ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಇಳಿಕೆ- ಇದಕ್ಕೆ ಕಾರಣ ಭೂ ಕುಸಿತ ಆತಂಕ!
1 min readಮೈಸೂರು : ಚಾಮುಂಡಿ ಬೆಟ್ಟ- 07/13/2021 :
ವರದಿ – ಪ್ರಶಾಂತ್
ಸಾಂಸ್ಕೃತಿಕ ನಗರ ಮೈಸೂರು ಪ್ರವಾಸಿಗರ ಸ್ವರ್ಗ. ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯ ಎಲ್ಲವು ಮೈಸೂರಿನ ಅಂದವನ್ನ ಹೆಚ್ಚಿಸಿದೆ. ಇಂತಹ ಮೈಸೂರಿನಲ್ಲಿ ನಾಡದೇವಿಯಾಗಿ ನೆಲೆ ನಿಂತಿದ್ದಾಳೆ ಜಗನ್ಮಾತೆ ಚಾಮುಂಡೇಶ್ವರಿ ತಾಯಿ. ಹೀಗೆ ಸಕಲ ಕಷ್ಟಗಳನ್ನ ನಿವಾರಿಸೋ ಜಗನ್ಮಾತೆಯ ಸನ್ನಿಧಿಗೆ ಭಕ್ತರ ಸಂಖ್ಯೆ ತೀರ ಕಡಿಮೆ ಆಗಿದೆ. ಅದಕ್ಕೆ ಕಾರಣವೇ ಭೂಕುಸಿತ. ಆದರೆ ನಿಜಕ್ಕು ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ ಉಂಟಾಗಿದ್ಯಾ? ಪ್ರವಾಸಿಗರಿಗೆ ಇದರಿಂದ ತೊಂದರೆ ಆಗಿದ್ಯಾ? ಎಸ್ ಇವೆಲ್ಲವನ್ನು ಇವತ್ತಿನ ಈ ವಿಶೇಷ ವರದಿಯಲ್ಲಿ ಪ್ರವಾಸಿಗರು ಹಾಗೂ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಹೇಳ್ತಿವಿ ಬನ್ನಿ.
ಮೈಸೂರು ಒಂದು ಸುಂದರವಾದ ಪ್ರವಾಸಿಗರ ತಾಣವಾಗಿದ್ದು ಮೊದಲು ನಮಗೆ ನೆನಪಾಗೋದೆ ತಾಯಿ ಚಾಮುಂಡೇಶ್ವರಿ ಸನ್ನಿಧಿ. ತುಂಬಾ ಜನರು ಭೂ ಕುಸಿತ ಆದ ಬಳಿಕ ಚಾಮುಂಡಿ ಬೆಟ್ಟಕ್ಕೆ ಹೋಗಬಹುದಾ ಅಂತ. ಆದರೆ ಚಾಮುಂಡಿ ಬೆಟ್ಟಕ್ಕೆ ಭಕ್ತರು ಆರಾಮವಾಗಿ ಬರಬಹುದು. ಭಕ್ತರಿಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ.
ಚಾಮುಂಡಿ ಬೆಟ್ಟದ ಮಾರ್ಗದಲ್ಲಿ ಸಮಸ್ಯೆ ಇಲ್ಲ
ನಾಡದೇವಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೇಯಲು ಯಾವುದೇ ಸಮಸ್ಯೆಯಿಲ್ಲ. ತಾಯಿಯ ದರ್ಶನ ಪಡೆಯಲು ಎರಡು ಮಾರ್ಗಗಳಿದ್ದು ಒಂದು ರಸ್ತೆ ಮೂಲಕ ಮತ್ತೊಂದು ಮೆಟ್ಟಲು ಮೂಲಕ. ಆದರೆ ರಸ್ತೆ ಮಾರ್ಗದಲ್ಲಿ ಚಾಮುಂಡಿ ಬೆಟ್ಟ ಹಾಗೂ ನಂದಿ ವಿಗ್ರಹ ನೋಡುವ ಮಾರ್ಗ ಎರಡಿದ್ದು, ನಂದಿ ರಸ್ತೆ ಮಾರ್ಗದಲ್ಲಿ ರಸ್ತೆ ಹದಗೆಟ್ಟಿದ್ದು ಭೂ ಕುಸಿತ ಉಂಟಾಗಿದೆ.
– ಇದು ಜನರಿಗೆ ಸರಿಯಾಗಿ ತಲುಪದೆ ಸಮಸ್ಯೆ ಆಗಿತ್ತು. ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ ಉಂಟಾಗಿದೆ ಅಂತ ಗೊಂದಲ ನಿರ್ಮಾಣ ಆಗಿತ್ತು. ಇದರಿಂದ ಭಕ್ತರು ಪ್ರವಾಸಿಗರು ಮೈಸೂರು ಹಾಗೂ ಚಾಮುಂಡಿ ಬೆಟ್ಟಕ್ಕೆ ಬರೋದಕ್ಕು ಆತಂಕದಲ್ಲಿದ್ದರು. ಆದರೆ ನಿಜ ಸಂಗತಿ ಅಂದರೆ ಎರಡು ಮಾರ್ಗವು ಬೇರೆ ಬೇರೆ ಇದ್ದು ನಾಡದೇವಿಯ ದರ್ಶನ ಪಡೆಯೋಕೆ ಯಾವುದೇ ಸಮಸ್ಯೆ ಇಲ್ಲ.
ಇನ್ನು ಈ ಸಮಸ್ಯೆಗೆ ಪರಿಹಾರ ಏನು
ನಂದಿ ಮಾರ್ಗದ ರಸ್ತೆ ಕುಸಿತವಾಗಿರುವುದು ನಿಜ. ಆದರೆ ಅದು ನಂದಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಮಾತ್ರ. ನಂದಿ ದರ್ಶನಕ್ಕೆ ಹೋಗುವ ಮಾರ್ಗಕ್ಕೆ ಈಗಾಗಲೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಇಲ್ಲಿ ಮಳೆ ಬೀಳುತ್ತಿರುವ ಕಾರಣ ರಸ್ತೆ ಕಾಮಗಾರಿ ಆರಂಭ ಗೊಂಡಿಲ್ಲ, ಮಳೆ ನಿಂತ ಮೇಲೆ ರಸ್ತೆ ಕಾಮಗಾರಿ ಶುರು ಮಾಡಲಾಗುತ್ತೆ.
ಸದ್ಯಕ್ಕೆ ಯಾವುದೇ ರೀತಿಯ ಆತಂಕ ಇಲ್ಲದೆ ಇನೊಂದು ರಸ್ತೆಯ ಮೂಲಕ ದರ್ಶನ ಪಡೆಯಲು ಹೋಗಬಹುದು ಎಂದು ಅಧಿಕಾರಿಗಳು ನನ್ನೂರು ಮೈಸೂರು ಮೂಲಕ ಮಾಹಿತಿ ನೀಡಿದ್ದಾರೆ.
ಪ್ರವಾಸಿಗರಿಲ್ಲದೆ ವ್ಯಾಪಾರಸ್ಥರ ಅಳಲು
ರಸ್ತೆ ಕುಸಿತವಾಗಿರುವ ಕಾರಣ ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರು ಬರುತ್ತಿಲ್ಲ. ಪ್ರವಾಸಿಗರಿಲ್ಲದೆ ನಮ್ಮ ಜೀವನ ನಡೆಸುವುದು ಕಷ್ಟಕರವಾಗಿದೆ. ಪ್ರವಾಸಿಗರು ಬಂದು ವ್ಯಾಪಾರ ಮಾಡಿದರೆ ನಮ್ಮ ಜೀವನ ನಡೆಯುವುದು ಎಂದು ವ್ಯಾಪಾರಸ್ತರ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಬರ್ತಾರೆ. ಆದ್ರೆ ಬೆಟ್ಟ ಕುಸಿತ ಎಂದು ಹೇಳಿ ಹೇಳಿ ಸಮಸ್ಯೆ ಉಂಟಾಗಿದೆ. ಯಾರು ಕೂಡ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಬೇಸರ ಹೊರಹಾಕಿದ್ದಾರೆ ವ್ಯಾಪಾರಸ್ಥರು.
ಒಟ್ಟಾರೆ, ನಾಡದೇವಿಯ ದರ್ಶನ ಪಡೆಯಲು ಯಾವುದೇ ಸಮಸ್ಯೆ ಇಲ್ಲ. ರಸ್ತೆ ದುಸ್ಥಿತಿ ಆಗಿರುವುದು ನಂದಿ ಬೆಟ್ಟಕ್ಕೆ ಹೋಗುವ ಮಾರ್ಗ ಮಾತ್ರ. ಇನ್ನು ಆ ರಸ್ತೆ ಮಾರ್ಗವನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಆದರೆ ಮುಖ್ಯ ರಸ್ತೆಯ ಮೂಲಕ ಭಕ್ತರು, ಪ್ರವಾಸಿಗರು ಸಂಚಾರ ಮಾಡೋದಕ್ಕೆ ಹಾಗೂ ಮೆಟ್ಟಿಲು ಹತ್ತಿ ತಾಯಿಯ ದರ್ಶನ ಪಡೆಯೋಕೆ ಯಾವುದೇ ತೊಂದರೆ ಇಲ್ಲ. ಭಕ್ತರು ಹಾಗೂ ಪ್ರವಾಸಿಗರು ಯಾವುದೇ ಆತಂಕವಿಲ್ಲದೆ ನಾಡದೇವಿಯ ದರ್ಶನ ಪಡೆಯಿರಿ ತಾಯಿ ಕೃಪೆಗೆ ಪಾತ್ರರಾಗಿ.
ನನ್ನೂರು ಮೈಸೂರು ಟೀಂ