September 9, 2024

ಜೀವಧಾರ ರಕ್ತನಿಧಿ ಕೇಂದ್ರ, ರಕ್ತದಾನ ಮಹಾದಾನ ಗೋಭಕ್ತ ಸಂಘಟನೆಯಿಂದ ರಕ್ತದಾನ ಕಾರ್ಯಕ್ರಮ

1 min read

ಮೈಸೂರು: ಕೊವಿಡ್ 19ರ, 2ನೇಅಲೆಯಿಂದ ನಾಗರೀಕರು ಆರೋಗ್ಯವಾಗಿರುವಂತೆ ರಕ್ಷಿಸಲು ಆರೋಗ್ಯ ಇಲಾಖೆಯಿಂದ ಯುವಸಮೂಹಕ್ಕೆ ಕೋವಿಡ್ ಶೀಲ್ಡ್ ಲಸಿಕೆ ನೀಡುತ್ತಿದ್ದು “ಯುವಕರೇ ಮೊದಲು ರಕ್ತನೀಡಿ ನಂತರ ಲಸಿಕೆ ಪಡೆಯಿರಿ” ರಕ್ತದಾನ ಕಾರ್ಯಕ್ರಮವನ್ನು ಜೀವಧಾರ ರಕ್ತನಿಧಿ ಕೇಂದ್ರ ಮತ್ತು ರಕ್ತದಾನ ಮಹಾದಾನ ಗೋಭಕ್ತ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಹಿಳಾ ರಾಜ್ಯಾಧ್ಯಕ್ಷೆಯಾದ ಡಾ. ಪುಷ್ಪ ಅಮರ್ ನಾಥ್ ರವರು ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು, 80ಮಂದಿ ಯುವಕರ ಯುವತಿಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಇದೇ ಸಂಧರ್ಭದಲ್ಲಿ ಕೆಪಿಸಿಸಿ ರಾಜ್ಯ ಮಹಿಳಾಧ್ಯಕ್ಷೆ ಡಾ. ಪುಷ್ಪ ಅಮರ್ ನಾಥ್ ರವರು ಮಾತನಾಡಿ ಕೋವಿಡ್ ತಡೆಗಟ್ಟಲು ರಾಜ್ಯ ಲಾಕ್ ಡೌನ್ ಆಗಿರುವ ಪರಿಣಾಮ ನಾಗರೀಕರಿಗೆ ಆರೋಗ್ಯ ಚಿಕಿತ್ಸೆ ಸಕಾಲಕ್ಕೆ ಸಿಗದೇ ಪರಿತಪಿಸುತ್ತಿದ್ದಾರೆ, ಹೆರಿಗೆ ಶಸ್ತ್ರಚಿಕಿತ್ಸೆ ಸೇರಿದಂತೆ ಅಪಘಾತಗಳು ಸಂಭವಿಸಿದಾಗ ತುರ್ತು ರಕ್ತ ಅವಶ್ಯಕವಿರುತ್ತದೆ, ರಕ್ತಶೇಖರಣೆ 30%ಗಿಂತ ಕುಸಿದಿದ್ದು ಇದನ್ನ ಮನಗೊಂಡು ಯುವ ಸಮೂಹ ರಕ್ತದಾನ ಮಾಡಿದರೇ ಏಕಕಾಲಕ್ಕೆ ಮೂರು ಜೀವವನ್ನ ಉಳಿಸಬಹುದು, ಲಸಿಕೆ ಪಡೆಯುವುದಕ್ಕೂ ಮುನ್ನ ಯುವಕರು ಹೆಚ್ಚಾಗಿ ರಕ್ತದಾನ ಮಾಡಲು ಮುಂದಾಗಬೇಕು, ಇಂದು ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ರವರ ಮನವಿ ಮೇರೆಗೆ ನಾನು ಸಹ ರಕ್ತದಾನ ಮಾಡಿದ್ದೇನೆ, ಕೋವಿನ್ ಪೋರ್ಟಲ್ ನಲ್ಲಿ ಯುವಕರು ಈಗಾಗಲೇ ನೊಂದಣಿ ಮಾಡಿಕೊಂಡಿದ್ದು ಅದರಲ್ಲಿ ರಕ್ತದಾನ ಮಾಡಿದವರಿಗೆ ಲಸಿಕೆ ನೀಡಲು ಮೊದಲ ಆದ್ಯತೆಕೊಡಲು ಸರ್ಕಾರ ಮುಂದಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ರಾಜ್ಯಾಧ್ಯಕ್ಷರಾದ ಡಾ. ಪುಷ್ಪಾ ಅಮರ್ ನಾಥ್ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಉದ್ದಿಮೆ ಅಪೂರ್ವ ಸುರೇಶ್ ,ಸ್ಯಾಮ್ಯುಯೆಲ್ ವಿಲ್ಸನ್ ,ಡಾ॥ಮಮತಾ ,ಡಾ॥ರಾಧಾ ,

ತೇರಾಪಂತ್ ಯುವಕ ರ ಬಳಗದ ಅಧ್ಯಕ್ಷರಾದ ದಿನೇಶ್ ದಕ್ ,ಸಿಜಲ್ ಕೊಠಾರಿ ,ದೇವೇಂದರ್ , ಆನಂದ್ ,ಹಾಗೂ ಇನ್ನಿತರರು ಹಾಜರಿದ್ದರು

About Author

Leave a Reply

Your email address will not be published. Required fields are marked *