ಬಿಗ್ ಬಾಸ್‌ನಿಂದ ಹೊರಬಂದ ಮೇಲೆ ಮತ್ತೇ ತಮ್ಮ ಹಳೆಯ ಕೆಲಸ ಮುಂದುವರೆಸಿದ ಹಿರಿಯ ನಟ ಶಂಕರ್ ಅಶ್ವಥ್
1 min readಮೈಸೂರು: ಬಿಗ್ ಬಾಸ್‌ನಿಂದ ಹೊರಬಂದ ಹಿರಿಯ ನಟ ಶಂಕರ್ ಅಶ್ವಥ್ ಮತ್ತೇ ತಮ್ಮ ಹಳೆಯ ಕೆಲಸ ಮುಂದುವರೆಸಿದ್ದಾರೆ. ಮೈಸೂರಿನ ಸರಸ್ವತಿ ಪುರಂನ ತಮ್ಮ ನಿವಾಸದಿಂದ ಮರಳಿ ತಮ್ಮ ಕ್ಯಾಟರಿಂಗ್ ಕೆಲಸ ಮುಂದುವರೆಸಿದ್ದು ಇದಕ್ಕೆ ಪತ್ನಿ ಹಾಗೂ ಪುತ್ರ ಇಬ್ಬರು ಸಾಥ್ ನೀಡಿದ್ದಾರೆ.
ಬಿಗ್ ಬಾಸ್ ನಲ್ಲಿದ್ದಷ್ಟ ದಿನಗಳು ಅಲ್ಲಿ ಉಳಿಯಲು ಹೋರಾಟ ನಡೆಸಿದ ಅವರು ಮರಳಿ ಬಾಳಿಗೆ ಬಂದ ಮೇಲೆ ಪ್ರತಿಕ್ಷಣ ಹೋರಾಟ ಮಾಡುತ್ತಿರುವೇ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಲಾಕ್ ಡೌನ್ ಆದ ಮೇಲೆ ಗ್ರಾಹಕರಿಗೆ ಊಟ ತಿಂಡಿ ಬೇಗನೆ ತಲುಪಿಸುವ ಕಾರಣ ನಾನೂ ಕೈಜೋಡಿಸಿದೆ.
ದುಡಿಮೆ ಯಾವುದಾದರೇನು ಮರ್ಯಾದೆ ಮುಖ್ಯ ಎಂದು ಸಾಲುಗಳನ್ನ ಹಾಕಿಕೊಂಡಿದ್ದು ಮತ್ತೇ ಹಸಿದವರಿಗೆ ಊಟ ಕೊಟ್ಟು ಬರುವ ಕಾಯಕದಲ್ಲಿ ತೊಡಗಿದ್ದಾರೆ.