ಪತ್ನಿಗಾಗಿ ಸೀರೆ ಖರೀದಿಸಿ ‘ಬೈಸಿಕೊಳ್ಳದಿದ್ದರೇ ಸಾಕಪ್ಪಾ’ ಎಂದ ಸಿಎಂ ಬೊಮ್ಮಾಯಿ!
1 min readಬೆಂಗಳೂರು,ಅ.2-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪತ್ನಿಗಾಗಿ ಪ್ರೀತಿಯಿಂದ ಸೀರೆ ಖರೀದಿಸಿದ್ದಾರೆ. ತಾವೇ ಖುದ್ದು ಸೀರೆಗಳನ್ನು ನೋಡಿ ಕೊನೆಗೆ ತಮ್ಮ ಪತ್ನಿಗೆ ಒಪ್ಪುವಂತಹ ಸೀರೆಯನ್ನು ಖರೀದಿಸಿದ್ದಾರೆ!
ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಇಂದು ಗಾಂಧಿ ಭವನದ ಪಕ್ಕದಲ್ಲಿರುವ ಖಾದಿ ಎಂಪೋರಿಯಂಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಟ್ಟೆ ಖರೀದಿ ಮಾಡಿದರು.
ಪತ್ನಿಗೆ ಸೀರೆ ಖರೀದಿ ಮಾಡುವ ವೇಳೆ ಬೊಮ್ಮಾಯಿ ಅವರು, ‘ನಾವು ಸೆಲೆಕ್ಟ್ ಮಾಡಿ, ಖರೀದಿ ಮಾಡಿ ಆಮೇಲೆ ಮೇಲೆ ಬೈಸಿಕೊಳ್ಳದಿದ್ದರೇ ಸಾಕಪ್ಪಾ’ ಎಂದು ನಗೆ ಚಟಾಕಿ ಹಾರಿಸಿದರು. ಸಿಎಂ ಮಾತಿಗೆ ಅಲ್ಲಿದ್ದವರೆಲ್ಲ ಜೋರಾಗಿ ನಕ್ಕರು. ಮೂರು ಸೀರೆ ನೋಡಿ, ಕೊನೆಗೆ ಒಂದು ಸೀರೆಯನ್ನು ಸಿಎಂ ಖರೀದಿಸಿದರು.
ಜೊತೆಗೆ ಹತ್ತು ಜುಬ್ಬಾ ಪೀಸ್ ಗಳನ್ನು ಖರೀದಿಸಿದರು. ಒಟ್ಟು 16,031 ರೂ. ಬೆಲೆಯ ಬಟ್ಟೆ ಖರೀದಿಸಿದರು.
ಇನ್ನು ತಮ್ಮೊಂದಿಗಿದ್ದ ಸಚಿವ ಗೋವಿಂದ ಕಾರಜೋಳ, ಎಂಟಿಬಿ ನಾಗರಾಜ್ ಸೇರಿದಂತೆ ಇತರೇ ಸಚಿವರಿಗೂ ಸೀರೆ ಕೊಳ್ಳುವಂತೆ ಸೂಚಿಸಿದ್ದರು. ಅಲ್ಲದೆ ಇದೇ ವೇಳೆ ಆಗಮಿಸಿದ ಬಿ.ವೈ.ವಿಜಯೇಂದ್ರ ಅವರಿಗೂ ‘ಬಾರಪ್ಪಾ, ನಿಮ್ಮ ಮನೆಯವರಿಗೆ ಸೀರೆ ಖರೀದಿ ಮಾಡು’ ಎಂದಿದ್ದಾರೆ.
ಸಚಿವ ಗೋವಿಂದ ಕಾರಜೋಳರಿಗೆ ಸೀರೆ ತೆಗೆದುಕೊಳ್ಳಿ ಎಂದು ಸಿಎಂ ಹೇಳಿದಾಗ, ‘ಸಾರ್, ನನಗೆ ಅದೆಲ್ಲಾ ಗೊತ್ತಾಗಲ್ಲ’ ಎಂದಿದ್ದಾರೆ. ಅದಕ್ಕೆ ‘ಈಗಲಾದ್ರೂ ಕಲಿತುಕೊಳ್ಳಿ’ ಎಂದು ಸಿಎಂ ಹೇಳಿದರು. ಸಿಎಂ ಮಾತಿಗೆ ಕಟ್ಟು ಬಿದ್ದ ಗೋವಿಂದ ಕಾರಜೋಳ ಇರಲೀ, ನನಗೊಂದು ಸೀರೆ ಕೊಡಿ ಸೀರೆ ಖರೀದಿಸಿದ್ದಾರೆ. ಇನ್ನು ಬಿ.ವೈ. ವಿಜಯೇಂದ್ರ ಅವರು ಸಿಎಂ ಮಾತಿನಂತೆ
ನಮಗೊಂದು ಸೀರೆ ಕೊಡಿ’ ಎಂದು 4300 ರೂ. ಬೆಲೆಯ ಸೀರೆ ಖರೀದಿ ಮಾಡಿದರು.