ಜಪಾನಿನಲ್ಲಿರುವ ತಂದೆಯ ಅಸ್ತಿಯನ್ನು ಸ್ವದೇಶಕ್ಕೆ ತನ್ನಿ! ಸುಭಷ್ ಚಂದ್ರ ಬೋಸ್ ಪುತ್ರಿಯ ಮನವಿ
1 min readಮುಂಬೈ,ಜ.23-ಜಪಾನಿನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಸ್ತಿಯನ್ನು ಭಾರತಕ್ಕೆ ತನ್ನಿ ಎಂದು ಬೋಸ್ ಅವರ ಪುತ್ರಿ ಅನಿತಾ ಬೋಸ್ ಮನವಿ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ನೇತಾಜಿ ಅವರ ಸಾವಿಗೆ ೭೭ ವರ್ಷ ಕಳೆದರೂ, ಜಪಾನಿನಲ್ಲಿ ಇರುವ ಅವರ ಅಸ್ತಿ ಭಾರತಕ್ಕೆ ತರಲು ಸಾಧ್ಯವಾಗಿಲ್ಲ. ನೇತಾಜಿ ಬೋಸ ಅವರ ಪುತ್ರಿಯಾಗಿ ನನಗೆ ನೇತಾಜಿಯವರ ಅಸ್ತಿ ಭಾರತಕ್ಕೆ ಬರುವುದನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ.
ನನ್ನ ತಂದೆಯು ತಮ್ಮ ದೇಶವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಗುವುದು ಅವರ ಕನಸಾಗಿತ್ತು. ಆದರೆ ಅವರಿಗೆ ಅದು ನೋಡಲು ಸಾಧ್ಯವಾಗಲಿಲ್ಲ. ಆದರೂ ಅವರ ಮೃತ್ಯು ನಂತರ ಅವರ ಅಸ್ತಿ ಅವರ ಪ್ರಾಣ ಪ್ರಿಯ ದೇಶಕ್ಕೆ ಮುಟ್ಟಬೇಕು ಎಂದು ಹೇಳಿದ್ದಾರೆ.
ನೇತಾಜಿ ಸುಭಾಷ ಚಂದ್ರ ಬೋಸ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ನೀಡಿರುವ ಯೋಗದಾನವನ್ನು ಉದ್ದೇಶ ಪೂರ್ವಕ ನಿರ್ಲಕ್ಷಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದ ಅವರು, ನೇತಾಜಿ ಅವರ ಸಾವಿನ ವಿವಾದಕ್ಕೆ ಎಳ್ಳು ನೀರು ಬಿಡಬೇಕು. ನೇತಾಜಿಯವರ ಸಾವಿಗಿಂತ ಅವರ ಜೀವನ ಕಾರ್ಯ, ದೇಶಪ್ರೇಮದ ವಿಚಾರ ಎಷ್ಟೋ ದೊಡ್ಡದಾಗಿದೆ. ಅವರ ನೆನಪು ಇಟ್ಟುಕೊಳ್ಳುವ ಅವಶ್ಯಕತೆ ಇದೆ ಎಂದಿದ್ದಾರೆ.