ಹೂವಿನ ಹಾರ ಬದಲು ಮಾಸ್ಕ್ ಹಾರ ಧರಿಸಿ ಮದುವೆಯಾದ ಜೋಡಿ

1 min read

ಮೈಸೂರು: ಹೂವಿನ ಹಾರ ಬದಲು ಮಾಸ್ಕ್ ಹಾರ ಹಾಕಿ ಮೈಸೂರಿನ ಜೋಡಿ ವಿಭಿನ್ನವಾಗಿ ಮದುವೆಯಾಗಿದ್ದಾರೆ. ಮೈಸೂರಿನ ಪಾತಿ ಫೌಂಡೇಷನ್ ಹಾಗೂ ನನ್ನ ಹೆಸರು ಕಿಶೋರ 7 ಪಾಸ್ 8 ಚಿತ್ರತಂಡ ಮದುವೆ ಮನೆಯಲ್ಲಿ ಈ ಕೊರೋನಾ ಜಾಗೃತಿ ಮೂಡಿಸಿದೆ.

ಮಾಜಿ ನಗರ ಪಾಲಿಕೆ ಸದಸ್ಯರಾದ ಯಮುನಾ ಹಾಗೂ ಅನಂತನಾರಾಯಣ ರವರ ಪುತ್ರಿ ಸ್ನೇಹ ಹಾಗೂ ಆಂಡಾಳ್ ಹಾಗೂ ಪಾರ್ಥಸಾರಥಿಯ ಪುತ್ರ ರಾಘವೇಂದ್ರ ವಿವಾಹದಲ್ಲಿ ದಂಪತಿಗಳಿಗೆ ಕೂರೂನಾ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೂವಿನ ಹಾರ ಬದಲು ಮಾಸ್ಕ್ ನ ಹಾರ ಹಾಕುವ ಮೂಲಕ ವಿಭಿನ್ನವಾಗಿ ಮದುವೆ ಜಾಗೃತಿ ಮೂಡಿಸಿದ್ದಾರೆ.

ನಗರದ ನಜರ್ ಬಾದ್ ನಲ್ಲಿರುವ ರಾಶಿ ಶಿವಶಂಕರ್ ರಾಜಗೋಪಾಲ್ ಕಲ್ಯಾಣ ಮಂಟಪ ದಲ್ಲಿ ನಡೆದ ಸರಳ ವಿವಾಹದಲ್ಲಿ ಸಾಮಾಜಿಕ ಅಂತರ ಕಾಯ್ದಿರಿಸಿ ಪ್ರತಿಯೊಬ್ಬರಿಗೂ ಉಚಿತವಾಗಿ ಮಾಸ್ಕ್ ವಿತರಿಸಿ ಮಹಾಮಾರಿ ಕೂರೂನಾ ವಿರುದ್ಧ ನೂತನ ವಧು ವರರು ಹೋರಾಡುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ನಗರಪಾಲಿಕೆ ಸದಸ್ಯರಾದ ಎಂ ಡಿ ಪಾರ್ಥಸಾರಥಿ ಮಹಾಮಾರಿ ಕೊರೂನಾ 2 ಹಳೆ ದೇಶದಲ್ಲಿ ಹೆಚ್ಚುತ್ತಿದ್ದು ಅದನ್ನು ಅರಿತು ಸರ್ಕಾರ ವಿಧಿಸಿರುವ ನಿಯಮಾನುಸಾರವಾಗಿ ನಡೆದ ಸರಳ ವಿವಾಹದಲ್ಲಿ ನಮ್ಮ ಚಿತ್ರತಂಡ ಬೇರೆ ಬೇರೆ ನಗರ ಹಾಗೂ ಜಿಲ್ಲೆಯಿಂದ ಬಂದಂಥ ನಾಗರಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಧು ವರರಿಗೆ ಶುಭ ಕೋರುವಂತೆ ಪ್ರತಿಯೊಬ್ಬರಿಗೂ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲಾಯಿತು. ಹಾಗೆಯೇ, ಪ್ರತಿಯೊಬ್ಬರೂ ಮದುವೆಯ ಉಡುಗೊರೆ ಎಂದು ಜೀವನದಲ್ಲಿ ನೆನೆಯುವಂತಹ ಪದಾರ್ಥ ನೀಡುವುದು ಸಹಜ ಆದರೆ ಈ ಸಂಕಷ್ಟ ಸಂದರ್ಭದಲ್ಲಿ ವಿವಾಹ ಆಗುತ್ತಿರುವುದನ್ನು ನಾವು ಆ ನವ ಜೋಡಿಗಳು ಜೀವನ ಪೂರ್ತಿ ನಮ್ಮ ಉಡುಗೊರೆಯನ್ನು ನೆನೆಯಲಿ ಎಂದು ಅರ್ಥಪೂರ್ಣವಾದ ಗಂಡು ಹೆಣ್ಣಿಗೆ ಮಾಸ್ಕ್ ಹಾರವನ್ನು ನವ ಜೋಡಿಗಳು ಬದಲಾಯಿಸುವ ಮೂಲಕ ಅವರಿಗೆ ವಿಶೇಷ ಶುಭ ಕೋರಿ ಜಾಗೃತರಾಗಿ ಸರ್ಕಾರದ ನಿಯಮ ಹೊಸ ಜೀವನವನ್ನು ಸುಖಕರವಾಗಿ ಬಾಳಿ ಎಂದು ನಮ್ಮ ಚಿತ್ರ ತಂಡದಿಂದ ಶುಭ ಕೋರಲಾಯಿತು

ಇದೇ ಸಂದರ್ಭದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ಕಿಶೋರ 7 ಪಾಸ್ 8 ಚಿತ್ರತಂಡದ ಹರೀಶ್ ನಾಯ್ಡು, ಮಹೇಂದ್ರ, ಕೃಷ್ಣಮೂರ್ತಿ, ಮಿಥಾಲಿ , ಮುರಳಿ ಹಾಗೂ ಇನ್ನಿತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *