ಮೈಸೂರಿನ ವಿಜಯನಗರದಲ್ಲಿ ಸರಗಳ್ಳತನ- ಖದೀಮರ ಚಿತ್ರ CCTV ಯಲ್ಲಿ ಸೆರೆ!

1 min read

ಮೈಸೂರು : ಕೊಂಚ ಬಿಡುವು ನೀಡಿದ್ದ ಚೈನ್ ಸ್ನಾಚರ್ಸ್ ಇದೀಗಾ ಮತ್ತೇ ತಮ್ಮ ಕಿತಾಪತಿ ಮುಂದುವರೆಸಿದ್ದಾರೆ. ಮೈಸೂರಿನಲ್ಲಿ ಹಾಡಹಗಲೇ ಸರಗಳ್ಳರು ಕೈಚಳಕ ತೋರಿಸಿದ್ದು, ವಿಜಯನಗರ ನಾಲ್ಕನೇ ಹಂತದಲ್ಲಿ ನಿನ್ನೆ ಸಂಜೆ ಮಹಿಳೆಯ ಸರ ಕಿತ್ತು ಪರಾರಿಯಾಗಿದ್ದಾರೆ. ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರಿಂದ ಈ ಕೃತ್ಯ ನಡೆದಿದ್ದು, ಯುವಕರ ಚಿತ್ರ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಸದ್ಯ 48 ಗ್ರಾಂ ತೂಕದ ಸರ ಕಳೆದುಕೊಂಡ ಮಹಿಳೆಯ ಹೇಳಿಕೆ ಪಡೆದುಕೊಂಡ ಪೊಲೀಸರು ಖದೀಮರ ಸೆರೆಗೆ ಬಲೇ ಬೀಸಿದ್ದಾರೆ.

About Author

Leave a Reply

Your email address will not be published. Required fields are marked *