4 ದಿನ 2 ನೆಗೆಟಿವ್ ವರದಿ, 2 ಪಾಸಿಟಿವ್ ವರದಿ!
1 min readಮೈಸೂರಿನಲ್ಲಿ ಕೊವಿಡ್ ರಿಪೋರ್ಟ್ ಗೊಂದಲವಾಗಿದ್ದು ಇದರಿಂದ ಅಂತರರಾಷ್ಟ್ರೀಯ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಿಪೋರ್ಟ್ ಗೊಂದಲಕ್ಕೆ ಅತ್ತ ವಿದೇಶಿ ಪ್ರಯಾಣವು ಇಲ್ಲದೆ ಹಾಕಿದ ಹಣವೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಕೊವಿಡ್ ನೆಗೆಟಿವ್ ವರದಿ ಗೊಂದಲದ ಗೂಡಾಗುವಂತೆ ಮಾಡಿದೆ. ಹೌದು, ನಾಲ್ಕು ದಿನಗಳ ಅಂತರದಲ್ಲಿ 4 ಬಾರಿ ಪರೀಕ್ಷೆ ಮಾಡಿಸಿದ ಮೈಸೂರಿನ ಗುರುಪ್ರಸಾದ್ ಅವರಿಗೆ ಎರಡು ಬಾರಿ ನೆಗೆಟಿವ್ ಎರಡು ಬಾರಿ ಪಾಸಿಟಿವ್ ಬಂದಿದೆ.
ಜನವರಿ 14 ರಂದು ದುಬೈಗೆ ಪ್ರಯಾಣಿಸಬೇಕಿದ್ದ ಗುರುಪ್ರಸಾದ್ ಹಾಗೂ ದೀಪಕ್, ಗೈಡ್ ಲೈನ್ಸ್ ಪ್ರಕಾರ 48 ಗಂಟೆ ಒಳಗೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಕೊವಿಡ್ ಪರೀಕ್ಷೆ ಮಾಡಿಸಿದ್ದಾರೆ. ಈ ವೇಳೆ ಇಬ್ಬರಿಗೂ ನೆಗೆಟಿವ್ ವರದಿ ಬಂದಿದೆ. ಆದ್ರೆ ಜ.14ರಂದು ಬೆಂಗಳೂರಿನ ಏರ್ಪೋರ್ಟ್ ನಲ್ಲಿ ತಪಾಸಣೆ ಮಾಡಿದಾಗ ಪಾಸಿಟಿವ್ ವರದಿ ಬಂದಿದೆ.
ಏರ್ಪೋರ್ಟ್ ನಲ್ಲಿ ಎರಡು ಬಾರಿ ತಪಾಸಣೆ ಮಾಡಿದರು ಪಾಸಿಟಿವ್ ಬಂದಿದೆ. ಈಗಾಗಿ ವಾಪಸ್ ಮೈಸೂರಿಗೆ ಆಗಮಿಸಿದ ಇಬ್ಬರು ಪ್ರಯಾಣಿಕರು, ಜ.15ರಂದು ಮತ್ತೆ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಕೊವಿಡ್ ಪರೀಕ್ಷೆ ಮಾಡಿಸಿದ್ದಾರೆ. ಜೆ.ಎಸ್.ಎಸ್ ಆಸ್ಪತ್ರೆಯ ವರದಿಯಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದೆ. ಅಲ್ಲಿಗೆ 24 ಗಂಟೆಯಲ್ಲಿ ವಿವಿಧ ರೀತಿಯ ರಿಪೋರ್ಟ್ ಬಂದಿದ್ದು, ಗೊಂದಲದ ಗೂಡಾಗಿ ಸಮಸ್ಯೆ ಉಂಟಾಗಿದೆ.