ಕೇರಳದಿಂದ ರಾಜ್ಯಕ್ಕೆ ಬರಬೇಕಾದ್ರೆ 72 ಗಂಟೆಯೊಳಗಿನ RTPCR ನೆಗೆಟಿವ್ ವರದಿ ಕಡ್ಡಾಯ!
1 min readಮೈಸೂರು : ಕೇರಳದಲ್ಲಿ ಕೊರೊನಾ ವೈರಸ್ ಹಾಗೂ ರೂಪಾಂತರಿ ವೈರಸ್ ಆತಂಕ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಚೆಕ್ ಪೋಸ್ಟ್‌ಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮೈಸೂರು ಜಿಲ್ಲಾಡಳಿತದಿಂದ ಕಡ್ಡಾಯವಾಗಿ ನಿಯಮ ಪಾಲನೆಯಾಗುತ್ತಿದ್ದು, ಹೊರ ರಾಜ್ಯಗಳಿಂದ ಬರುತ್ತಿರುವ ಜನರ ಬಗ್ಗೆ ಹೆಚ್ಚಿನ ನಿಗಾ ವಹಿಸಿದೆ.
ರಾಜ್ಯಕ್ಕೆ ಬರುವ ಪ್ರತಿ ವಾಹನ ಸವಾರರ ತಪಾಸಣೆ ಮಾಡುತ್ತ, ಆರ್‌ಟಿ.ಪಿ.ಸಿ.ಆರ್ ಇಲ್ಲದೆ ಇರುವವರನ್ನ ವಾಪಸ್ ಕಳುಹಿಸುತ್ತಿದ್ದಾರೆ. ಅಲ್ಲದೆ ನೆಗೆಟಿವ್ ರಿಪೋರ್ಟ್ ಇಲ್ಲದೆ ಬಂದವರು ಬಂದ ದಾರಿ ಹಿಡಿದು ವಾಪಸ್ ಹೋಗುತ್ತಿದ್ದು, ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ರಿಪೋರ್ಟ್ ಇದ್ದರಷ್ಟೆ ರಾಜ್ಯಕ್ಕೆ ಎಂಟ್ರಿ ಕೊಡಲಾಗ್ತಿದೆ. ಅದರಲ್ಲು, 72 ಗಂಟೆಯೊಳಗೆ ಆರ್.ಟಿ.ಪಿ.ಸಿ.ಆರ್ ತಪಾಸಣೆ ಮಾಡಿಸಿರಬೇಕೆಂದು ಕಡ್ಡಾಯವಾಗಿ ಸೂಚಿಸಲಾಗಿದೆ.
ಇನ್ನು ಮತ್ತೊಂದೆಡೆ ಮೈಸೂರಿನಲ್ಲಿ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಿದೆ. ಇನ್ನು ಮೈಸೂರು ಭಾಗದಿಂದ ಕೇರಳಕ್ಕೆ ತರಕಾರಿ ಸರಬರಾಜುಗುತ್ತದೆ. ಈ ಕಾರಣದಿಂದ ಪ್ರತಿದಿನ ನೂರಾರು ಗೂಡ್ಸ್ ವಾಹನ ಸಂಚಾರ ಮಾಡುತ್ತಿದ್ದು, ಸದ್ಯ ರಾಜ್ಯಕ್ಕೆ ಬರುವ ಪ್ರತಿಯೊಬ್ಬರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.