ಈ ಬಾರಿ ಬಸವ ಜಯಂತಿಯನ್ನ ಸುತ್ತೂರು ಶಾಖಾ ಮಠದಲ್ಲಿ ಸರಳವಾಗಿ ಆಚರಿಸಲು ತೀರ್ಮಾನ
1 min readಮೈಸೂರು: ಈ ಬಾರಿ ಬಸವ ಜಯಂತಿಯನ್ನ ಸುತ್ತೂರು ಶಾಖಾ ಮಠದಲ್ಲಿ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಅದರಂತೆ ಶ್ರೀಮಠದಲ್ಲಿರು ಸಾಧಕರು ಹಾಗೂ ಸೇವಾ ಸಿಬ್ಬಂದಿಗಳು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉಪನ್ಯಾಸ ಕಾರ್ಯಕ್ರಮ ನೀಡಲಿದ್ದಾರೆ.
ಅಲ್ಲದೆ ಭಕ್ತರಿಗೆ ಮಠಕ್ಕೆ ನಿರ್ಬಂಧ ವಿಧಿಸಿದ್ದು ಮನೆಯಲ್ಲಿಯೇ ಇದ್ದು ಬಸವ ಜಯಂತಿ ಆಚರಿಸಿ ಎಂದು ಸ್ವಾಮೀಜಿಗಳು ಕರೆ ನೀಡಿದ್ದಾರೆ.