ಚಾಮುಂಡಿ ಬೆಟ್ಟದ ದೇವಿಕೆರೆ ಅಭಿವೃದ್ಧಿಗೆ ಚಾಲನೆ!
1 min readಮೈಸೂರು : ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮೈಸೂರು ವತಿಯಿಂದ ಚಾಮುಂಡಿ ಬೆಟ್ಟದ ದೇವಿಕೆರೆ ಹಾಗೂ ಹಿರೇಕೆರೆಯ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರಿಂದ ಭೂಮಿ ಪೂಜಾ ಕಾರ್ಯಕ್ರಮ ನೇರವೇರಿತು.
ಇದೇವೇಳೆ ಮಾತನಾಡಿದ ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ.ರಾಮದಾಸ್ ರವರು ತಾಯಿ ಚಾಮುಂಡೇಶ್ವರಿಯ ಅಭಿಷೇಕಕ್ಕಾಗಿ ಪ್ರತಿನಿತ್ಯ ಬೆಳಗಿನ ಜಾವ ದೇವಿ ಕೆರೆಯಿಂದ ನೀರನ್ನು ತೆಗೆದುಕೊಂಡು ಹೋಗುವ ಕ್ರೈಂಕರ್ಯ ನಡೆಯುತ್ತದೆ. ದೇವಿಕೆರೆಯಲ್ಲಿ ಇರುವಂತಹ ಹೂಳು ತೆಗೆಯುವುದು, ಕುಲುಶಿತವಾಗಿರುವ ನೀರನ್ನು ಶುಚಿಗೊಳಿಸುವುದು ಬೇರೆ ಬೇರೆ ಅಭಿವೃದ್ಧಿಯಾಗದೇ ಇರುವಂತಹುದರ ಜೊತೆಯಲ್ಲಿ ದೊಡ್ಡ ಬಿಂದಿಗೆಯಲ್ಲಿ ನೀರಿನ ಹೊತ್ತುಕೊಂಡು ಹೋಗುವಂತ ಸಂದರ್ಭದಲ್ಲಿ ದೇವಿ ಕೆರೆಯಿಂದ ಚಾಮುಂಡಿ ದೇವಸ್ಥಾನದವರಿಗೆ ಇರುವ ಎಲ್ಲ ಮಾರ್ಗಗಳು ಶೀಥಿಲವಾಗಿರುತ್ತದೆ. ಇದರಿಂದ ಅಭಿವೃದ್ಧಿಜೊತೆಗೆ ಹೂಳೆತ್ತುವುದು ದೇವಿಕೆರೆಯನ್ನು ಶುಚಿಗೊಳಿಸಿ ನೀರನ್ನು ಕೊಳಕ್ಕೆ ಬರುವ ಹಾಗೆ ಮಾಡುವ ಅಭಿವೃದ್ಧಿ ಕೆಲಸಕ್ಕೆ ಇಂದು ಚಾಲನೆ ಮಾಡಲಾಯಿತು.
ಇದಲ್ಲದೆ ಓಡಾಡಲು ಅನುಕೂಲವಾಗುವ ಹಾಗೆ ಕೂಡ ಒಂದು ವ್ಯವಸ್ಥಿತವಾದ ರೀತಿಯಲ್ಲಿ ಅಭಿವೃದ್ಧಿಯ ಜೊತೆಗೆ ಎರಡು ಬದಿಯಲ್ಲೂ ಮೇಲೆ ಹತ್ತುವವರಿಗೆ ಯಾವುದೇ ಶ್ರಮವಿಲ್ಲದೆ ಹೋಗುವಂತ ರೀತಿಯಲ್ಲಿ ಒಂದು ಕಾರ್ಯವನ್ನ ಮಾಡಲಾಗುತಿದ್ದೆ. ಹಂತ ಹಂತವಾಗಿ ಮುಂದುವರೆದು ಚಾಮುಂಡಿಬೆಟ್ಟದಲ್ಲಿ ಸುಮಾರು ನೂರಕ್ಕಿಂತಲೂ ಹೆಚ್ಚು ಪುಟ್ಟ ಪುಟ್ಟ ಕೊಳಗಳಿರುವುದು ನಕ್ಷೆಯಲ್ಲಿ ಕಂಡುಬಂದಿರುತ್ತದೆ. 2ನೇ ಹಂತದಲ್ಲಿ ಕೊಳಗಳನ್ನು ಕೂಡ ಶಾಶ್ವತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಒಬ್ಬ ದೈವಭಕ್ತ ನಮ್ಮ ತಂದೆಯ ಸ್ಥಾನದಲ್ಲಿ ಇರುವಂತಹ ಶ್ರೀ ಬಿ.ಎಸ್.ಯಡಿಯೂರಪ್ಪನವರು 7.5 ಕೋಟಿ ರೂಪಾಯಿಗಳನ್ನು ಮಂಜೂರಾತಿಯನ್ನು ಮಾಡಿಕೊಟ್ಟರು ಮತ್ತೆ ಸಣ್ಣ ನೀರಾವರಿ ಸಚಿವರು ಇದಕ್ಕೆ ಸಹಕಾರವನ್ನು ಕೊಟ್ಟರು . ಈ ಕಾರ್ಯಕ್ಕೆ ಭೂಮಿ ಪೂಜೆ ಮಾಡುವ ಮುಖಾಂತರ ಚಾಲನೆ ಕೊಟ್ಟಿದೆ ಬಂದಂತಹ ಭಕ್ತರು ಸಹ ಈ ಕಾರ್ಯದಲ್ಲಿ ಭಾಗಿಯಾಗಿ ಮಾಡಬೇಕು ಅನ್ನೋದು ನಮ್ಮ ಆಸೆ. ಹಾಗಾಗಿ ಆಷಾಡ ಮಾಸದ ಎರಡನೆಯ ಶುಕ್ರವಾರ ಅಂದರೆ 8ನೇ ತಾರೀಕು ತಾಯಿ ದರ್ಶನ ಪಡೆಯಲು ಬರುವ ಭಕ್ತಾದಿಗಳು ತಮ್ಮ 1 ಗಂಟೆಗಳ ಕಲಾಸೇವೆಯನ್ನು ಮಾಡುವ ಮೂಲಕ ಸ್ವಚ್ಛತೆ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಾರ್ಥನೆ ಮಾಡುತ್ತೇನೆ.
ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮಾಜಿ ಸಚಿವರಾದ ಜಿ.ಟಿ.ದೇವೇಗೌಡರು, ಭರತ್ ಕಾಳಯ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು, ನವಿಲು ನಾಗರಾಜು, ಶಶಿಶೇಖರ್ ದೀಕ್ಷಿತ್, ದೇವಸ್ಥಾನದ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಚಾಮುಂಡಿ ಬೆಟ್ಟದ ಗ್ರಾಮಸ್ಥರು ಉಪಸ್ಥಿತರಿದ್ದರು.