ಚುರುಕಿನಿಂದ ಸಾಗಿರುವ ಕರೋನ ಮುಕ್ತ ಪಂಚಾಯಿತಿಯನ್ನಾಗಿಸುವ ಕಾರ್ಯ
1 min readಕ್ರೆಡಿಟ್ – ಐ ಸಂಸ್ಥೆ ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಹಯೋಗದಲ್ಲಿ ದೇಶದ ಮೊಟ್ಟಮೊದಲ ಕರೋನ ಮುಕ್ತ ಪಂಚಾಯಿತಿಯನ್ನಾಗಿಸುವ ಕಾರ್ಯ ಮೈಸೂರಿನ ನಾಗವಾಲ ಪಂಚಾಯಿತಿಯಲ್ಲಿ ಚುರುಕಿನಿಂದ ಸಾಗಿದ್ದು, ಮೊದಲನೇ ಹಂತವಾಗಿ ನಾಗವಾಲ ಪಂಚಾಯಿತಿಗೆ ಸೇರಿದ ಸೀಗಳ್ಳಿ, ಹುಯಿಲಾಳು, ಹೊಸ ಕಾಮನಕೊಪ್ಪಲು, ಬೊಮ್ಮೇನಹಳ್ಳಿ ಹಾಗೂ ನಾಗವಾಲ ಗ್ರಾಮಗಳ ಪ್ರತಿಯೊಂದು ಮನೆಗೂ ಕರೋನ ವಾರಿಯರ್ ಗಳು ಭೇಟಿ ನೀಡಿ ಪ್ರತಿಯೊಂದು ಕುಟುಂಬದ ಆರೋಗ್ಯ ಸಮೀಕ್ಷೆ ಪೂರ್ಣಗೊಳಿಸಿರುತ್ತಾರೆ.
ಅದರಂತೆ ಗ್ರಾಮ ಪಂಚಾಯಿತಿಯ ವಿವಿಧ ಗ್ರಾಮಗಳಲ್ಲಿ ಕರೋನ ಪಾಸಿಟೀವ್ ಆಗಿರುವ ಹಾಗೂ ಅಂತಹ ಗುಣಲಕ್ಷಣಗಳಿರುವ ಜನರನ್ನು ಗುರುತಿಸಿ ಅವರಿಗೆ ಹೆಲ್ಪಿಂಗ್ ಹ್ಯಾಂಡ್ ಟೀಂ ಫೌಂಡೇಶನ್ನಿನ ಸಹಕಾರದಲ್ಲಿ ಕರೋನ ಔಷಧಿ ನೀಡುವ ಕಾರ್ಯ ಭರದಿಂದ ನಡೆಯುತ್ತಿದೆ. ಈಗಾಗಲೇ ಪ್ರತಿಯೊಂದು ಗ್ರಾಮದಲ್ಲಿಯೂ ಪ್ರಚಾರದ ಆಟೋ ಬಳಸಿ ಕರೋನ ರೋಗದ ಬಗ್ಗೆ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ, ಕರೋನ ಪಾಸಿಟೀವ್ ಆದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹಾಗೂ ಲಸಿಕೆಯ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲಾಗಿದೆ ..
ಈ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಯ ಸಿ.ಇ.ಓ ರವರಿಗೆ ನಿಯಮಿತವಾಗಿ ಮಾಹಿತಿ ನೀಡಲಾಗುತ್ತಿದ್ದು, ಸದ್ಯದಲ್ಲೇ ಪ್ರತಿಯೊಂದು ಮನೆಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಇಮ್ಯುನಿಟಿ ಬೂಸ್ಟರ್ ಕಿಟ್ ನೀಡುವ ಹಾಗೂ ಪ್ರತಿಯೊಬ್ಬರಿಗೂ ಕರೋನ ಲಸಿಕೆ ಹಾಕುವ ಕಾರ್ಯ ಪ್ರಾರಂಭಿಸಲಾಗುತ್ತದೆ .. ಜೊತೆಗೆ ಮುಂದಿನ ವಾರ ಪ್ರತಿಯೊಂದು ಗ್ರಾಮದಲ್ಲಿಯೂ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗುತ್ತದೆ … ಡಾ.ಎಂ.ಪಿ.ವರ್ಷ, ಕ್ರೆಡಿಟ್ – ಐ