ದೆಹಲಿ ಅಂಗಳಕ್ಕೆ ತಲುಪಿದ ಚಾಮರಾಜನಗರ ಆಕ್ಸಿಜನ್ ಕೊರತೆ ವಿಚಾರ: ಟ್ವಿಟ್ಟರ್ನಲ್ಲಿ ಟ್ರೆಂಡ್ ಆದ ಕರ್ನಾಟಕ
1 min readಚಾಮರಾಜನಗರ: ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 20ಕ್ಕೂ ಅಧಿಕ ಮಂದಿ ಕೊರೋನಾ ಸೋಂಕಿತರು ಸಾವನಪ್ಪಿರುವ ಘಟನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು ಇದು ಸಾವೋ..? ಅಥವಾ ಕೊಲೆಯೋ..? ಎಂದು ಪ್ರಶ್ನೆ ಮಾಡಿದ್ದಾರೆ.
ದುರಂತದ ಬಗ್ಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಅವರು ಇದು ಸಾವೋ..? ಅಥವಾ ಕೊಲೆಯೋ..? ಈ ದುರಂತದಂತೆ ಮತ್ತೆಷ್ಟು ಜನ ಬಳಲಬೇಕು..? ಮಲಗಿರುವ ವ್ಯವಸ್ಥೆ ಎದ್ದೇಳಬೇಕು ಎಂದು ಸರ್ಕಾರಕ್ಕೆ ರಾಹುಲ್ ಗಾಂಧಿ ಚಾಟಿ ಬೀಸಿದ್ದಾರೆ.
ಟ್ವಿಟ್ಟರ್ನಲ್ಲಿ ಟ್ರೆಂಡ್ ಆದ ಕರ್ನಾಟಕ:
ಚಾಮರಾಜನಗರ ಆಕ್ಸಿಜನ್ ದುರಂತ ರಾಷ್ಟ್ರೀಯ ಘಟನೆಯಾಗಿದ್ದು ಆಕ್ಸಿಜನ್ ದುರಂತದ ಬಗ್ಗೆ ನೆಟ್ಟಿಗರು ಸರಣಿ ಟ್ವಿಟ್ ಮಾಡಿದ್ದಾರೆ. ಇದುವರೆಗು 38 ಸಾವಿರ ಮಂದಿ ಟ್ವಿಟ್ ಮಾಡಿದ್ದು ಕ್ಷಣಕ್ಷಣಕ್ಕು ಹೆಚ್ಚುತ್ತಲೆ ಇರುವ ಟ್ವಿಟ್ಗಳು. karnataka ಹ್ಯಾಶ್ ಟ್ಯಾಗ್ನಲ್ಲಿ ಟ್ರೆಂಡ್ ಆದ ಚಾಮರಾಜನಗರ ಘಟನೆ.