ವಿಶ್ವ ರಕ್ತದಾನಿಗಳ ದಿನದ ಕಾರ್ಯಕ್ರಮ: ರಕ್ತದಾನಿಗಳಿಗೆ ಸನ್ಮಾನ

1 min read

ಮೈಸೂರು: “ಸಮೃದ್ಧಿ ವಾರ್ತೆ ಪತ್ರಿಕೆ” ಹಾಗೂ ರಿಲಯನ್ಸ್ ಇನ್ಸೂರೆನ್ಸ್ ಮತ್ತು “ಒಂದು ಹೆಜ್ಜೆ ದಾನಿಗಳ ಬಳಗದ “ವತಿಯಿಂದ ವಿಶ್ವ ರಕ್ತದಾನಿಗಳ ದಿನದ ಕಾರ್ಯಕ್ರಮದ ಅಂಗವಾಗಿ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಕಾರ್ಯದರ್ಶಿಗಳಾದ ಶ್ರೀನಿವಾಸ್ ಸ್ವಾಮೀಜಿ ಮತ್ತು ಹಿರಿಯ ಪತ್ರಕರ್ತರಾದ ಬನ್ನೂರ್ ರಾಜು ರವರು ಅತಿ ಹೆಚ್ಚು ರಕ್ತದಾನ ಮಾಡಿದ ರಕ್ತ ದಾನಿಗಳಿಗೆ “ಕರುನಾಡ ಸೇನಾನಿ” ಎಂಬ ಪ್ರಸಂಸೆಯನ್ನು ನೀಡಿ ಗೌರವಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಅತಿ ಹೆಚ್ಚು ರಕ್ತದಾನ ಮಾಡಿದ ದಾನಿಗಳು ಅನಿಲ್ ( 10 ಬಾರಿ ರಕ್ತದಾನ ) ಉಮೇಶ್( 10 ಬಾರಿ ರಕ್ತದಾನ ) ಮಧುಸೂದನ್ ( 12 ಬಾರಿ ರಕ್ತದಾನ ) ಅಭಿ( 20 ಬಾರಿ ರಕ್ತದಾನ) ಸುರೇಶ್ ಪ್ರಿಯದರ್ಶಿನಿ ಹೋಟೆಲ್( 10 ಬಾರಿ ರಕ್ತದಾನ) ಮಾಡಿರುತ್ತಾರೆ.

ಈ ಕಾರ್ಯಕ್ರಮದಲ್ಲಿ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿಗಳಾದ “ಶ್ರೀ ಶ್ರೀನಿವಾಸ್ ಸ್ವಾಮಿ “ಬನ್ನೂರ್ ರಾಜು” ರವರು ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷರಾದ “ರಕ್ತದಾನಿ ಮಂಜು” ಸಮೃದ್ಧಿ ವಾರ್ತೆ ಪತ್ರಿಕೆ ಸಂಸ್ಥಾಪಕರಾದ “ಸಹನಾ” ರವರು ರಿಲಯನ್ಸ್ ಇನ್ಸೂರೆನ್ಸ್ ಪಾಲಿಸಿ ಕಂಪನಿಯ “ಅಜಯ್” ರವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *