ಡಾ. ರಾಜ್ ಅಭಿಮಾನಿಯ ಮಗಳ ಮದುವೆಯ ವಿಶೇಷ ಆಮಂತ್ರಣ ಪತ್ರಿಕೆ
1 min readಮೈಸೂರು: ಡಾ. ರಾಜ್ ಅಭಿಮಾನಿಯೊಬ್ಬರು ಮಗಳ ಮದುವೆಗೆ ವಿಶೇಷ ಆಮಂತ್ರಣ ಪತ್ರಿಕೆ ಮುದ್ರಿಸಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಡಾ.ರಾಜ್ ಕುಟುಂಬ ರಾರಾಜಿಸುತ್ತಿದೆ.
ಹೌದು. ನಂಜುಮಳಿಗೆ ನಿವಾಸಿಯಾಗಿರುವ ಮಹದೇವಸ್ವಾಮಿ ಅವರ ಮಗಳ ಮದುವೆ ಇದೆ ಜೂನ್ 23 ರಂದು ನಿಶ್ಚಯವಾಗಿದೆ. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಕನಕ ಸಮುದಾಯ ಭವನದಲ್ಲಿ ಮದುವೆ ನಡೆಯಲಿದೆ. ನಂಜನಗೂಡಿನ ಸುಪ್ರೀತ್. ಹೆಚ್. ಸುರೇಶ್‌ರನ್ನು ಕಾವ್ಯ ವರಿಸಲಿದ್ದಾರೆ.
ಈ ವಿಶೇಷ ಆಮಂತ್ರಣ ಪತ್ರಿಕೆಯಲ್ಲಿ ಡಾ ರಾಜ್ ಭಾವಚಿತ್ರದೊಂದಿಗೆ ಇಡೀ ಕುಟುಂಬದ ಆಶೀರ್ವಾದ ಮಹದೇವಸ್ವಾಮಿ ಕೋರಿದ್ದಾರೆ. ಡಾ.ರಾಜ್ ದಂಪತಿ, ಡಾ.ಶಿವರಾಜ್ ಕುಮಾರ್ ದಂಪತಿ , ರಾಘವೇಂದ್ರ ರಾಜ್ ಕುಮಾರ್ ದಂಪತಿ, ಪುನೀತ್ ರಾಜ್ ಕುಮಾರ್ ದಂಪತಿಯ ಭಾವಚಿತ್ರಗಳನ್ನ ಮದುವೆ ಕರೆಯೋಲೆಯಲ್ಲಿ ಮುದ್ರಿಸಿದ್ದಾರೆ ಮಹದೇವಸ್ವಾಮಿ.
ಅಲ್ಲದೆ ಡಾ.ರಾಜ್ ಕುಮಾರ್ ಸಂಘದ ರಾಜ್ಯಾಧ್ಯಕ್ಷರಾದ ಸಾ.ರಾ.ಗೋವಿಂದ್ ಭಾವಚಿತ್ರ ಸಹ ಮುದ್ರಣ ಮಾಡಲಾಗಿದೆ.