಾವು ಪರಿಸರ ಗಿಡಮರಗಳನ್ನ ಹೆಚ್ಚಾಗಿ ಬೆಳಸಲು ಮುಂದಾಗಬೇಕು ಎಂದರು

ನಂತರ ಯುವ ಮುಖಂಡ ಎನ್.ಎಮ್ ನವೀನ್ ಕುಮಾರ್ ಮಾತನಾಡಿ ಪ್ರಾಣಿಪಕ್ಷಿಗಳ ರಕ್ಷಣೆಗೆ ಪರಿಸರ ಉಳಿವಿಗೆ ಜಿಲ್ಲಾಳಿತ ಎನ್.ಜಿ.ಓ ಗಳ ಸ್ವಯಂಪ್ರೇರಿತರ ವಿಭಾಗ ರಚಿಸಲು ಮುಂದಾಗಬೇಕು, ಎತ್ತರದ ಕಟ್ಟಡ ಬಂದ ಮೇಲೆ ಪಕ್ಷಿಗಳ ನೆಲೆಗಳಿಗೆ ತೊಂದರೆಯಾಗಿವೆ ಕೆ.ಆರ್ ಆಸ್ಪತ್ರೆಯ ಆವರಣದ ಮರಗಳಲ್ಲಿ ಸಂಜೆ ಹೊತ್ತು ಸಾವಿರಕ್ಕೂ ಹೆಚ್ಚು ಗಿಳಿಗಳು ಮೈನಾ ಹಕ್ಕಿಗಳು ಸೇರುತ್ತವೆ ಕುಕ್ಕರಹಳ್ಳಿ ಕಾರಂಜಿ ಕೆರೆ ಲಿಂಗಾಬುದಿ ಕೆರೆ ಹೆಬ್ಬಾಳ ಕೆರೆಗಳಲ್ಲಿ ಎತ್ತರದ ಮರಗಳನ್ನ ಬೆಳಸಲು ಮುಂದಾಗಬೇಕು ಇದರಿಂದ ವಲಸೆ ಬರುವ ಹಕ್ಕಿಗಳಿಗೆ ನೆಲೆ‌ ಸಿಕ್ಕಾಂತಾಗುತ್ತವೆ ಎಂದರು

ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ರವರು ಮಾತನಾಡಿ ಸೋಲಾರ್ ವಿದ್ಯುತ್ ಬಂದಮೇಲೆ ಮರಗಳ ಹನನ‌ ಕ್ರಮೇಣ ಕಡಿಮೆಯಾಯಿತು ಆದರೆ ಮರಗಿಡಗಳನ್ನ ಬೆಳಸಲು ನಾಗರೀಕರು ಹೆಚ್ಚಾಗಿ ಮುಂದಾಗುತ್ತಿಲ್ಲ ಇದು ಮುಂದಿನ ದಿನದಲ್ಲಿ‌ ಆಮ್ಲಜನಕ ಉತ್ಪಾದನೆಗೆ ತೊಂದರೆಯಾಗುತ್ತದೆ ಹಾಗಾಗಿ ಮನಗೊಂದು ಗಿಡ ನೆಡಲು ಮುಂದಾಗಬೇಕು‌ ಎಂದರು

ಮಹಾಪೌರರಾದ ಸುನಂದಾ ಪಾಲನೇತ್ರ ,ಶಾಸಕರಾದ ಎಲ್ ನಾಗೇಂದ್ರ ,ಮೂಡ ಅಧ್ಯಕ್ಷರಾದ ಎಚ್ ವಿ ರಾಜೀವ್ ,ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ,ಬಿಳಿಗಿರಿ ರಂಗನಬೆಟ್ಟದ ಮುಖ್ಯಾಧಿಕಾರಿ ಮಲ್ಲೇಶಪ್ಪ , ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ,ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕರಾದ ಸಿ ಜಿ ಗಂಗಾಧರ್ ,ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ,ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್, ಸುಯೋಗ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ॥ ಎಸ್ ಪಿ ಯೋಗಣ್ಣ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ,ಮಹರ್ಷಿ ಶಾಲೆಯ ಮುಖ್ಯಸ್ಥರಾದ ಭವಾನಿ ಶಂಕರ್,ನಗರ ಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್ ,
ಮೃಗಾಲಯ ಪ್ರಾಧಿಕಾರ ಸದಸ್ಯರಾದ ಜ್ಯೋತಿ ರಚನಾ ,ರಾಜ್ ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ರಾಮೇಗೌಡ ,ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ , ಪರಿಸರ ಸ್ನೇಹಿ ಬಳಗದ ಅಧ್ಯಕ್ಷ ಲೋಹಿತ್ ,ಅಜಯ್ ಶಾಸ್ತ್ರಿ, ಜೋಗಿ ಮಂಜು, ವಿನಯ್ ಕಣಗಾಲ್,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಹರೀಶ್ ನಾಯ್ಡು ,ನಗರ ಪಾಲಿಕಾ ನಾಮನಿರ್ದೇಶನದ ಕೆಜೆ ರಮೇಶ್ ,ಜಗದೀಶ್, ಶಿವರಾಜ್,ಕೇಬಲ್ ಮಹೇಶ್ , ನವೀನ್ ಕೆಂಪಿ ,ರಾಕೇಶ್ ಕುಂಚಿಟಿಗ ,ಎಸ್ ಎನ್ ರಾಜೇಶ್ ,ಹಾಗೂ ಎನ್ ಸಿಸಿಯ ಮಕ್ಕಳು ಹಾಜರಿದ್ದರು

About Author

Leave a Reply

Your email address will not be published. Required fields are marked *