ಮೈಸೂರಿನ 39 KSRP ಪೊಲೀಸ್ ಸಿಬ್ಬಂದಿಗಳಿಗೆ ಕರೋನಾ
1 min readಮೇಕೆದಾಟು ಪಾದಯಾತ್ರೆಗೆ ಭದ್ರತೆಗಾಗಿ ಹೋಗಿದ್ದ ಮೈಸೂರು ಕೆಎಸ್ಆರ್‌ಪಿಯ 39 ಪೊಲೀಸ್ ಸಿಬ್ಬಂದಿಗಳಿಗೆ ಕರೋನಾ ಪಾಸಿಟಿವ್ ಬಂದಿದೆ. ಮೈಸೂರಿನಿಂದ 200 ಪೊಲೀಸರನ್ನ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಯ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಪಾದಯಾತ್ರೆ ಮುಗಿಸಿ ಬಂದ ಪೊಲೀಸ್ ಸಿಬ್ಬಂದಿಗಳಿಗೆ ಸಾಮೂಹಿಕವಾಗಿ ಕರೋನಾ ಟೆಸ್ಟ್ ಮಾಡಿಸಲಾಗಿತ್ತು. ಈ ವೇಳೆ 39 ಪೊಲೀಸ್ ಸಿಬ್ಬಂದಿಗಳಿಗೆ ಕರೋನಾ ಪಾಸಿಟಿವ್ ಬಂದಿದ್ದು, ಪಾಸಿಟಿವ್ ಬಂದವರಿಗೆ ಹೋಮ್ ಐಸುಲೇಷನ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲದೆ ಅವರ ಸಂಪರ್ಕದಲ್ಲಿದ್ದವರಿಗು ಹೋಮ್ ಐಸುಲೇಷನ್‌ನಲ್ಲಿ ಇರುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಲಾಗಿದೆ.