ಮೈಸೂರಿನಲ್ಲಿ ಕೊರೊನಾ 2ನೆ ಅಲೆ ಎಫೆಕ್ಟ್: ಪಾತಾಳಕ್ಕೆ ಕುಸಿದ ಮೈಸೂರು ಪ್ರವಾಸೋದ್ಯಮ.
1 min readಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಕೊರೊನಾ ಎರಡನೆ ಅಲೆ ಎಫೆಕ್ಟ್’ನಿಂದಾಗಿ ಮೈಸೂರು ಪ್ರವಾಸೋದ್ಯಮ ಪಾತಾಳಕ್ಕೆ ಕುಸಿದಿದೆ.
ಕೊರೊನಾದಿಮದಾಗಿ ಮೈಸೂರಿನ ಪ್ರವಾಸಿತಾಣಗಳೇಲ್ಲ ಖಾಲಿ ಖಾಲಿಯಾಗಿದೆ. ಸಾಲು ಸಾಲು ರಜೆ ಇದ್ದರು ಪ್ರವಾಸಿಗರು ಮೈಸೂರಿಗೆ ಆಗಮಿಸಿಲ್ಲ. ಜನರೇ ಇಲ್ಲದೆ ಮೈಸೂರು ಅರಮನೆ ಸಂಪೂರ್ಣ ಖಾಲಿಮಯವಾಗಿರುವ ದೃಶ್ಯ ಕಂಡುಬರುತ್ತಿದೆ.
ಮೈಸೂರು ಮೃಗಾಲಯಕ್ಕು ಭೇಟಿ ನೀಡ್ತಿಲ್ಲ ಪ್ರಾಣಿ ಪ್ರೀಯರು. ಚಾಮುಂಡಿಬೆಟ್ಟ, ಜಗನ್ಮೋಹನ ಅರಮನೆ, ಇತರೆ ಪ್ರದೇಶಕ್ಕು ಬರ್ತಿಲ್ಲ ಜನರು. ಪ್ರತಿನಿತ್ಯ 10 ಸಾವಿರ ಪ್ರವಾಸಿಗರು ಅರಮನೆ, ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದರು. ಲಾಕ್‌ಡೌನ್ ನಂತರ ಚೇತರಿಕೆ ಕಂಡಿದ್ದ ಪ್ರವಾಸೋದ್ಯಮ ಇದೀಗ ಎರಡನೆ ಅಲೆ ನಂತರ ಪ್ರವಾಸಿಗರ ಸಂಖ್ಯೆ 1000 ಗಡಿಯನ್ನ ದಾಟಿಲ್ಲ.
ಪ್ರವಾಸೋದ್ಯಮವನ್ನೆ ನಂಬಿವರಿಗು ಆರ್ಥಿಕವಾಗಿ ನಷ್ಟ. ಪ್ರವಾಸಿಗರನ್ನೆ ನಂಬಿದ್ದ ವ್ಯಾಪಾರಸ್ಥರಿಗೆ ಕೊರೊನಾ ಹೊಡೆತ.