ಬಿಸಿ ನೀರಿಗೆ 2 ವರ್ಷದ ಮುದ್ದು ಕಂದ ಬಲಿ!

1 min read

ಮೈಸೂರು: ಬಿಸಿ ನೀರಿಗೆ ಬಿದ್ದು ಮುಗ್ದ ಮಗುವೊಂದು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮೈಸೂರಿನ ದಾಸನಕೊಪ್ಪಲು ನಿವಾಸಿಯಾದ ಪೋಟೊಗ್ರಾಫರ್ ರಾಮು ಅವರ 2 ವರ್ಷದ ಮುಗುವೆ ಹೀಗೆ ಮೃತಪಟ್ಟಿದೆ.

ಘಟನೆ ಹಿನ್ನಲೆ..

ಮುದ್ದು ಕಂದನ ಮನೆಯಲ್ಲಿ ತಾಯಿ ಹೊರಗೆ ಹೋದ ವೇಳೆ ಮುಗು ಬಿಸಿ ನೀರಿನಲ್ಲಿ ಮುಳುಗಿ ಒದ್ದಾಡಿದೆ. ಮುಗಿವಿನ ಚೀರಾಟ ಕೇಳಿ ಓಡಿಬಂದು ಮಗುವನ್ನ ಬಿಸಿ ನೀರಿನಿಂದ ಮೇಲೆತ್ತಿ ಕೂಡಲೇ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಮಗುವಿಗೆ ಚಿಕಿತ್ಸೆ‌ ಕೊಡಿಸಿದಾದರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಮುದ್ದು ಕಂದ ಸಾವನ್ನಪ್ಪಿದೆ. ಮುದ್ದು ಕಂದನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು ಅದೇ ನೋವಿನಲ್ಲಿ ಅಂತಿಮ ಕಾರ್ಯ ನೇರವೇರಿಸಿದ್ದಾರೆ.

About Author

Leave a Reply

Your email address will not be published. Required fields are marked *