ಮಾಜಿ ಸಿಎಂ ಮಗ ಇಂದು ಹಾಲಿ ಸಿಎಂ- ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ!

1 min read

ಮಾಜಿ ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಸಿಎಂ ಆಗಿ ಬಿಜೆಪಿಯ ಶಾಸಕಾಂಗ ಸಭೆಯಲ್ಲಿ ಆಯ್ಕೆಯಾಗಿದ್ದಾರೆ. ಈ‌ ಮೂಲಕ ಕರ್ನಾಟಕದ ನೂತನ ಸಿಎಂ ಆಗಿ ನಾಳೆ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಹೌದು, ಯಡಿಯೂರಪ್ಪ ರಾಜೀನಾಮೆ ಬಳಿಕ ಸಿಎಂ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಎದುರಾಗಿತ್ತು. ಅದರಲ್ಲು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ ಸೇರಿ ಹಲವರು ರೇಸ್‌ನಲ್ಲಿದ್ದರು. ಆದರೆ ಇಂದು ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಬಸವರಾಜ್ ಬೊಮ್ಮಾಯಿ ಹೆಸರು ಸೂಚಿಸುವ ಮೂಲಕ ಮುಂದಿನ 20 ತಿಂಗಳ ಅವಧಿಗೆ ಸಿಎಂ ಆಗಿ ಆಡಳಿತ ನಡೆಸಲಿದ್ದಾರೆ. ಈ‌ ಮೂಲಕ ಮುಂದಿನ ಸಿಎಂ ಯಾರು ಎಂಬುದಕ್ಕೆ ತೆರೆಬಿದ್ದಿದೆ.

ಬಸವರಾಜ್ ಬೊಮ್ಮಾಯಿ

ಮೂಲತಹ ಹುಬ್ಬಳ್ಳಿ ನಿವಾಸಿಗಿರುವ ಬೊಮ್ಮಾಯಿ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಬೊಮ್ಮಾಯಿ ತಂದೆ ಎಸ್.ಆರ್.ಬೊಮ್ಮಾಯಿ ಕೂಡ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು, ರಾಜಕೀಯ ಕುಟುಂಬದಿಂದಲೇ ಬಂದ ಬಸವರಾಜ್ ಬೊಮ್ಮಾಯಿಗೆ ಇದೀಗಾ ಅದೃಷ್ಟ ಖುಲಾಯಿಸಿದ್ದು, ರಾಜ್ಯದ ಸಿರಂ ಆಗಿ ಚುಕ್ಕಾಣಿ ಹಿಡಿಯಲಿದ್ದಾರೆ.

ರಾಜಕೀಯ ಕಾರ್ಯದರ್ಶಿಯಾಗಿದ್ದ ಬೊಮ್ಮಾಯಿ

ಜಿ.ಹೆಚ್‌.ಪಟೇಲರು ಮುಖ್ಯಮಂತ್ರಿ ಆಗಿದ್ದ ವೇಳೆ ಬಸವರಾಜ್ ಬೊಮ್ಮಾಯಿ, ಅವರಿಗೆ ರಾಜಕೀಯ ಕಾರ್ಯದರ್ಶಿ ಆಗಿದ್ದರು. ಬಳಿಕ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭಾಗಿಯಾಗಿ 2 ಬಾರಿ ಪರಿಷತ್‌ಗೆ ಆಯ್ಕೆಯಾದರು.

2008ರಲ್ಲೇ ಮೊದಲ ಬಾರಿಗೆ ಸಚಿವರಾಗಿ ಆಯ್ಕೆ

ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಬೊಮ್ಮಾಯಿ ಮೊದಲ ಬಾರಿಗೆ ಸ್ಪರ್ಧಿಸಿ 5 ವರ್ಷಗಳ ಕಾಲ ಜಲಸಂಪನ್ಮೂಲ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದರು. ಅಲ್ಲದೆ ಕಳೆದ ಬಾರಿಯ ಚುನಾವಣೆಯಲ್ಲಿ ಗೆದ್ದು ಗೃಹಸಚಿವರಾಗಿ ಸೇವೆ ಸಲ್ಲಿಸಿದರು.

ಬಿ.ಎಸ್‌.ಯಡಿಯೂರಪ್ಪ ಆಪ್ತ ಬೊಮ್ಮಾಯಿ

ಹೌದು, ಹಂಗಾಮಿ ಸಿಎಂ ಯಡಿಯೂರಪ್ಪ ಅವರಿಗೆ ಬಲು ಆಪ್ತರಿಗಿದ್ದ ಬಸವರಾಜ್ ಬೊಮ್ಮಾಯಿ ಅವರನ್ನೇ ಸಿಎಂ ಪಟ್ಟಕ್ಕೆ ಏರಿಸಲು ಸದ್ದಿಲ್ಲದೆ ಕಸರತ್ತು ನಡೆದಿತ್ತು. ಅದರಂತೆ ಇವತ್ತು ಪಕ್ಷದ ಶಾಸಕಾಂಗ ಸಭೆಯಲ್ಲು ಕೂಡ ಇದಕ್ಕೆ ಬಿಎಸ್ವೈ ಅನುಮೋದನೆ ನೀಡಿ ಕೇಂದ್ರದ ನಾಯಕರ ಸಮ್ಮುಖದಲ್ಲೇ ಅಂತಿಮವಾಗಿ ಬಸವರಾಜ್ ಬೊಮ್ಮಾಯಿ ಅವರನ್ನೇ ಸಿಎಂ ಆಗಿ ಘೋಷಣೆ ಮಾಡಿದ್ದರು.

ನಾಳೆ ಪ್ರಮಾಣ ವಚನ ಸ್ವೀಕಾರ

ಇನ್ನು ಇಂದೇ ಸಿಎಂ ಅಭ್ಯರ್ಥಿಯಾಗಿ ಬೊಮ್ಮಾಯಿ ಆಯ್ಕೆಯಾದ ಕಾರಣ ನಾಳೆ ರಾಜ್ಯಪಾಲರ ಸಮ್ಮುಖದಲ್ಲಿ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ‌ ಮೂಲಕ ಬಿಜೆಪಿಗೆ ಹೊಸ ಸಿಎಂ ಆಯ್ಕೆ ಕಸರತ್ತಯ ಕೂಡ ಮುಗಿದೆ.

ಬಿಜೆಪಿಗಿದೆ ಸವಾಲಿನ ಹಾದಿ

ಬೊಮ್ಮಾಯಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು ಗೊತ್ತೆ ಇದೆ. ಆದರೆ ಸಿಎಂ ಆಗಿ ಹೇಗೆ ಎಂಬ ಪ್ರಶ್ನೆ ಎಲ್ಲರಿಗು ಇದ್ದೆ ಇದೆ. ಆದರೆ ಇವರು ಸಮರ್ಥವಾಗಿ ಪಕ್ಷ ಹಾಗೂ ಶಾಸಕರನ್ನ ಮುಖಂಡರನ್ನ ಕರೆದುಕೊಂಡು ಹೋಗ್ತಾರಾ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

About Author

Leave a Reply

Your email address will not be published. Required fields are marked *