ಚಾಮುಂಡಿ ಬೆಟ್ಟಕ್ಕೆ ರೋಪ್ ವೇ.! ಪ್ರವಾಸೋದ್ಯಮ ಇಲಾಖೆಯಿಂದ ಸಿದ್ದತೆ!!
1 min readಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಯಾರೇ ವಿರೋಧ ಮಾಡಿದರೂ ನಾವು ಈ ಯೋಜನೆಯನ್ನ ಮಾಡುತ್ತೇವೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ. ಮೈಸೂರಿನ ತಲಕಾಡಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಮಾತನಾಡಿದ ಅವರು, ವಿರೋಧಗಳನ್ನೆಲ್ಲಾ ಪಕ್ಕಕ್ಕಿಟ್ಟು ರೋಪ್ ವೇ ಮಾಡುತ್ತೇವೆ ಎಂದರು.
ಮೊದಲಿಗೆ ವಿರೋಧ ವ್ಯಕ್ತವಾದ್ರೂ ತದನಂತರ ಅವರೇ ಒಪ್ಪಿಕೊಳ್ಳುತ್ತಾರೆ. ಈಗಾಗಲೇ ಚಾಮುಂಡಿ ಬೆಟ್ಟದ ರೋಪ್ ವೇಗೆ ಡಿಪಿಆರ್ ತಯಾರಾಗಿದ್ದು ಸಿದ್ದತೆ ಆಗಬೇಕಿದೆ ಎಂದು ಮೈಸೂರಿನ ತಲಕಾಡಿನಲ್ಲಿ ಸಚಿವ ಯೋಗೇಶ್ವರ್ ಹೇಳಿದ್ದಾರೆ.