ನಾಡದೇವಿ ದರ್ಶನಕ್ಕೆ 300 ರೂ ಟಿಕೆಟ್ ದರದ ಹೆಸರಲ್ಲಿ ಹಗಲು ದರೋಡೆ ಮಾಡಿದ್ರಾ?
1 min readಹೊಸ ವರ್ಷದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದ್ದು, ಹಲವು ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಆದ್ರೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಿ 300ರೂ.ಗಳ ವಿಶೇಷ ದರ್ಶನವೆಂದು ಹಗಲು ದರೋಡೆ ಮಾಡ್ತಿದ್ದಾರೆಂದು ಭಕ್ತರು ಬೇಸರ ಹೊರಹಾಕಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನಾಡದೇವಿಯ ದರ್ಶನಕ್ಕೆ ಆಗಮಿಸುವ ಕಾರಣ, ಈ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದ್ರೆ ದೇಗುಲದ ಅಧಿಕಾರಿಗಳ ಈ ನಿರ್ಣಯದಿಂದ ಬೆಟ್ಟಕ್ಕೆ ತಾಯಿ ದರ್ಶನಕ್ಕೆ ಬಂದ್ರೆ ನಮ್ಮ ಬಳಿ ಹಗಲು ದರೋಡೆ ಮಾಡ್ತಿದ್ದಾರೆಂದು ಭಕ್ತರು ಆರೋಪಿಸಿದ್ದಾರೆ.
ಇದರ ಬದಲಿಗೆ ಕರ್ಫ್ಯೂ ಜಾರಿ ಮಾಡಿ ಎಲ್ಲವು ಬಂದ್ ಆಗಿದ್ರೆ ಚೆನ್ನಾಗಿತ್ತು. ಕರೋನಾ ವೇಳೆ ಈ ರೀತಿ ಹಗಲು ದರೋಡೆ ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ಬಗ್ಗೆ ಅಧಿಕಾರಿಗಳು ಒಬ್ಬರ ಮೇಲೆ ಮತ್ತೊಬ್ಬರಂತೆ ಬೆರಳು ತೋರಿಸುತ್ತ ಅವರು ಹೇಳಿದ್ದು, ಇವರು ಹೇಳಿದ್ದು ನುಣುಚಿಕೊಳ್ಳುವ ಯತ್ನ ಮಾಡ್ತಿದ್ದಾರೆ. ಆದ್ರೆ ಪ್ರವಾಸಿಗರು ಇಲ್ಲ ಇಲ್ಲ ಎನ್ನುತ್ತಿದ್ದ ಆಡಳಿತ ಮಂಡಳಿ, ಇದೀಗಾ ಭಕ್ತರು ಬರುತ್ತಿದ್ದಂತೆ ಏಕಾಏಕಿ ಟಿಕೆಟ್ ದರ ಹೆಚ್ಚಳ ಮಾಡಿದ್ದು ಭಕ್ತರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.