ಬಿಎಸ್ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಕ್ಕೆ ಅಭಿಮಾನಿ ಆತ್ಮಹತ್ಯೆಗೆ ಶರಣು!
1 min readಚಾಮರಾಜನಗರ : ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಕಾರಣ ಮನನೊಂದ ಬಿಎಸ್.ವೈ ಅಭಿಮಾನಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ. 35 ವರ್ಷದ ರವಿ ಎಂಬಾತಬೆ ನೇಣಿಗೆ ಶರಣಾದ ಬಿ.ಎಸ್.ವೈ ಅಭಿಮಾನಿಯಾಗಿದ್ದಾನೆ.
ರವಿ ಖಾಸಗಿ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಬಿ.ಎಸ್.ಯಡಿಯೂರಪ್ಪನವರ ಅಪ್ಪಟ ಅಭಿಮಾನಿಯಾಗಿದ್ದ ರವಿ ನಿನ್ನೆ ಬಿ.ಎಸ್.ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕ್ಷಣದಿಂದ ಸಾಕಷ್ಟು ನೊಂದಿದ್ದ. ಇದರಿಂದ ನಿನ್ನೆ ಹೋಟೆಲ್ ನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಂಗಾಮಿ ಸಿಎಂ ಯಡಿಯೂರಪ್ಪ ಈ ರೀತಿ ಯಾರು ಮಾಡಬೇಡಿ- ಅಭಿಮಾನ ಇರಲಿ ಈ ರೀತಿ ಆತುರದ ನಿರ್ಧಾರ ಬೇಡ ಎಂದಿದ್ದಾರೆ.