ಮೈಸೂರಲ್ಲಿ ಕರೋನಾ ಹೆಚ್ಚಳ- ಸಿದ್ದವಾಯ್ತು ಆಕ್ಸಿಜನ್‌ವುಳ್ಳ ಆಸ್ಪತ್ರೆ!

1 min read

ಮೈಸೂರಲ್ಲಿ ದಿನೆ ದಿನೆ ಕೊರೋನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಸೊಂಕಿತರಿಗಾಗಿ ಕೋವಿಡ್ ಕೇರ್ ಸೆಂಟರ್ ಸಜ್ಜುಗೊಳುತ್ತಿದೆ. ಮೈಸೂರು ಜಿಲ್ಲಾಡಳಿತ, ಮೈಸೂರು ಪಾಲಿಕೆ ನೇತೃತ್ವದಲ್ಲಿ ಮುಂಜಾಗ್ರತ ಕ್ರಮವಾಗಿ ಈ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಇದಕ್ಕಾಗಿ ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಪುನಾರಂಭವಾಗುತ್ತಿದೆ.

ಈಗಾಗಲೇ ಸುಸಜ್ಜಿತ ಹಾಸಿಗೆ ಹಾಗೂ ಆಕ್ಸಿಜನ್ ಬೆಡ್ ಗಳ ವ್ಯವಸ್ಥೆ ಆಗುತ್ತಿದ್ದು, 100 ಆಕ್ಸಿಜನ್ ಬೆಡ್, 100 ಸಾಮಾನ್ಯ 100 ಐಸಿಯು ಬೆಡ್ ಸಜ್ಜುಗೊಂಡಿದೆ. ಸೋಂಕಿತರ ಚಿಕಿತ್ಸೆಗಾಗಿ ಹೆಚ್ಚುವರಿ ವೈದ್ಯರು ಹಾಗೂ ಅರೋಗ್ಯ ಕಾರ್ಯಕರ್ತರ ನೇಮಕವಾಗಿದ್ದು, ಆಕ್ಸಿಜನ್ ಸಮಸ್ಯೆ ನಿಗಿಸಲು ನೂತನವಾಗಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗಿದೆ.

ಕೊರೋನಾ ಸೊಂಕಿತರಿಗೆ ಯಾವುದೇ ಸಮಸ್ಯೆ ಆಗದಂತೆ ಉತ್ತಮ ಚಿಕಿತ್ಸೆ ಹಾಗೂ ಮೂಲ ಸೌಕರ್ಯ ಒದಗಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ.

About Author

Leave a Reply

Your email address will not be published. Required fields are marked *